ಹವ್ಯಾಸಿ ನಾಣ್ಯ ಸಂಗ್ರಹಕಾರ ಮಂಜುನಾಥ್ ಸಂಗ್ರಹದಲ್ಲಿದೆ ರೂ.20 ನಾಣ್ಯ
ಪ್ರಾಚ್ಯ ವಸ್ತು ಸಂಗ್ರಾಹಕಾರರಾದ ಕುಕ್ಕುಂದೂರಿನ ಕೆ. ಮಂಜುನಾಥ್ ಇವರ ಹವ್ಯಾಸಿ ಸಂಗ್ರಹಕ್ಕೆ ಎಂದಿನಂತೆ ಈ ಬಾರಿಯೂ ಕೂಡಾ ಹೊಸ ಮಾದರಿ ಹಾಗೂ ವಿನ್ಯಾಸದ ರೂಪಾಯಿ 2, 5, 10 ಮತ್ತು ಭಾರತದ ನಾಣ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಲಾವಣೆಗೆ ಬಿಡುವಂತಹ ರೂ. 20ರ ನಾಣ್ಯವನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ. ಈ ನಾಣ್ಯವು ಸದ್ಯದಲ್ಲೇ ಸಾರ್ವಜನಿಕರಿಗೆ ಚಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಡುತ್ತದೆ. ಮೂಲತಃ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ತನ್ನ ಹವ್ಯಾಸಿ ಸಂಗ್ರಹದಲ್ಲಿ ಈ ಮೊದಲು ಕೂಡ […]
ಈ ಪರಿಸರ ಸ್ನೇಹಿ ಬಿದಿರಿನ ಬುಟ್ಟಿ, ಸೇರು ಖರೀದಿಸಿ: ಬಡ ಕುಟುಂಬದ ಬದುಕಿನ ಬುಟ್ಟಿಗೆ ಖುಷಿ ತುಂಬಿಸಿ!
ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪ ನೂರಾರು ಬಿದಿರಿನ ಉತ್ಪನ್ನಗಳನ್ನು ಮಾಡಿ ಅದನ್ನೇ ನಂಬಿ ಕೂತಿದೆ. ಈ ಕುಟುಂಬ ಇದೀಗ ಸಾಂಪ್ರದಾಯಿಕ ಬೆತ್ತದ ಬುಟ್ಟಿ, ಸೇರು,ಅಕ್ಕಿ ತಡಪೆಗಳನ್ನು ತಯಾರಿಸಿಟ್ಟುಕೊಂಡು ಯಾರಾದರೂ ಕೊಳ್ಳುವರಾ ಅಂತ ಕಾಯುತ್ತಾ ಕೂತಿದ್ದಾರೆ. ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ವಂಶ ಅವರದ್ದು. ಇವರ ಹೆಸರು ಸುಧಾಕರಣ್ಣ, ಕೋಲ ಮೊದಲಾದ ವೇಷಗಳನ್ನು ಹಾಕುತ್ತ ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ಹೆಸರನ್ನು ಪಡೆದ ವ್ಯಕ್ತಿ […]
ರಂಗದಲ್ಲಿ ಮೋಹಕವಾಗಿ ಕುಣಿತಾರೆ, ಈ ಯಕ್ಷತಾರೆ : ನಾಟ್ಯಮಯೂರಿ, ಯಕ್ಷ ಕುವರಿ ಮಣಿಪಾಲದ ಸಂಧ್ಯಾ ನಾಯಕ್
◊ ದೀಪಕ್ ಕಾಮತ್ ಎಳ್ಳಾರೆ ಬಾಲ್ಯದಿಂದಲೇ ಯಕ್ಷಗಾನ ಅಂದರೆ ಅತೀವ ಪ್ರೀತಿ. ಯಕ್ಷಗಾನದ ಮಾತುಗಾರಿಕೆ, ಕುಣಿತ ನೋಡಿ ಆಕರ್ಷಣೆಗೆ ಒಳಗಾದ ಸಂಧ್ಯಾ ಯಕ್ಷಗಾನವನ್ನು ಕಲಿತು ಯಕ್ಷರಂಗದಲ್ಲಿ ಇಂದು ಸಾಧನೆ ಮಾಡುತ್ತಿರುವ ಯುವ ಪ್ರತಿಭೆ. ಉಡುಪಿ ಜಿಲ್ಲೆಯ ಮಣಿಪಾಲದ ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ದಂಪತಿಗಳ ಮಗಳಾದ ಸಂಧ್ಯಾ ನಾಯಕ್ ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯಿಂದ ಪ್ರಭಾವಿತಗೊಂಡು ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಖ್ಯಾತ ಭಾಗವತ ಪ್ರಸಾದ್ ಮೊಗೆಬೆಟ್ಟು ಇವರಲ್ಲಿ ಯಕ್ಷರಂಗದ ಪ್ರಾಥಮಿಕ ಶಿಕ್ಷಣವನ್ನು ಪಡೆದರು. MPUC ಯಲ್ಲಿ ಕಲಿಯುತ್ತಿರುವಾಗ […]
ಯಾವ ಬಿರುದು, ಸಮ್ಮಾನವನ್ನೂ ಬಯಸದೆ ಶೈಕ್ಷಣಿಕ ಕ್ರಾಂತಿ ಮಾಡ್ತಿದ್ದಾರೆ ಉಡುಪಿಯ ಡಾ. ಮಹಾಬಲೇಶ್ವರ ರಾವ್
ಐದು ಕೃತಿಗಳಿಗೆ ಐದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ (ಇದೊಂದು ದಾಖಲೆ. ಯಾರಿಗೂ ಹೀಗೆ ಕಳೆದ ಏಳೆಂಟು ವರ್ಷಗಳಲ್ಲಿ ಕಸಾಪದ ದತ್ತಿನಿಧಿ ಬಹುಮಾನ ಬಂದಿಲ್ಲ), ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟಿನ ಜೀವಮಾನ ಸಾಧನೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉಪಾಧ್ಯಾಯ ಸಮ್ಮಾನ್ ಗೌರವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾ. ದತ್ತಿನಿಧಿ ಪುರಸ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನ, […]
ಕಲರ್ ಫುಲ್ ಲೋಕದ ಕನಸು ಹಿಡಿಯಲು ಹೊರಟ್ರು ಕರಾವಳಿಯ ಕ್ರೀಡಾ ಚತುರ ವಿಘ್ನೇಶ್ ಶೆಟ್ಟಿ
◊ ರಮ್ಯ ಬೋಳಂತೂರು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಲವಾರು ಮಂದಿ ಇಂದು ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡು ಮಿಂಚುತ್ತಿದ್ದಾರೆ. ಅದರಲ್ಲಿಯೂ ಕರಾವಳಿಯ ಪ್ರತಿಭೆಗಳು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಜ್ಜೆಯನ್ನಿರಿಸಿ ಮುಂದೆ ಸಾಗುತ್ತಿದ್ದಾರೆ. ಎಳೆವೆಯಲ್ಲಿ ಕ್ರೀಡಾ ಕ್ಷೇತ್ರವನ್ನು ಹಚ್ಚಿಕೊಂಡು ಸೈನಿಕನಾಗಬೇಕೆಂದು ಕನಸ್ಸು ಕಂಡಿದ್ದ ವಿಘ್ನೇಶ್ ಶೆಟ್ಟಿ ಪ್ರಸ್ತುತ ಕನ್ನಡ ಚಲನಚಿತ್ರರಂಗದಲ್ಲಿ ನಿರ್ದೇಶಕ, ಛಾಯಾಗ್ರಹಣ, ಕ್ಯಾಮರ ಮ್ಯಾನ್, ಕ್ಯಾಮರ ಫೋಕಸ್ ಪಿಲ್ಲರ್ ಆಗಿ ಬಣ್ಣದ ಲೋಕದಲ್ಲಿ ಒಂದಷ್ಟು ಸಾಧನೆ ಮಾಡುವ ಕನಸು ಹೊತ್ತುಕೊಂಡು ಸಾಗುತ್ತಿದ್ದಾರೆ. ಕ್ರೀಡೆಯಲ್ಲಿ ಮಾಸ್ಟರ್ ವಿಘ್ನೇಶ್ ಪಿಯುಸಿಯಲ್ಲಿ […]