udupixpress
Home Trending ಕಲರ್ ಫುಲ್ ಲೋಕದ ಕನಸು ಹಿಡಿಯಲು ಹೊರಟ್ರು ಕರಾವಳಿಯ ಕ್ರೀಡಾ ಚತುರ ವಿಘ್ನೇಶ್ ಶೆಟ್ಟಿ

ಕಲರ್ ಫುಲ್ ಲೋಕದ ಕನಸು ಹಿಡಿಯಲು ಹೊರಟ್ರು ಕರಾವಳಿಯ ಕ್ರೀಡಾ ಚತುರ ವಿಘ್ನೇಶ್ ಶೆಟ್ಟಿ

◊ ರಮ್ಯ ಬೋಳಂತೂರು
ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಲವಾರು ಮಂದಿ ಇಂದು ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡು‌ ಮಿಂಚುತ್ತಿದ್ದಾರೆ. ಅದರಲ್ಲಿಯೂ ಕರಾವಳಿಯ ಪ್ರತಿಭೆಗಳು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಜ್ಜೆಯನ್ನಿರಿಸಿ‌ ಮುಂದೆ ಸಾಗುತ್ತಿದ್ದಾರೆ.
ಎಳೆವೆಯಲ್ಲಿ ಕ್ರೀಡಾ ಕ್ಷೇತ್ರವನ್ನು ಹಚ್ಚಿಕೊಂಡು ಸೈನಿಕನಾಗಬೇಕೆಂದು ಕನಸ್ಸು ಕಂಡಿದ್ದ ವಿಘ್ನೇಶ್ ಶೆಟ್ಟಿ ಪ್ರಸ್ತುತ ಕನ್ನಡ ಚಲನಚಿತ್ರರಂಗದಲ್ಲಿ ನಿರ್ದೇಶಕ, ಛಾಯಾಗ್ರಹಣ, ಕ್ಯಾಮರ ಮ್ಯಾನ್, ಕ್ಯಾಮರ ಫೋಕಸ್ ಪಿಲ್ಲರ್ ಆಗಿ ಬಣ್ಣದ ಲೋಕದಲ್ಲಿ ಒಂದಷ್ಟು ಸಾಧನೆ ಮಾಡುವ ಕನಸು‌‌ ಹೊತ್ತುಕೊಂಡು ಸಾಗುತ್ತಿದ್ದಾರೆ.

ಕ್ರೀಡೆಯಲ್ಲಿ ಮಾಸ್ಟರ್

ವಿಘ್ನೇಶ್ ಪಿಯುಸಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಜಾವಲಿಂಗ್ ಥ್ರೋ ನಲ್ಲಿ ವಿಶಾಖಪಟ್ಟಣ ನಡೆದ ಅಂತರ್ ಜಿಲ್ಲಾ ಮಟ್ಟದಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದರೆ. ರಾಜ್ಯಮಟ್ಟದಲ್ಲಿ ಕೂಡಾ ಹಲವು ಬಾರಿ ಭಾಗವಹಿಸಿದ್ದಾರೆ. ಇವರು ಬಹುಮುಖ ಪತ್ರಿಭೆಯಾಗಿದ್ದು ಚಿತ್ರಕಲೆ, ಸಂಗೀತ, ಡ್ಯಾನ್ಸಿಂಗ್ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಜಾವಲಿಂಗ್ ಥ್ರೋ, ಶಾರ್ಟ್ಪುಟ್ , ಚಕ್ರ ಎಸೆತ, ಗುಂಡು ಎಸೆತ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ನಡೆದ ದಸರಾ ಕ್ರೀಡೆಯಲ್ಲಿ ಜಾವಲಿಂಗ್ ಥ್ರೋನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರು. ಪ್ರೌಢ ಶಾಲೆಯಲ್ಲಿ ಇರುವಾಗ ಉಡುಪಿಯ ಅಜ್ಜರಕಾಡ್ ನಲ್ಲಿ ನಡೆದ ತಾಲೂಕು ಮಟ್ಟದಲ್ಲಿ ಜಾವಲಿಂಗ್ ನಲ್ಲೂ ಪ್ರಥಮ ಸ್ಥಾನವನ್ನು ಬಾಚಿದ್ದರು. ಇವರ ಕ್ರೀಡಾ ಕ್ಷೇತ್ರಕ್ಕೆ ಬೆಂಬಲವಾಗಿ ನಿಂತ ಭಾಸ್ಕರ್ ಪೂಜಾರಿ ಮತ್ತು ಸದಾನಂದ ಶೆಟ್ಟಿ ಇವರ ಸಾಧನೆಯ ಹಾದಿಗೆ ಪೋತ್ಸಾಹ ನೀಡಿದ್ದಾರೆ.

ಎನ್.ಎನ್.ಎಸ್, ರೋವಾರ್ ಮತ್ತು ರೆಂಜಸ್ಸ್ ನ್ಯಾಷನ್ ಜಾಂಬೂರಿ ಕ್ಯಾಂಪ್‌ನಲ್ಲಿ ನ್ಯಾಷನ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದಾರೆ ವಿಘ್ನೇಶ್. ಜಾನಪದವನ್ನು ಉಳಿಸಿಬೇಕು ಅದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಮ್ಮದೇ ಆದ ಸನ ಜಾನಪದ ನೃತ್ಯ ಕೇಂದ್ರವನ್ನು ರಚಿಸಿ ಕಂಗೀಲು, ವೀರಗಾಸೆ, ಕರಗಕೋಲಾಟ ಹೀಗೆ ಹಲವಾರು ಜಾನಪದ ನೃತ್ಯವನ್ನು ಮೈಸೂರು, ಬೆಂಗಳೂರು, ಹುಬಳ್ಳಿ, ಇತ್ಯಾದಿ ಕಡೆಗಳಲ್ಲಿ ನೃತ್ಯವನ್ನು ಪ್ರದರ್ಶಿಸಿ, ಪ್ರಶಸ್ತಿಗಳನ್ನು ಬಾಚಿಕೊಂಡು ಸನ್ಮಾನಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ಜೊತಗೆ ಎಪ್ಪತ್ಮೂರು ಬಾರಿ ಹುಲಿವೇಷ ಹಾಕಿದ್ದಾರೆ.

ಸಿನಿಗನಸು ಹಿಡಿಯಲು ಹೊರಟ್ರು:

ವಿಘ್ನೇಶ್ ಶೆಟ್ಟಿ ಸೈನಿಕನಾಗಬೇಕೆಂಬ ಕನಸ್ಸು ಹೊತ್ತುಕೊಂಡಿದ್ದರು. ವಿದ್ಯಾಭ್ಯಾಸದ ನಂತರ ಇವರ ಅಣ್ಣ ಪ್ರಶಾಂತ್ ಕೆ. ಶೆಟ್ಟಿ, ವಿಘ್ನೇಶ್ ಅವರನ್ನು ಚಲನಚಿತ್ರ ರಂಗಕ್ಕೆ ಬರುವಂತೆ ಪ್ರೇರೇಪಿಸಿದರು.

ಅಲ್ಲಿಂದ ವಿಘ್ನೇಶ್ ಅವರಿಗೆ ಚಲನಚಿತ್ರ ರಂಗದಲ್ಲಿ ನಿರ್ದೇಶಕ, ಛಾಯಾಗ್ರಹಣ, ಕ್ಯಾಮಾರ ಮ್ಯಾನ್, ಕ್ಯಾಮರ ಫೋಕಸ್ ಪಿಲ್ಲರ್, ಅವಕಾಶ ದೊರಕಿತ್ತು. ವಿಘ್ನೇಶ್ ಹಲವಾರು ಚಲನಚಿತ್ರವನ್ನು ಚಿತ್ರಿಕರೀಸಿದ್ದಾರೆ. ಜೊತೆಗೆ ಎರಡು ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ.

ಇವರು ಚಿತ್ರೀಕರಿಸಿದ ಮೊದಲ ಸಿನಿಮಾ ಮಹಿರ. ನಂತರ ಅನೇಕ ಚಿತ್ರಗಳನ್ನು ಚಿತ್ರಿಕರೀಸಿದ್ದಾರೆ ವಿಘ್ನೇಶ್. ಸೀತಾರಾಮಕಲ್ಯಾಣ, ಎಂಥ ಕಥೆ ಮಾರಾಯ, ಕೆ.ಜಿ.ಎಫ್ ೧,ಅವನೇ ಶ್ರೀಮನ್ನಾರಾಯಣ, ಕವಲು ದಾರಿ, ಪಾಫ್ ಕಾರ್ನ್ ಮಂಕಿ ಟೈಗರ್, ಅಮ್ಮ ಐ ಲವ್‌ಯು, ತಾಯಿ ತಕ್ಕ ಮಗ, ನನ ಪ್ರಕಾರ ಹೀಗೆ ಹಲವಾರು ಚಲನಚಿತ್ರದಲ್ಲಿ ಕೆಲಸ ಮಾಡಿದ ಸಾಧನೆ ವಿಘ್ನೇಶ್ ಅವರದ್ದು.

ಪದವಿ ಶಿಕ್ಷಣವನ್ನು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕದಲ್ಲಿ ಪೂರೈಸಿ ಪ್ರಸ್ತುತ ಕನ್ನಡ ಚಲನಚಿತ್ರರಂಗದಲ್ಲಿ ನಿರ್ದೇಶಕ, ಛಾಯಾಗ್ರಹ, ಕ್ಯಾಮರ ಮ್ಯಾನ್, ಕ್ಯಾಮರ ಫೋಕಸ್ ಪಿಲ್ಲರ್ ಆಗಿ ಮಿಂಚುತ್ತಿರೋ ಹಿರಿಯಡ್ಕದ ಈ ಕನಸುಗಾರನಿಗೆ ಕನ್ನಡ ಸಿನಿಮಾದಲ್ಲಿ ಇನ್ನಷ್ಟು ಸಾಧನೆ ಮಾಡುವ ಕನಸಿದೆ.


ರಮ್ಯ ಬೋಳಂತೂರು