ಕಠಿಣ ಪರಿಶ್ರಮದಿಂದ ಸಾಧನೆಗೈದ ಹಿರಿಯಡ್ಕದ ಡಾ. ದೀಪಾಲಿ ಆಳ್ವ

ಒಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ ಆದರ ಹಿಂದೆ ಕಠಿಣ ಪರಿಶ್ರಮ ಅಗತ್ಯ.ಹಾಗೆ ಕಠಿಣ ಪರಿಶ್ರಮಗೈದು ಈ ಹುಡುಗಿ ಮಾಡಿದ ಸಾಧನೆ ನಿಜಕ್ಕೂ ಹೆಮ್ಮೆ ಹುಟ್ಟಿಸುವಂತಿದೆ. ಈಕೆಯ ಹೆಸರು ದೀಪಾಲಿ ಆಳ್ವ,

ಡಾ. ದೀಪಾಲಿ ಆಳ್ವಾ ಮೂಲತಃ ಹಿರಿಯಡ್ಕದ ಕೊಂಡಾಡಿಗುತ್ತು ದಿ.ದೀಪಕ್ ಆಳ್ವಾ ಹಾಗು ಪಂಚಾಕ್ಷಣಿ ಆಳ್ವ ರ ಪುತ್ರಿ. ಈಕೆ ಕಾರವಾರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಲೈಫ್ ಸೈನ್ಸ್ ವಿದ್ಯಾಲಯದಲ್ಲಿ ಕಲಿಯುತ್ತಿದ್ದು ಮೊದಲ ವಿಭಾಗದಲ್ಲಿ ತೇರ್ಗಡೆಯಾಗಿ ಕರಾವಳಿಗೆ ಹೆಮ್ಮೆ ತಂದಿದ್ದಾರೆ.

ಆಕೆ ತನ್ನ ಹದಿನೈದನೇ ವಯಸ್ಸಿನಲ್ಲಿ ಮನೆಯ ಸ್ವಿಚ್ ಬೋರ್ಡ್ ಮೇಲೆ ಡಾ.ದೀಪಾಲಿ ಆಳ್ವಾ ಎಂದು ಬರೆದು ತಾನೊಬ್ಬ ಡಾಕ್ಟರ್ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ಹುಡುಗಿ.

ಕಲಿಯುವುದರಲ್ಲಿ ಪ್ರತಿಭಾವಂತಳಾಗಿದ್ದು ತನ್ನ ಪ್ರೈಮರಿ ಹಾಗೂ ಹೈಸ್ಕೂಲ್ ಶಿಕ್ಷಣ ಹಿರಿಯಡ್ಕ ಗ್ರೀನ್ಪಾರ್ಕ್ ಸ್ಕೂಲ್ ನಲ್ಲಿ ಕಲಿತು ಕಾರ್ಕಳ ತಾಲೂಕು ಕುಕ್ಕುಂದೂರಿನ ಜ್ಞಾನಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.95 ಪಡೆದಿದ್ದಳು .ಹಠ ಹಿಡಿದು ವೈದ್ಯಕೀಯ ಶಿಕ್ಷಣ ಪಡೆದು ಇಂದು ತನ್ನ ಕನಸನ್ನು ಈಡೇರಿಸಿಕೊಂಡಿದ್ದಾಳೆ. ಆಕೆಯ ಅಮ್ಮ ಪಂಚಾಕ್ಷಿಣಿ ಆಳ್ವಾ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

«ರಾಮ್ ಅಜೆಕಾರ್