ಕಂಬಳದ ಬೆತ್ತ ಉದ್ಯಮದತ್ತ ಚಿತ್ತ ಹರಿಸಿ ಬದುಕು ಕಟ್ಟಿಕೊಂಡ ದಂಪತಿಯ ಕತೆಯಿದು!

ಕಾರ್ಕಳ ತಾಲೂಕಿನ ಮಾಳ ಗ್ರಾಮದ ರಾಮಕೃಷ್ಣ  ಸಂಧ್ಯಾ ನಾಯಕ್ ದಂಪತಿಗಳಿಗೆ ಕಂಬಳದ ಬೆತ್ತ ತಯಾರಿಸಿ ಮಾರಾಟ ಮಾಡುವುದೇ  ಜೀವನಾಧಾರ. ಸತತ 17 ವರ್ಷಗಳಿಂದ ಬೆತ್ತ ತಯಾರಿಸಿ ಜೀವನ ಸಾಗಿಸುತ್ತಿರುವ ಇವರಿಗೆ ವರ್ಷದ  ಆರು ತಿಂಗಳು ಮಾತ್ರ  ಕೈಕಸುಬು.

ಕಂಬಳ ಕರಾವಳಿ ಕರ್ನಾಟಕದ  ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಕಂಬಳ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ, ಕಂಬಳ ಕೋಣಗಳನ್ನು ಓಡಿಸಲು ಬೆತ್ತವನ್ನು ಮಾಡುತ್ತಾರೆ. ಆ ಕಂಬಳದ ಬೆತ್ತಕ್ಕೆ ವಿಶಿಷ್ಠ ಸ್ಥಾನಮಾನವಿದೆ.

ಕಂಬಳದ ಬೆತ್ತ ಮಾಡುತ್ತ ಬದುಕು ಕಟ್ಟಿಕೊಂಡಿರುವ ಕಾರ್ಕಳ ತಾಲೂಕಿನ ಕುಟುಂಬವೊಂದಿದೆ. ಕಂಬಳದ ಬೆತ್ತಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಕುಟುಂಬ ಯಶೋಗಾಥೆ ಕೇಳೋಣ ಬನ್ನಿ.

ಈ ಕುಟುಂಬ ಮನೆಯಲ್ಲಿ ಬೆತ್ತ ತಯಾರಿಸಿ ತನ್ನ ಕಲಾತ್ಮಕ ಜೀವನವನ್ನು ನಡೆಸುತ್ತಿದೆ. ವಿವಿಧ ಗೊಂಡೆಗಳು,  ಕುಸುರಿ ಕೆಲಸದ ಮೂಲಕ ಬೆತ್ತವ ನೇಯ್ದು ವಿಶೇಷವಾಗಿ ಅಲಂಕರಿಸುತ್ತಾರೆ, ಈ  ಬೆತ್ತಕ್ಕೆ  ತನ್ನದೇ ಆದ ಬೇಡಿಕೆಯಿದೆ

ಕಾರ್ಕಳ ತಾಲೂಕಿನ ಮಾಳ ಗ್ರಾಮದ ರಾಮಕೃಷ್ಣ  ಸಂಧ್ಯಾ ನಾಯಕ್ ದಂಪತಿಗಳಿಗೆ ಕಂಬಳದ ಬೆತ್ತ ತಯಾರಿಸಿ ಮಾರಾಟ ಮಾಡುವುದೇ  ಜೀವನಾಧಾರ. ಸತತ 17 ವರ್ಷಗಳಿಂದ ಬೆತ್ತ ತಯಾರಿಸಿ ಜೀವನ ಸಾಗಿಸುತ್ತಿರುವ ಇವರಿಗೆ ವರ್ಷದ  ಆರು ತಿಂಗಳು ಮಾತ್ರ  ಕೈಕಸುಬು.

ಗಮನ ಸೆಳೆವ ಬೆತ್ತಗಳು:

ಮಳೆಗಾಲದಲ್ಲಿ ಬೆತ್ತಗಳನ್ನು ಆಯ್ದು ತಂದು ಅದನ್ನು ಸಿಂಗರಿಸಿ ಕಂಬಳ ಉತ್ಸವಗಳಲ್ಲಿ, ಇದನ್ನು ಮಾರುತ್ತಾರೆ. ಅದಕ್ಕೆ ಬೇಕಾದ  ವಸ್ತುಗಳನ್ನು ತಂದು ಮಳೆಗಾಲದ ಸಂದರ್ಭದಲ್ಲಿ ಶೇಖರಿಸಿಕೊಳ್ಳುತ್ತಾರೆ, ಕಂಬಳದ ಸಮಯದಲ್ಲಿ ಬೆತ್ತವನ್ನು ಮಾರುಕಟ್ಟೆಗೆ ತರುತ್ತಾರೆ,  ಕಂಬಳ ಉತ್ಸವದಲ್ಲಿ ಭಾಗವಹಿಸುವ ಗಣ್ಯಾತಿಗಣ್ಯರಿಗೆ  ಕಂಬಳದ ವಿಶೇಷವಾದ ಬೆತ್ತವನ್ನು ನೀಡಿಯೇ ಸ್ವಾಗತಿಸುವುದು ಕ್ರಮ ಹಾಗು ಗೌರವದ ಸೂಚಕ.  ಮಾಳ ರಾಮಕೃಷ್ಣ ನಾಯಕ್ ಅವರಿಗೆ ಕಂಬಳದ ಮೇಲೆ ಅಪಾರ ಪ್ರೀತಿ.

ಹಲವು ಕಂಬಳದ ಕೂಟಗಳಲ್ಲಿ ಭಾಗವಹಿಸುತ್ತಿದ್ದ ಇವರಿಗೆ ಬೆತ್ತದ ಆಕರ್ಷಣೆ ಜಾಸ್ತಿಯೇ ಇತ್ತು. ಅದನ್ನೇ ಇವರು ವೃತ್ತಿಯಾಗಿಕೊಂಡರು. ಈ ವೃತ್ತಿ ಸ್ಫೂರ್ತಿ ನೀಡಿತು.

ಕಂಬಳದ ಯಜಮಾನರ ಪರಿಚಯದಿಂದ ಮೊದಲು ಕೆಲವು ಬೆತ್ತಗಳು ಮಾರಾಟಗೊಂಡವು‌. ಆದರೆ ಸತತ ಮೂರು ವರ್ಷಗಳ ಕಾಲ ಕಂಬಳದ ನಿಷೇಧ,  ಬೆತ್ತ ಮಾರಾಟಕ್ಕೆ ಹಿನ್ನಡೆ ಉಂಟು ಮಾಡಿತ್ತು.

ಸಣ್ಣ ಬೆತ್ತಗಳು ರೂ .400 ಹಿಡಿದು 15,000 ವರೆಗೆ ಬೆಲೆ ಇದೆ. ಬೆಳ್ಳಿ  ಹಾಗೂ ವಿವಿಧ ರೀತಿಯ ವಿವಿಧ ವಿನ್ಯಾಸದ ಕಂಬಳ ಬೆತ್ತಗಳನ್ನು ತಯಾರಿಸಿ ಕೊಡುತ್ತಾರೆ. ಮೊದಲು ಹವ್ಯಾಸವಾಗಿ ಬೆಳೆಸಿಕೊಂಡ ಬೆತ್ತ ಈಗ  ಇವರ ಬದುಕಿಗೆ ಆಧಾರವಾಗಿದೆ.

»ರಾಂ ಅಜೆಕಾರು ಕಾರ್ಕಳ