ಮನಸ್ಸಿಗೆ ಒತ್ತಡವೇ ಚಿಂತೆ ಬಿಡಿ?  ನಿಮ್ಹಾನ್ಸ್ ತಯಾರಿಸಿರುವ “ಮೈಂಡ್‌ ನೋಟ್‌” ಆಪ್  ನಲ್ಲಿದೆ ಪರಿಹಾರ

ವೈದ್ಯರನ್ನು ನೇರವಾಗಿ ಭೇಟಿ ಮಾಡಲು ಹಿಂಜರಿಯುವವರಿಗೆ ಇದು ಉತ್ತಮ ಪರ್ಯಾಯ ಬೆಂಗಳೂರು: ಖಿನ್ನತೆ, ಆತಂಕ ಮತ್ತು ಒತ್ತಡದಂತಹ ಮಾನಸಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ, ಸ್ವ-ಮೌಲ್ಯಮಾಪನಕ್ಕೆ ನೆರವಾಗಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ‘ಮೈಂಡ್‌ ನೋಟ್‌’ ಆಪ್‌ ಅನ್ನು ಅಭಿವೃದ್ಧಿಪಡಿಸಿದೆ. ಈ ಆಪ್‌ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಿದೆ. ಸ್ವ-ಮೌಲ್ಯಮಾಪನಕ್ಕೆ ಸರಳ ವೇದಿಕೆ ಹಲವರಿಗೆ ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಸ್ಪಷ್ಟ ಅರಿವು ಇರುವುದಿಲ್ಲ. ‘ಮೈಂಡ್‌ ನೋಟ್‌’ ಆಪ್‌ ಬಳಕೆದಾರರಿಗೆ ಪ್ರಶ್ನಾವಳಿ, […]

ಸಂಬಳ ಬರುತ್ತಿದ್ದಂತೆ ಹಣ ಖರ್ಚಾಗುತ್ತಿದೆಯೇ? ಚಿಂತಿಸಬೇಡಿ ಈ ಉಪಾಯ ಮಾಡಿ

ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನಾದರೂ ಉಳಿತಾಯ ಮಾಡುವುದು ಇಂದಿನ ಅಗತ್ಯತೆಯಾಗಿದೆ. ಇಂದಿನ ಯುಗದಲ್ಲಿ, ನಮ್ಮ ಜೀವನ ಪದ್ಧತಿಗೆ ಯಾರಿಗೆ ಯಾವ ರೀತಿಯ ಆರೋಗ್ಯದ ತುರ್ತು ಬಂದೊದಗುತ್ತದೆ ಎಂದು ಊಹಿಸಲೂ ಅಸಾಧ್ಯ. ಹಾಗಾಗಿ ಉಳಿತಾಯ ಬಹಳಾ ಮುಖ್ಯ. ಸಂಬಳ ಬಂದ ನಂತರ ಹಣ ಉಳಿಸುವುದು ಅಂದರೆ “ಮಿಕ್ಕಿದ್ದನ್ನು ಉಳಿಸುವುದು” ಅಲ್ಲ, “ಮೊದಲು ಉಳಿಸಿ ನಂತರ ಖರ್ಚು ಮಾಡುವುದು” ಅನ್ನೋ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ಕೆಲವು ಸರಳ ಆದರೆ ಪರಿಣಾಮಕಾರಿ ಟಿಪ್ಸ್ ಇಲ್ಲಿವೆ 50-30-20 ನಿಯಮ ಪಾಲಿಸಿ […]

ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತಾ? ಇಲ್ಲಿದೆ ಆಶ್ಚರ್ಯಕರ ಸಂಗತಿ

ಬೈಕ್ ಸವಾರಿ ಮಾಡುವ ಪ್ರತಿಯೊಬ್ಬರಿಗೂ ಹೆಲ್ಮೆಟ್ ಅನಿವಾರ್ಯ. ಆದರೆ ಹಲವರಲ್ಲಿ ಒಂದು ಸಾಮಾನ್ಯ ಪ್ರಶ್ನೆ — “ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆಯಾ?” ಎಂಬುದು. ಈ ಬಗ್ಗೆ ಸಾಕಷ್ಟು ಮಿಥ್ಯೆಗಳು ಹರಿದಾಡುತ್ತಿವೆ. ಅನೇಕರು ಕೂದಲು ಉದುರುವಿಕೆಯ ಹೆದರಿಕೆಯಿಂದ ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡಿ ಪ್ರಾಣಾಪಾಯ ತಂದುಕೊಮಡವರಿದ್ದಾರೆ. ಹಾಗಾದರೆ ನಿಜ ವಿಷಯವೇನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ. ಹೆಲ್ಮೆಟ್‌ನಿಂದ ನೇರವಾಗಿ ಕೂದಲು ಉದುರುವುದಿಲ್ಲ ತಜ್ಞರ ಪ್ರಕಾರ, ಹೆಲ್ಮೆಟ್ ಧರಿಸುವುದರಿಂದ ನೇರವಾಗಿ ಕೂದಲು ಉದುರುವುದಿಲ್ಲ. ಆದರೆ ಕೆಲವು ಪರಿಸ್ಥಿತಿಗಳು ಕೂದಲಿನ ಆರೋಗ್ಯಕ್ಕೆ […]

ದಿನದ ಕೆಲವು ಸಮಯ ನಿಮ್ಮ ಮೊಬೈಲ್ ಸೈಲೆಂಟ್ ಮಾಡೋದ್ರಿಂದ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ?

ಇಂದಿನ ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನವಿಲ್ಲದೇ ಬದುಕೇ ಅಸಾಧ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಕೆಲವರಿಗಂತೂ ಒಂದರೆಘಳಿಗೆಯೂ ಮೊಬೈಲ್ ಬಿಟ್ಟು ಇರಲು ಸಾಧ್ಯವೇ ಇಲ್ಲದಾಗಿದೆ. “ನೋಮೋಫೋಬಿಯಾ” ಎಂಬ ಹೊಸ ಖಾಯಿಲೆಯೂ ಶುರುವಾಗಿದೆ.  ಇಂತಹಾ ಸಂದರ್ಭದಲ್ಲಿ ದಿನದ ಒಂದಷ್ಟು ಸಮಯ ಮೊಬೈಲ್ ಬಿಟ್ಟಿರುವುದು ಅಥವಾ ಸೈಲೆಂಟ್ ಮೋಡ್ ನಲ್ಲಿಡುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ತಿಳಿಯೋಣ. ನಿರಂತರ ರಿಂಗ್‌ಟೋನ್ ಹಾಗೂ ಮೆಸೇಜ್ ಅಲರ್ಟ್‌ಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡುವುದನ್ನು ತಡೆಯುತ್ತವೆ. ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ನಿರಂತರ ನೋಟಿಫಿಕೇಶನ್‌ಗಳು […]

ತೀವ್ರ ಶಾಖದ ಅಲೆ: ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ

ಬೇಸಿಗೆಯ ಕಾವು ಚರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಶಾಖದ ಅಲೆಗಳೂ ಬರುತ್ತಿವೆ. ಇದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ  ಹೆಚ್ಚು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ 💧 ಸಾಕಷ್ಟು ನೀರು ಕುಡಿಯಿರಿ 🧢 ಬಿಸಿಲಿನಿಂದ ರಕ್ಷಣೆ ಪಡೆಯಿರಿ 🍉 ಹಗುರ ಮತ್ತು ಆರೋಗ್ಯಕರ ಆಹಾರ ಸೇವನೆ 👕 ಬಟ್ಟೆ ಹೀಗಿರಲಿ 🧴 ಚರ್ಮದ ಆರೈಕೆ 🚰 ಆಹಾರ ಮತ್ತು ನೀರಿನ ಸುರಕ್ಷತೆ ⚠️ ಎಚ್ಚರಿಕೆ ಸೂಚನೆಗಳು ಈ […]