ಕುಂದಾಪುರದ ಹೆಸರನ್ನು ಬಾನೆತ್ತರಕ್ಕೆ ಹಾರಿಸಿದ ಕುಂದಾಪ್ರ ಕನ್ನಡಿಗರು ನಮ್ಮ ಹೆಮ್ಮೆ ನಮ್ಮ ಆದರ್ಶ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಪ್ರಗತಿ ಬರೆದ ವಿಶೇಷ ಬರಹ..

ಕುಂದಾಪುರ ಎಂದಾಗ ಮೊದಲು ನೆನಪಾಗುವುದು ಇಲ್ಲಿನ ಭಾಷೆ. ಬೇರೆಲ್ಲಾ ಕನ್ನಡಕ್ಕಿಂತ ಕೇಳಲು ಸ್ವಲ್ಪ ಭಿನ್ನಾವಾಗಿಯೇ ಇದೆ. ಕೇಳಲು ಚಿಕ್ಕದಾಗಿ ಚೊಕ್ಕದಾಗಿ ಇರುವ ಭಾಷೆ ಎಂದರೆ ಅದೇ ನಮ್ಮ ಕುಂದಗನ್ನಡ. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಹಾಗೂ ರುಚಿ ರುಚಿಯಾದ ಅಡುಗೆಗಳು ಇಲ್ಲಿನ ವಿಶೇಷತೆ.

ಕುಂದಾಪುರದ ಆಹಾರ ಪದಾರ್ಥಗಳಲ್ಲಿ ಬೈಗೆ ಮೀನು ಸಾಂಬಾರು ಹೆಚ್ಚು ರುಚಿಕವಾದ ಅಡುಗೆಯಾಗಿದೆ. ಬೈಗೆ ಮೀನು ಎಂದಾಗಲೇ ಹೆಚ್ಚಿನವರ ಬಾಯಲ್ಲಿ ನೀರು ಬರುವಂತಾಗಿರುತ್ತದೆ. ” ಕೊಚ್ಚಕ್ಕಿ ಕೂಳಿಗೂ ಬೈಗಿ ಮೀನ್ ಹೊಳಿಗೂ ” ಎಂಥಹಾ ಕಾಂಬಿನೇಶನ್. ವಾರೇ ವಾ ….

 

ನನಗೆ ಗೊತ್ತಿರುವ ಹಾಗೆ ನಮ್ಮ ಕುಂದಾಪುರ ಕೇವಲ ಭಾಷೆಗೆ, ಪ್ರವಾಸಿ ತಾಣಗಳಿಗೆ ಅಥವಾ ರುಚಿ ರುಚಿಯಾದ ಅಡುಗೆಗೆ ಮಾತ್ರ ಸೀಮಿತವಾಗಿರದೆ ಕಲೆ ಮತ್ತು ಸಂಸ್ಕೃತಿಗಳನ್ನು ಕೂಡ ಉಳಿಸಿ ಬೆಳೆಸಲಾಗುತ್ತಿತ್ತು.

ಮನೋರಂಜನೆ, ಕ್ರೀಡೆ, ರಾಜಕೀಯ ಮುಂತಾದ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಗಣ್ಯವ್ಯಕ್ತಿಗಳು ನಮ್ಮ ಕುಂದಾಪುರದಲ್ಲಿದ್ದಾರೆ.

ಮೂಲತಃ ಕುಂದಾಪುರದವರಾದ ರಿಷಬ್ ಶೆಟ್ಟಿಯವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿತ್ತು. ಅಲ್ಲದೇ ಇವರು ಅತ್ಯುತ್ತಮ ನಟ ಮತ್ತು ನಿರ್ಮಾಪಕರು. ಇನ್ನು ಕಾಶೀನಾಥ್ ಇವರು 40ಕ್ಕೂ ಹೆಚ್ಚು ಚಲನಚಿತ್ರದಲ್ಲಿ ನಟಿಸಿದ್ದಾರೆ ಮತ್ತು 16 ಚಲನಚಿತ್ರವನ್ನು ನಿರ್ದೇಶಿಸಿದ್ದರು.

ರವಿ ಬಸ್ರೂರ್ ಅವರು ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ, ಧ್ವನಿ ವಿನ್ಯಾಸಕರಾದ ಇವರು ಕೆ.ಜಿ.ಎಫ್ ಚಾಪ್ಟರ್ 2, ಹೀಗೆ ಹೆಚ್ಚಿನ ಚಲನಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಶೈನ್ ಶೆಟ್ಟಿಯವರು ಕನ್ನಡದ ಬಿಗ್ ಬಾಸ್ ಟೆಲಿವಿಷನ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದರು. ಭೂಮಿಕಾ ಶೆಟ್ಟಿ ಇವರು ಧಾರವಾಹಿ, ಚಲನಚಿತ್ರ ಮತ್ತು ಟೆಲಿವಿಷನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.

ಚೈತ್ರಾ ರಾವ್ ಇವರು ಕೂಡ ಭಾರತೀಯ ಚಲನಚಿತ್ರ ನಟಿ ಮತ್ತು ಧಾರವಾಹಿಯಲ್ಲಿಯೂ ಪಾತ್ರಗಳನ್ನ ವಹಿಸಿದ್ದಾರೆ. ಉಪೇಂದ್ರ ರಾವ್, ರಮೇಶ್ ಭಟ್, ದೀಪಿಕಾ ಪಡುಕೋಣೆ, ಪ್ರಕಾಶ್ ಪಡುಕೋಣೆ, ದೀಕ್ಷಿತ್ ಶೆಟ್ಟಿ, ವಿನಯ ಪ್ರಸಾದ್ ಇನ್ನು ಬರೆಯುತ್ತಾ ಹೋದರೆ ಹೆಸರಿನ ಪಟ್ಟಿ ಬೆಳೆಯುತ್ತ ಹೋಗುತ್ತದೆ ಎಂದು ಹೇಳಬಹುದು.

ಈಗ ನಮ್ಮ ಕುಂದಾಪುರದ ಬಾಲ ಪ್ರತಿಭೆಗಳು ಕೂಡ ಟೆಲಿವಿಷನ್ ರಿಯಾಲಿಟಿ ಶೋಗಲ್ಲಿ ಭಾಗವಹಿಸಿ ಗೆದ್ದ ಅದೆಷ್ಟೋ ಉದಾಹರಣೆಗಳಿವೆ. ಎಲ್ಲರೂ ಕೂಡ ನಮ್ಮ ಕುಂದಾಪುರದ ಹೆಸರನ್ನ ಬಾನೆತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುದರಲ್ಲಿ ಸಂಶಯವೇ ಇಲ್ಲ.

– ಪ್ರಗತಿ. ಎಸ್  ಪತ್ರಿಕೋದ್ಯಮ ವಿಭಾಗ ಭಂಡಾರಕಾರ್ಸ್ ಕಾಲೇಜು ಕುಂದಾಪುರ.