ಕಬ್ಬು ಬೆಳೆದು ಬದುಕು ಸಿಹಿಯಾಗಿಸಿದ ಕರಾವಳಿಯ ಈ ಕೃಷಿಕ: ಇವರ ಸಕ್ಸಸ್ ಸ್ಟೋರಿ ಒಮ್ಮೆ ಕೇಳಿ

ಇದು ಕಬ್ಬು ಬೆಳೆದು ಬದುಕು ಸಿಹಿಮಾಡಿಕೊಂಡ ಯುವ ಕೃಷಿಕನೊಬ್ಬನ ಕತೆ.ಈ ಕತೆ ಕೇಳಿದರೆ ನೀವು ಹೆಮ್ಮೆ ಮತ್ತು ಖುಷಿ ಪಡುತ್ತೀರಿ ಹೌದು ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉತ್ಸಾಹಿ ಕೃಷಿಕ. ಹೆಸರು ಗುಂಡು ನಾಯ್ಕ್. ಕಾರ್ಕಳ ತಾಲೂಕಿನ ಮುಟ್ಲುಪಾಡಿಯ ದರ್ಖಾಸು ಮನೆ ನಿವಾಸಿ. ಇದೀಗ ತಮ್ಮ ಮನೆಯವರೆಲ್ಲರನ್ನೂ ಕಬ್ಬು ಕೃಷಿಗೆ ತೊಡಗಿಸಿಕೊಳ್ಳುವ ಸೈ ಎನಿಸಿಕೊಂಡು ಕಬ್ಬು ಕೃಷಿಯಲ್ಲಿ ಯಶಸಸ್ಸು ಸಾಧಿಸಿದ್ದಾರೆ ಗುಂಡು ನಾಯ್ಕರು. ಆ ಮೂಲಕ ಕಾರ್ಕಳ ತಾಲೂಕಿನಲ್ಲಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆ.

ಇವರದ್ದು ಶ್ರಮಿಕ ಜೀವನ. 6 ಮಕ್ಕಳು ಮೂರು ಹೆಣ್ಣು ಮೂರು ಗಂಡು ಮಕ್ಕಳ ನೆಮ್ಮದಿಯ ಕುಟುಂಬ. ಆರೂ ಜನರು ತಮ್ಮ ತಳ್ಳು ಗಾಡಿಗಳಲ್ಲಿ  ಕಾರ್ಕಳ ತಾಲೂಕಿನ  ಜೋಡುರಸ್ತೆ , ಪರ್ಕಳ ,ಮುನಿಯಾಲು ಹಾಗೂ ಅಜೆಕಾರು ಗುಡ್ಡೆಯಂಗಡಿಗಳಲ್ಲಿ ತಮ್ಮ ಮನೆಯಲ್ಲೇ ಬೆಳೆದ ಕಬ್ಬನ್ನು ಜ್ಯೂಸ್ ಮಾಡಿ ಮಾರುತ್ತಿದ್ದಾರೆ. ಕೇವಲ ತಳ್ಳುಗಾಡಿಗಳನ್ನು ಅವಲಂಬಿಸದೇ ಮದುವೆ ಮುಂಜಿ ಗೃಹ ಪ್ರವೇಶದಂತಹ ಸಮಾರಂಭಗಳಿಗೂ ಕೂಡ ಕಬ್ಬಿನ ಹಾಲನ್ನು ಪೂರೈಸುತ್ತಾರೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಕಬ್ಬು ಬೆಳೆಯುವುದದೇ ವಿರಳ . ಆದರೆ ಗುಂಡು ನಾಯ್ಕರು ತಮ್ಮ ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಹಟ್ಟಿ ಗೊಬ್ಬರ ಹಾಕಿ ಸಾವಯವ ಕಬ್ಬು ಕೃಷಿ ಮಾಡುತ್ತಿದ್ದಾರೆ. ಕಬ್ಬಿನ ಜೊತೆಗೆ ಭತ್ತ, ಬೆಂಡೆ, ಗೆಣಸು ,ಸರ್ವ ಋತು ಮಿಶ್ರ ಬೆಳೆ ಬೆಳೆಯುತ್ತಾರೆ.

ಕಬ್ಬು ದೀರ್ಘವದಿ ಬೆಳೆಯಾಗಿದ್ದರಿಂದ ಮಳೆಗಾಲದಲ್ಲಿಯೆ ನಾಟಿ ಮಾಡಬೇಕು. ಆದರೆ ಕರಾವಳಿಯ ಉಷ್ಣತೆಗೆ ಅನುಗುಣವಾಗಿ ಬೇಡಿಕೆ ಹೆಚ್ಚಾದಾಗ ಕೆಲವೊಮ್ಮೆ ಶಿವಮೊಗ್ಗದ ಕಬ್ಬು ಪೂರೈಕೆದಾರರನ್ನು ಅವಲಂಬಿಸಬೇಕಾಗುತ್ತದೆ ಎನ್ನುತ್ತಾರೆ ಗುಂಡು ನಾಯ್ಕ್. ಈ ಯಶಸ್ವಿ ಕಬ್ಬುಬೆಳಗಾರನ ಸಂಪರ್ಕ  9964814740 ,9164588291
7348941443

«ರಾಮ್ ಅಜೆಕಾರ್