ಈ ಯುವತಿಯ ಕೈಯಲ್ಲರಳಿದ ಚಿತ್ರ ನೋಡಿದ್ರೆ ನೀವು ಕ್ಲೀನ್ ಬೋಲ್ಡ್ : ಇದು ಕುಂದಾಪ್ರದ ಕಲಾಚತುರೆ ಪಾವನ ಕತೆ
♦ ಮಂಜುಳಾ . ಜಿ . ತೆಕ್ಕಟ್ಟೆ ಕರುನಾಡೇ ಕಲೆಗಳ ತವರೂರು. ಇಲ್ಲಿ ಕಲಾಮಾತೆಯ ಕಂದಮ್ಮಗಳಾಗಿ ಬೆಳೆದು ಸಾಧಿಸಿದವರಿಗೇನೂ ಕಡಿಮೆ ಇಲ್ಲ. ಎಲೆ ಮರೆಯ ಕಾಯಿಗಳಂತಿದ್ದುಕೊಂಡು ಸಾಧನೆ ಮಾಡಿರುವ ಪ್ರತಿಭಾ ಸಾಧಕರನ್ನು ಹುಡುಕುತ್ತಾ ಹೋದಾಗ ಸಿಕ್ಕಿದ್ದು ಕುಂದಾಪುರದ ಬೈಲೂರಿನ ಯುವ ಪ್ರತಿಭೆ ಪಾವನಾ. ಚಿತ್ರ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಾ, ಇತರ ಕಲಾವಿದರಿಗೂ ಸ್ಪೂರ್ತಿಯಾಗಿರೋ ಈ ಯುವ ಚಿತ್ರಗಾರ್ತಿಯ ಕತೆ ಕೇಳೊಣ ಬನ್ನಿ. ವ್ಯಕ್ತಿ ಚಿತ್ರ ಕಲಾವಿದೆಯಾಗಿ ಗುರುತಿಸಲ್ಪಟ್ಟು ಈ ಕ್ಷೇತ್ರದಲ್ಲಿ ತನ್ನದೇ ಒಂದು ಮಾರ್ಗ […]
ದುಡಿಮೆಯ ನಡುವೆ ಅರಳುತ್ತಿರೋ ಈ ಹೂವಿಗೆ ಬೇಕಿದೆ ನೆರವಿನ ಕೈಗಳು: ಈ ಪ್ರತಿಭಾವಂತ ಹುಡುಗಿಯ ಪದವಿ ಕನಸು ನನಸು ಮಾಡುವಿರಾ?
ಮನೆಯ ಕಷ್ಟಕ್ಕೆ ಹೆಗಲೆಣೆಯಾಗಿ ದುಡಿಮೆ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ, ಧುತ್ತನೇ ಒದಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ಈ ಹುಡುಗಿಗೆ. ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ದುಡಿದ ಇವಳು ಶೇ. 94 ಗಳಿಸಿದ್ದಾಳೆ. ಹೌದು. ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ ಅನ್ನೋ ಪ್ರತಿಭಾವಂತೆ ಹುಡುಗಿಯ ಕತೆ. ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ನ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡ […]
ಇವನೇ ನೋಡಿ ನಿಜವಾದ ಡ್ರೋನ್ ಮ್ಯಾನ್ : ಹಠ ಹಿಡಿದು ಡ್ರೋನ್ ಹಾರಿಸಿದ ಉಡುಪಿಯ ಈ ಹುಡುಗನ ಕತೆ ಕೇಳಿ!
ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಕೇಳಲ್ಪಡುತ್ತವೆ. ಅದಕ್ಕೆ ಪರ್ಯಾಯ ವಸ್ತುವಾಗಿ ಬೆಳೆದದ್ದು ಇದೇ ಡ್ರೋನ್. ಈಗ ಹೇಳ್ತೇವೆ ಕೇಳಿ ಡ್ರೋನ್ ತಯಾರಿಸಿದ ಉಡುಪಿಯ ಹದಿಹರೆಯದ ಹುಡುಗನ ಕಥೆ. ಇವನು ಮಾಡಿದ ಕಾರ್ಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಇವನ ಹೆಸರು ಗ್ಲೆನ್ ರೆಬೆಲ್ಲೊ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ. 2016 […]
ಕಾರ್ಕಳ:ನಿಸರ್ಗ ಪ್ರಿಯರ ಮನಸ್ಸು ಕುಣಿಯುವಂತೆ ಅರಳಿದಳು ಬ್ರಹ್ಮ ಕಮಲ
ಕಾರ್ಕಳ:ಮಳೆಗಾಲಕ್ಕೆ ಬ್ರಹ್ಮ ಕಮಲ ಅರಳುವುದನ್ನು ನೋಡೋದೇ ಚೆಂದ. ಆ ಹೂವಿನ ಚಂದಕ್ಕೆ ಮರುಳಾಗದವರಿಲ್ಲ.ಆಕಾಶದಲ್ಲಿ ಚಂದ್ರ ಮೂಡಿದಂತೆ ಗಿಡದಲ್ಲಿ ಇರುಳು ಮೂಡುವ ಬ್ರಹ್ಮ ಕಮಲ ಕಾರ್ಕಳದ ಹಿರಿಯಂಗಡಿ ಸಮೀಪವಿರುವ ಈಶ್ವರೀಯ ಬ್ರಹ್ಮ ಕುಮಾರಿ ಕೇಂದ್ರದ ಪರಿಸರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ಅರಳಿದ ಚಿತ್ರವನ್ನು ಉಡುಪಿXPRESS ಗೆ ಕಳುಹಿಸಿಕೊಟ್ಟಿದ್ದಾರೆ ಶಿವ ಎಡ್ವಟೈಸರ್ಸ್ ನ ಮಾಲಕ ವರದರಾಯ ಪ್ರಭು
ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರವೆಂದರೆ ಭಾರೀ “ಸ್ನೇಹ” ಎಳೆಯ ಕಂಗಳಿಗೆ ಪರಿಸರ ಪಾಠ ಮಾಡ್ತಿದೆ ಸುಳ್ಯದ ಸ್ನೇಹ ಶಾಲೆ
ನಮಗೋಸ್ಕರ ಶುದ್ದ ಗಾಳಿ, ನೀರು, ಬದುಕು ನೀಡುವ ಪರಿಸರವನ್ನು ಕಾಪಾಡದಿದ್ದರೆ ನಮಗೆ ಬದುಕೇ ಇಲ್ಲ. ನಮಗೆ ಎಲ್ಲದ್ದಕ್ಕೂ ಪರಿಸರ ಬೇಕು. ಆದರೆ ಪರಿಸರವನ್ನು ಪ್ರೀತಿಸುವುದರಲ್ಲಿ ನಾವು ಹಿಂದೇಟು ಹಾಕುತ್ತಿದ್ದೇವೆ. ಅದರಲ್ಲೂ ಪರಿಸರ ಶಿಕ್ಷಣ ಕೊಡಬೇಕಾದ ಶಿಕ್ಷಣ ಸಂಸ್ಥೆಗಳು, ಪರಿಸರ ದಿನಕ್ಕೊಮ್ಮೆ ಗಿಡ ನೆಟ್ಟು ಆಮೇಲೆ ಪರಿಸರ ಪ್ರೀತಿಯನ್ನೇ ಮರೆತುಬಿಡುತ್ತವೆ. ಆದರೆ ಇಲ್ಲೊಂದು ಅಪರೂಪದ ಶಿಕ್ಷಣ ಸಂಸ್ಥೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಆ ಮೂಲಕ ಪರಿಸರ ರಕ್ಷಣೆಗೆ ಸತತ ಹೆಗಲು ಕೊಡುತ್ತಲೇ ಇದೆ. ಈ ಶಾಲೆ […]