ಬನವಾಸಿಗೆ ಒಲಿದು ಬಂದ ಕೇರಳ ಅರಣ್ಯ ಇಲಾಖೆಯ ವನಮಿತ್ರ ಪ್ರಶಸ್ತಿ

ನೀರ್ಚಾಲು: ನೀರ್ಚಾಲು ಸಮೀಪದ ಬುರುಡಡ್ಕ ಎಂಬ ಬರಡು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಕೇರಳ ಸರಕಾರದ ಅರಣ್ಯ ಇಲಾಖೆಯವರು ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಮಲ್ಲಮೂಲೆಯವರು ಕೇವಲ ಮೂರ್ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಬನವಾಸಿ ಎಂಬ ಹೆಸರಿನಲ್ಲಿ ರೂಪಿಸಿದ ಈ ಸ್ಥಳವು ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರಜಾಗೃತಿಯ ಸ್ಥಳವಾಗಿ ರೂಪುಗೊಂಡಿದೆ. ಅದೇ ರೀತಿಯಲ್ಲಿ ಇವರ ಪರಿಸರಸ್ನೇಹಿ ಮನೆಯು ಜನರ ಆಕರ್ಷಣೆಯ ಕೇಂದ್ರವಾಗಿದೆ. ದಿನನಿತ್ಯ […]

ಶಿಸ್ತು, ಜ್ಞಾನ, ಮೌಲ್ಯಾಧಾರಿತ ಶಿಕ್ಷಣದ ಪ್ರತೀಕ ಕುಂದಾಪುರದ ಸೈಂಟ್ ಮೇರಿಸ್ ಪಿಯು ಕಾಲೇಜು- ದಾಖಲಾತಿ ಆರಂಭ

ಶಿಸ್ತು, ಜ್ಞಾನ, ಮೌಲ್ಯಾದರಿತ ಶಿಕ್ಷಣಕ್ಕೆ ಹೆಸರಾದ ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು: ಇದೀಗ ದಾಖಲಾತಿ ಆರಂಭಗೊಂಡಿದೆ. ವಿದ್ಯಾಭಿಮಾನಿಗಳೇ, ಹಲವಾರು ದಶಕಗಳ ಹಿಂದೆ ಮಂಗಳೂರಿನಲ್ಲಿ ಕಥೋಲಿಕ್ ವಿದ್ಯಾ ಮಂಡಳಿ ಸ್ಥಾಪನೆಯಾಗಿ ಕರಾವಳಿ ತೀರದ ಅನೇಕ ಕಡೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರೊಂದಿಗೆ ತಮ್ಮ ಛಾಪನ್ನು ಮೂಡಿಸಿ ತದನಂತರ ಕುಂದಾಪುರದ ಕುಂದಗನ್ನಡದ ಹಸಿರು ಮಣ್ಣಿನ ಪವಿತ್ರ ನೆಲದಲ್ಲಿ 135 ವರ್ಷಗಳ ಹಿಂದೆ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ಅಕ್ಷರ ಜಾತ್ರೆಗೆ […]

ಬಾದಾಮಿ, ಐಹೊಳೆಗೆ ಹೋಗೋಕೆ ಇದೊಳ್ಳೆ ಸಮಯ: ಟ್ರಿಪ್ ಪ್ಲಾನ್ಸ್ ಹೇಗೆ ಮಾಡ್ಬೇಕು ಇಲ್ಲಿದೆ ವಿವರ!

ಚಾಲುಕ್ಯರ ಕಾಲದ ಶಿಲ್ಪಕಲೆಗೆ ಹೆಸರಾದ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಬಾದಾಮಿ, ಐಹೊಳೆ, ಪಟ್ಟದಕಲ್ಲು. ಇಲ್ಲಿಗೆ ಒಂದು ಬಾರಿಯಾದ್ರೂ ಹೋಗ್ಬೇಕು ಅನ್ನೋದು ಎಲ್ಲರ ಕನಸಾಗಿರತ್ತೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಊರುಗಳಿಗೆ ಹೇಗೆ ಟ್ರಿಪ್ ಪ್ಲಾನ್ ಮಾಡ್ಬೋದು ಅನ್ನೋ ಡೀಟೈಲ್ಸ್ ಇಲ್ಲಿದೆ ನೋಡಿ. writeup: suvarchala bs ಕರ್ನಾಟಕದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದು ಚಾಲುಕ್ಯ ವಂಶ. ಶಿಲ್ಪಕಲೆಗೆ ಹೆಸರಾದ ಈ ಮನೆತನದ ರಾಜರುಗಳು ಶಿಲ್ಪಿಗಳಿಗೆ ಅಪಾರ ಪ್ರೋತ್ಸಾಹ ನೀಡಿದಾರೆ. ಐಹೊಳೆಯನ್ನ ಶಿಲ್ಪಕಲೆಯ ಪ್ರಯೋಗಶಾಲೆ ಎಂದೇ ಕರೆದಿದ್ದಾರೆ‌. ಇಲ್ಲಿ […]

ಕಾರ್ಕಳ ರಂಗಾಯಣದಲ್ಲಿ ಕಾಡಿದಳು “ಸುಬ್ಬಮ್ಮ”ಈ ನಾಟಕ ನೋಡುವ ಅವಕಾಶ ಸಿಕ್ಕರೆ ಮಿಸ್ ಮಾಡ್ಕೊಬೇಡಿ!

ಬರಹ: ಸುವರ್ಚಲಾ ಬಿ.ಸಂ. ಒಂದಷ್ಟು ದಿನ‌ ತಣ್ಣಗಿದ್ದ ಕಾರ್ಕಳದ ಯಕ್ಷರಂಗಾಯಣ ಈಗ ಹೊಸ ನಿರ್ದೇಶಕರಾದ ವೆಂಕಟರಮಣ ಐತಾಳ್ ನೇತೃತ್ವದಲ್ಲಿ ಮತ್ತೆ ಸದ್ದುಮಾಡತೊಡಗಿದೆ.‌ ಕಾರ್ಕಳದ ರಂಗಾಸಕ್ತರ ಮನದಣಿಸಲು “ತಿಂಗಳ ನಾಟಕ” ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳು ಬೇರೆ ಬೇರೆ ತಂಡಗಳನ್ನು ಕರೆಸಿ ನಾಟಕ ಮಾಡಿಸುವ ಮೂಲಕ ಮೊದಲ ಹೆಜ್ಜೆಯನ್ನಿಟ್ಟಿದೆ. ನವೆಂಬರ್ ತಿಂಗಳ ಕೊನೆಯ ದಿನ ತಣ್ಣನೆ ಮುಸ್ಸಂಜೆಯಲಿ ನಕ್ಷತ್ರಗಳ ಬೆಳಕಿನಲಿ ಪ್ರಸ್ತುತಿಯಾದ ನಾಟಕ ಕುವೆಂಪು ಅವ್ರ ಕಾನೂರು ಹೆಗ್ಗಡತಿ ಕಾದಂಬರಿಯ ಮುಖ್ಯಪಾತ್ರ ಸುಬ್ಬಮ್ಮಳನ್ನು ಬಿಂಬಿಸುವ ಏಕವ್ಯಕ್ತಿ ನಾಟಕ “ಸುಬ್ಬಮ್ಮ”. […]

ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ

ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.