ಆನ್ ಲೈನ್ ದುನಿಯಾದ ಟ್ರೆಂಡ್ ಬಿಚ್ಚಿಡುತ್ತೆ ಈ “ಶಾಪಿಂಗ್” ಕಿರುಚಿತ್ರ

 ಆನ್‌ಲೈನ್ ವಹಿವಾಟು ಹೊಸ ಪೀಳಿಗೆಯ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಎಲೆಕ್ತ್ರಾನಿಕ್‌ ಉಪಕರಣಗಳೇ ಆಗಿವೆ ಎಂಬ ಪರಿಸ್ಥಿತಿ ಇತ್ತು.. ಆದರೆ ಕಳೆದ ಕೆಲವು ವರ್ಷಗಳಲ್ಲಿ ಖರೀದಿದಾರರ ಮತ್ತು ಮಾರಾಟವಾಗುತ್ತಿರುವ ಸಾಮಗ್ರಿಗಳಲ್ಲಿ ದೊಡ್ಡ ಬದಲಾವಣೆಯೂ ಆಗುತ್ತಿದೆ.

ಅಂತರ್ಜಾಲದ ಜೊತೆಗೇ ಟೆಲಿವಿಷನ್ ಮೂಲಕವೂ ಪ್ರಚಾರ ಜೋರಾಗತೊಡಗಿದಂತೆ ಎಲ್ಲ ವಯಸ್ಸಿನವರೂ, ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಈ ಮಾರುಕಟ್ಟೆಯಲ್ಲಿ ಖರೀದಿ ವಹಿವಾಟು ನಡೆಸುವ ಪ್ರಮಾಣ ಹೆಚ್ಚುತ್ತಲೇ ಇದೆ. ಹಾಗೆಯೇ ಗೃಹ ಬಳಕೆ ಸಾಮಗ್ರಿಗಳು, ಬಟ್ಟೆ, ಪೀಠೋಪಕರಣಗಳು ಮತ್ತು ಆಭರಣಗಳನ್ನು ಕೂಡ ಆನ್‌ಲೈನ್ ಅಥವಾ ದೂರವಾಣಿ ಮೂಲಕ ಕೋರಿಕೆ ಸಲ್ಲಿಸಿ ಖರೀದಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಶಾಫಿಂಗ್ ದುನಿಯಾದ ಟ್ರೆಂಡ್ ಅಗಿರುವ ಸಮಯದಲ್ಲಿ
ಆನ್ಲೈನ್ ಶಾಫಿಂಗ್ ಬಗೆಗಿನ ಸಮಾಜಕ್ಕೆ ಸಂದೇಶ ನೀಡುವ ಕಿರುಚಿತ್ರ ಒಂದು ಸುದ್ದಿಮಾಡುತ್ತಿದೆ.

ಮಾನವೀಯ ಮೌಲ್ಯಗಳನ್ನು ತೆರೆದಿಡುವ ಭಾವನಾತ್ಮಕವಾಗಿ ಕಿರುಚಿತ್ರವನ್ನು ಮಾಡುವ ಮೂಲಕ ಇಂದಿನ ಸಮಾಜಕ್ಕೆ ಹಾಗೂ ಆಧುನಿಕ ಜಗತ್ತಿನಲ್ಲಿ ಬೆಳೆಯುತ್ತಿರುವ ಯುವಕರಿಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ ಕನ್ನಡ ಕಿರುಚಿತ್ರ “ಶಾಪಿಂಗ್”.

ಯಾರದ್ದೋ ದುಡ್ಡನ್ನು ಉಪಯೋಗಿಸುವ ಮುನ್ನ ಒಮ್ಮೆ ಯೋಚಿಸುವ ಕನಿಷ್ಠ ಪ್ರಯತ್ನವನ್ನು ಮಾಡದಿದ್ದ ಅದರ ಪರಿಣಾಮ ಅದೆಷ್ಟು ಘೋರವೆಂಬುದನ್ನು ಈ ಚಿತ್ರ ತಿಳಿಸುತ್ತದೆ.

ಈ ಕಿರುಚಿತ್ರಕ್ಕೆ ಕಥೆ ಹಾಗೂ ನಿರ್ದೇಶನವನ್ನು ಶ್ರುತಿನ್ ಎಸ್.ಶೆಟ್ಟಿ ನೀಡಿದ್ದು ಕನಸು ಕ್ರಿಯೇಷನ್ ಅಡಿಯಲ್ಲಿ ಮೂಡಿಬಂದಿದೆ. ಸಂಕಲನವನ್ನು ಶ್ರೀಶ ಎಳ್ಳಾರೆ,ಪಬ್ಲಿಸಿಟಿ ಡಿಸೈನ್ ಅನ್ನು ಸಂತೋಷ ಪುಚ್ಚೆರ್,ಹಿನ್ನಲೆ ಧ್ವನಿಯನ್ನು ಆರ್.ಜೆ.ತ್ರಿಶೂಲ್ ನೀಡಿದ್ದಾರೆ.ಪಾತ್ರಧಾರಿಗಳಾಗಿ ಪ್ರಶಾಂತ್ ಪೂಜಾರಿ ಹಾಗೂ ಶ್ರುತಿನ್ ಎಸ್.ಶೆಟ್ಟಿ ನಟಿಸಿದ್ದಾರೆ.

 ಒಮ್ಮೆ ವೀಕ್ಷಿಸಿ