ಆನ್ ಲೈನ್ ದುನಿಯಾದ ಟ್ರೆಂಡ್ ಬಿಚ್ಚಿಡುತ್ತೆ ಈ “ಶಾಪಿಂಗ್” ಕಿರುಚಿತ್ರ

 ಆನ್‌ಲೈನ್ ವಹಿವಾಟು ಹೊಸ ಪೀಳಿಗೆಯ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಎಲೆಕ್ತ್ರಾನಿಕ್‌ ಉಪಕರಣಗಳೇ ಆಗಿವೆ ಎಂಬ ಪರಿಸ್ಥಿತಿ ಇತ್ತು.. ಆದರೆ ಕಳೆದ ಕೆಲವು ವರ್ಷಗಳಲ್ಲಿ ಖರೀದಿದಾರರ ಮತ್ತು ಮಾರಾಟವಾಗುತ್ತಿರುವ ಸಾಮಗ್ರಿಗಳಲ್ಲಿ ದೊಡ್ಡ ಬದಲಾವಣೆಯೂ ಆಗುತ್ತಿದೆ. ಅಂತರ್ಜಾಲದ ಜೊತೆಗೇ ಟೆಲಿವಿಷನ್ ಮೂಲಕವೂ ಪ್ರಚಾರ ಜೋರಾಗತೊಡಗಿದಂತೆ ಎಲ್ಲ ವಯಸ್ಸಿನವರೂ, ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಈ ಮಾರುಕಟ್ಟೆಯಲ್ಲಿ ಖರೀದಿ ವಹಿವಾಟು ನಡೆಸುವ ಪ್ರಮಾಣ ಹೆಚ್ಚುತ್ತಲೇ ಇದೆ. ಹಾಗೆಯೇ ಗೃಹ ಬಳಕೆ ಸಾಮಗ್ರಿಗಳು, ಬಟ್ಟೆ, ಪೀಠೋಪಕರಣಗಳು ಮತ್ತು ಆಭರಣಗಳನ್ನು ಕೂಡ […]

ಕ್ರೀಡಾಲೋಕದ ನಕ್ಷತ್ರ, ಯುವ ಕ್ರೀಡಾಳುಗಳ ಅಪ್ರತಿಮ ಗುರು: ಉಡುಪಿಯ ಶಾಲಿನಿ ಶೆಟ್ಟಿ ಯಶೋಗಾಥೆ ಇದು!

ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಇರುವ ತರತಮ ವ್ಯವಸ್ಥೆಯಿಂದಾಗಿ ಸಾವಿರಾರು ಕ್ರೀಡಾಳುಗಳ ಪ್ರತಿಭೆಗಳು ಬೆಳಕಿಗೆ ಬಾರದೇ ಕರುಟಿ, ಮುರುಟಿ, ಮುದುರಿ ಹೋಗುತ್ತಿರುವುದಂತು ಸತ್ಯ. ಆದರೂ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ತಮ್ಮ ಅದ್ವಿತೀಯ ಸಾಧನೆ, ಪ್ರತಿಭೆ, ಪ್ರಬಲವಾದ ಇಚ್ಛಾಶಕ್ತಿಯಿಂದ ಕ್ರೀಡಾಂಬರದಲ್ಲಿ ನಕ್ಷತ್ರಗಳಂತೆ ಮಿಂಚಿ ಪ್ರಜ್ವಲಿಸುತ್ತಾರೆ. ಇನ್ನೂ ಕೆಲವರು ವನಸುಮಗಳಂತೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ಎಲೆಯ ಮರೆಯ ಪಿಂತಿರ್ದು ತಾನಾಯಿತು ತನ್ನ ಸಾಧನೆಯಾಯ್ತು ಎಂದು ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವೇ ಸಾಧಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಚಾರಕ್ಕೆ ಹಾತೊರೆಯದೆ […]

ಕಲಾ ಆವಿಷ್ಕಾರದ ಮಧುರ ನಿನಾದ, ಬ್ರಹ್ಮಾವರ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ :ಕಲಾ ಸೇವೆಗೆ ಮೀಸಲಾದ ಟ್ರಸ್ಟ್ ನ ಕುರಿತು ಒಂದಷ್ಟು..

ತೆಂಕು, ಬಡಗು ಯಕ್ಷಗಾನ ಕಲಾ ಪ್ರಕಾರದ ಕುರಿತು ಸಂಶೋಧನಾತ್ಮಕ ಅಧ್ಯಯನ, ಪರಾಮರ್ಶೆ, ವಿಚಾರಗೋಷ್ಟಿ, ಯಕ್ಷಗಾನ ಸಾಹಿತ್ಯ ಕಮ್ಮಟ, ಪ್ರಯೋಗಾತ್ಮಕ ಪ್ರದರ್ಶನ, ಮೊದಲಾದ ಕಾರ್ಯಕ್ರಮಗಳ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶೋಧಿಸುವ ಹುಮ್ಮಸ್ಸು ಹಾಗೂ ಅದರಿಂದ ಸಿಗುವ ಫಲಿತಾಂಶಗಳನ್ನು ಜಗತ್ತಿಗೆ ಒದಗಿಸುವ ಮಹೋನ್ನತ ಉದ್ದೇಶಗಳೊಂದಿಗೆ ಸದ್ದಿಲ್ಲದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಂಡಾರು ಎಂಬ ಪುಟ್ಟ ಗ್ರಾಮದಲ್ಲಿ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಎಂಬ ಸಂಸ್ಥೆಯ ನಿನಾದ ಹೆಚ್ಚೇನು ಸದ್ದು ಮಾಡದೆ ಮೊಳಗಿದೆ. ಇಂತಹ ದೂರದೃಷ್ಟಿತ್ವ ಚಿಂತನೆಯನ್ನು ಹೊಂದಿರುವ ಟ್ರಸ್ಟ್ ನ […]

ರಿಕ್ಷಾ ಚಾಲಕನ ಅಚ್ಚರಿಯ ಬಣ್ಣದ ಬದುಕು: ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಸೈ , ಬಹುಭಾಷಾ ನಟನೆಗೂ ಜೈ

ಕ   ಳೆದ 25 ವರ್ಷಗಳಿಂದ ರಿಕ್ಷಾ ಓಡಿಸಿ ಶ್ರಮದ ದುಡಿಮೆ ಮೈಗೂಡಿಸಿಕೊಂಡಿದ್ದರೂ ಕಲೆಯ ಬದುಕಿನಿಂದ ಆಕರ್ಷಿತರಾಗಿ ಬೆಳ್ಳಿ ತೆರೆ, ಕಿರುತೆರೆಯಲ್ಲಿ ಪೋಷಕ ನಟನಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿ ಜನಮನ ಸೂರೆಗೊಂಡ ಕರಾವಳಿಯ ಅಪರೂಪದ ಕಲಾವಿದ ಸತೀಶ್ ಕಲ್ಯಾಣಪುರ. ಬಡತನದ ಬದುಕಿನ ಜಂಜಾಟದ ನಡುವೆ ಹವ್ಯಾಸಿ ನೆಲೆಯಲ್ಲಿ ಬಣ್ಣದ ಬದುಕಿಗೆ ಹೊರಳಿದ ಇವರು ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಪೋಷಕ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪ್ರತಿಭಾನ್ವಿತ, ಪರಿಪೂರ್ಣ ಕಲಾವಿದ. ತನ್ನದೆ ಚಿತ್ರ ಕಲಾ […]

ಆಪತ್ಕಾಲದ “ದೇವ ಮಂದಿರ” ಮೈಮುನಾ ಫೌಂಡೇಶನ್: ನೆಲೆಯಿಲ್ಲದವರಿಗೆ ಸ್ಪೂರ್ತಿ ಸೆಲೆಯಾದ ಆಪದ್ಭಾಂಧವ ಆಸೀಫ್ ಕತೆ ಇದು

ಭ ಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ, ಯಾರು ಅವರುಗಳ ಸೇವೆ ಮಾಡುತ್ತಾರೋ, ಅವರು ದೇವರಿಗೆ ಹತ್ತಿರವಾದವರು” ಎನ್ನುತ್ತದೆ ವೇದವಾಣಿ. ಇದು ನೂರಕ್ಕೆ ನೂರರಷ್ಟು ಸತ್ಯ. ಇದನ್ನೇ ಸ್ವಾಮಿ ವಿವೇಕಾನಂದರು “ಎಲ್ಲರೂ ಭಗವಂತನ ರೂಪಗಳೇ” ಎನ್ನುತ್ತಾರೆ. ಆ ರೂಪಗಳು ನಮ್ಮ ಕಣ್ಣಮುಂದೆ ಬೇರೆ ಬೇರೆಯಾಗಿ ಕಂಡು ಬರುತ್ತವೆ. ದೀನರಂತೆ, ಹುಚ್ಚರಂತೆ, ರೋಗಿಯಂತೆ, ಆಶಕ್ತರಂತೆ, ದುರ್ಬಲರಂತೆ, ನಿರ್ಬಲರಂತೆ, ದುಃಖಿಗಳಂತೆ, ದಿವ್ಯಾಂಗಿಗಳಂತೆ ಭಿಕ್ಷುಕರಂತೆ, ಹೀಗೆ ಲೋಕದ ಸಂತೆಯೊಳಗೆ ಅನೇಕರು ನಾನ ತರದವರಿದ್ದಾರೆ. ಈ ರೀತಿ ನರಳುತ್ತಿರುವವರು ಸಾವಿರಾರು ಜನ ಕಣ್ಣಮುಂದೆ ಇದ್ದಾರೆ. […]