ನೃತ್ಯ-ಯೋಗ ಲೋಕದ ಪುಟಾಣಿ ಕಿನ್ನರಿ ಇವಳು: ಕುಂದಾಪುರದ ಮಹಿಮ ಅನ್ನೋ ಹುಡುಗಿಯ ಸಾಧನೆಯ ಕತೆ ಇದು!

» ನೀತು ಬೆದ್ರ ಕತ್ತಲೆ ಗರ್ಭದಿ 9 ತಿಂಗಳು ಕಳೆದು, ಜನಿಸಿದ ಮಗುವು ತಂದೆತಾಯಿಯ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತ,ಪರಿಸರದ ವಾತಾವರಣಕ್ಕೆ ಹೊಂದಿಕೊಂಡು ಅದರಂತೆ ಬಾಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯ ಪ್ರೀತಿಯೊಂದಿಗೆ ಹುಟ್ಟಿನಿಂದ ಬಂದ ಕಲೆಯನ್ನು ಕರಗತ ಮಾಡಿದ ದಿಟ್ಟೆ, ನಾಟ್ಯ ಹಾಗೂ ಯೋಗದಲ್ಲಿ ರಾಷ್ಟ್ರವ ಮೆಚ್ಚಿಸಿದ ಚಿನಕುರುಳಿ ಮಹಿಮಾ ಕುಂದಾಪುರ. ಲತಾ ಹಾಗೂ ರಾಮ ಮೊಗೆರ್ ದಂಪತಿಗಳ ಪುಟ್ಟ ಕಂದಮ್ಮ ಹನ್ನೆರಡರ ನಾಟ್ಯ ರತ್ನ ಈ ಮಹಿಮಾ. ಎಲ್ ಕೆ ಜಿ, ಯು ಕೆ ಜಿ ಹಾಗೂ […]

ಕಠಿಣ ಪರಿಶ್ರಮದಿಂದ ಸಾಧನೆಗೈದ ಹಿರಿಯಡ್ಕದ ಡಾ. ದೀಪಾಲಿ ಆಳ್ವ

ಒಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ ಆದರ ಹಿಂದೆ ಕಠಿಣ ಪರಿಶ್ರಮ ಅಗತ್ಯ.ಹಾಗೆ ಕಠಿಣ ಪರಿಶ್ರಮಗೈದು ಈ ಹುಡುಗಿ ಮಾಡಿದ ಸಾಧನೆ ನಿಜಕ್ಕೂ ಹೆಮ್ಮೆ ಹುಟ್ಟಿಸುವಂತಿದೆ. ಈಕೆಯ ಹೆಸರು ದೀಪಾಲಿ ಆಳ್ವ, ಡಾ. ದೀಪಾಲಿ ಆಳ್ವಾ ಮೂಲತಃ ಹಿರಿಯಡ್ಕದ ಕೊಂಡಾಡಿಗುತ್ತು ದಿ.ದೀಪಕ್ ಆಳ್ವಾ ಹಾಗು ಪಂಚಾಕ್ಷಣಿ ಆಳ್ವ ರ ಪುತ್ರಿ. ಈಕೆ ಕಾರವಾರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಲೈಫ್ ಸೈನ್ಸ್ ವಿದ್ಯಾಲಯದಲ್ಲಿ ಕಲಿಯುತ್ತಿದ್ದು ಮೊದಲ ವಿಭಾಗದಲ್ಲಿ ತೇರ್ಗಡೆಯಾಗಿ ಕರಾವಳಿಗೆ ಹೆಮ್ಮೆ ತಂದಿದ್ದಾರೆ. ಆಕೆ ತನ್ನ ಹದಿನೈದನೇ ವಯಸ್ಸಿನಲ್ಲಿ ಮನೆಯ […]

ಕಂಬಳ ಕರೆಗೆ ಇಳಿದಳು ಈ ಮುದ್ದು ಹುಡುಗಿ: ಕಂಬಳ ಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಈ ಹುಡುಗಿ ಯಾರು?

ಈ ಹುಡುಗಿಯ ಕಥೆ ನಿಜಕ್ಕೂ ಹೆಮ್ಮೆ ತರುತ್ತದೆ. ಈ ಹುಡುಗಿಯ ಸಾಧನೆ ಕೇಳಿದರೆ ಕಂಬಳದ ಅಭಿಮಾನಿಗಳು ನಿಜಕ್ಕೂ ಖುಷಿಪಡುತ್ತಾರೆ. ಹೌದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಂಬಳ ಅಂದರೆ ಅದೊಂದು ಸಂಸ್ಕೃತಿ, ಅದೊಂದು ತುಳುವರ ಉಸಿರಿದ್ದಂತೆ. ಕಂಬಳ ಪುರುಷ ಪ್ರಧಾನವಾಗಿದ್ದು  ಪುರುಷರೇ ಈ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಆದರೆ ಇತ್ತೀಚೆಗೆ  ಕಾರ್ಕಳ ಮಿಯ್ಯಾರುವಿನಲ್ಲಿ  ಹುಡುಗಿಯೊಬ್ಬಳು ಕಂಬಳ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ ಕಂಬಳ ಕರೆಗೆ ಇಳಿದಿದ್ದಾಳೆ. ಅದಕ್ಕೆ ಸಾಕ್ಷಿಯಾಗಿದೆ ಮೊನ್ನೆಯ ಮಿಯ್ಯಾರು ಕಂಬಳ. ಈ ಮೂಲಕ ಕಂಬಳದ […]

ಕಬ್ಬು ಬೆಳೆದು ಬದುಕು ಸಿಹಿಯಾಗಿಸಿದ ಕರಾವಳಿಯ ಈ ಕೃಷಿಕ: ಇವರ ಸಕ್ಸಸ್ ಸ್ಟೋರಿ ಒಮ್ಮೆ ಕೇಳಿ

ಇದು ಕಬ್ಬು ಬೆಳೆದು ಬದುಕು ಸಿಹಿಮಾಡಿಕೊಂಡ ಯುವ ಕೃಷಿಕನೊಬ್ಬನ ಕತೆ.ಈ ಕತೆ ಕೇಳಿದರೆ ನೀವು ಹೆಮ್ಮೆ ಮತ್ತು ಖುಷಿ ಪಡುತ್ತೀರಿ ಹೌದು ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉತ್ಸಾಹಿ ಕೃಷಿಕ. ಹೆಸರು ಗುಂಡು ನಾಯ್ಕ್. ಕಾರ್ಕಳ ತಾಲೂಕಿನ ಮುಟ್ಲುಪಾಡಿಯ ದರ್ಖಾಸು ಮನೆ ನಿವಾಸಿ. ಇದೀಗ ತಮ್ಮ ಮನೆಯವರೆಲ್ಲರನ್ನೂ ಕಬ್ಬು ಕೃಷಿಗೆ ತೊಡಗಿಸಿಕೊಳ್ಳುವ ಸೈ ಎನಿಸಿಕೊಂಡು ಕಬ್ಬು ಕೃಷಿಯಲ್ಲಿ ಯಶಸಸ್ಸು ಸಾಧಿಸಿದ್ದಾರೆ ಗುಂಡು ನಾಯ್ಕರು. ಆ ಮೂಲಕ ಕಾರ್ಕಳ ತಾಲೂಕಿನಲ್ಲಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆ. ಇವರದ್ದು ಶ್ರಮಿಕ […]

ಶೃಂಗೇರಿ ಹುಡುಗಿ ಶಾಶ್ವತಿ ಹೆಚ್ ಎಸ್ ಬಿಡಿಸಿದ ರಂಗು ರಂಗಿನ ಚಿತ್ರಗಳು

ಶಾಶ್ವತಿ ಹೆಚ್.ಎಸ್, ಮಲೆನಾಡಿನ ಚೆಂದದ ಊರಾದ ಶೃಂಗೇರಿಯ ಹುಡುಗಿ. ಇವರಿಗೆ ಚಿತ್ರ ಬಿಡಿಸುವುದೆಂದರೆ ನೆಚ್ಚಿನ ಹವ್ಯಾಸ. ಇವರು ಬಿಡಿಸಿದ ಚಿತ್ರಗಳಲ್ಲಿ ನಿಸರ್ಗದ ಸಹಜ, ಸರಳ ಮಾಧುರ್ಯವಿದೆ. ಆಡಂಬರವಿಲ್ಲದೆ ಅತ್ಯಂತ ಸಹಜತೆಯಿಂದ ಕಂಗೊಳಿಸುವ ಶಾಶ್ವತಿ ಬಿಡಿಸಿದ ಚಿತ್ರಗಳು ಶಾಶ್ವತವಾಗಿ ಕಲಾರಸಿಕರ ಗಮನ ಸೆಳೆಯುವಂತಿದೆ. ಸದ್ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಶಾಶ್ವತಿ ಅವರಿಗೆ ಚಿತ್ರಕಲೆಯ ಜೊತೆಗೆ ಸಂಗೀತ,ಗಾರ್ಡನಿಂಗ್ ಮತ್ತು ಫೋಟೋಗ್ರಫಿ ಖುಷಿ ಕೊಡುವ ಹವ್ಯಾಸಗಳು.ಇವರ ಕೈಯಲ್ಲರಳಿದ ಕೆಲವು ಚಿತ್ರಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ.