ದಿನದ ಕೆಲವು ಸಮಯ ನಿಮ್ಮ ಮೊಬೈಲ್ ಸೈಲೆಂಟ್ ಮಾಡೋದ್ರಿಂದ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ?

ಇಂದಿನ ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನವಿಲ್ಲದೇ ಬದುಕೇ ಅಸಾಧ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಕೆಲವರಿಗಂತೂ ಒಂದರೆಘಳಿಗೆಯೂ ಮೊಬೈಲ್ ಬಿಟ್ಟು ಇರಲು ಸಾಧ್ಯವೇ ಇಲ್ಲದಾಗಿದೆ. “ನೋಮೋಫೋಬಿಯಾ” ಎಂಬ ಹೊಸ ಖಾಯಿಲೆಯೂ ಶುರುವಾಗಿದೆ.  ಇಂತಹಾ ಸಂದರ್ಭದಲ್ಲಿ ದಿನದ ಒಂದಷ್ಟು ಸಮಯ ಮೊಬೈಲ್ ಬಿಟ್ಟಿರುವುದು ಅಥವಾ ಸೈಲೆಂಟ್ ಮೋಡ್ ನಲ್ಲಿಡುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ತಿಳಿಯೋಣ. ನಿರಂತರ ರಿಂಗ್‌ಟೋನ್ ಹಾಗೂ ಮೆಸೇಜ್ ಅಲರ್ಟ್‌ಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡುವುದನ್ನು ತಡೆಯುತ್ತವೆ.

ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ

ನಿರಂತರ ನೋಟಿಫಿಕೇಶನ್‌ಗಳು ದೇಹದಲ್ಲಿ ಒತ್ತಡ ಹಾರ್ಮೋನ್ (ಕಾರ್ಟಿಸೋಲ್) ಮಟ್ಟವನ್ನು ಹೆಚ್ಚಿಸಬಹುದು. ಸೈಲೆಂಟ್ ಮೋಡ್ ಬಳಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ.

ಏಕಾಗ್ರತೆ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ಸಹಾಯ

ಸಂಶೋಧನೆಗಳ ಪ್ರಕಾರ, ಫೋನ್ ರಿಂಗ್ ಆಗಿ ಗಮನ ಹರಿದರೆ ಹಿಂದಿನ ಕೆಲಸಕ್ಕೆ ಸಂಪೂರ್ಣ ಏಕಾಗ್ರತೆ ಮರಳಲು ಸುಮಾರು 20 ರಿಂದ 25 ನಿಮಿಷಗಳು ಬೇಕಾಗುತ್ತದೆ. ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿ ಇಡುವುದರಿಂದ ಈ ಅಡಚಣೆ ಕಡಿಮೆಯಾಗುತ್ತದೆ ಹಾಗೂ ಮೆದುಳು ದೀರ್ಘಕಾಲ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಡಿಜಿಟಲ್ ಶಿಸ್ತು ಮತ್ತು ಉತ್ತಮ ಜೀವನಶೈಲಿ

ಮೊಬೈಲ್ ಅನ್ನು ಸೈಲೆಂಟ್‌ನಲ್ಲಿ ಇಡುವವರು ಸಾಮಾನ್ಯವಾಗಿ ತಮ್ಮ ಸಮಯವನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ತಕ್ಷಣ ಪ್ರತಿಕ್ರಿಯಿಸುವ ಒತ್ತಡ ಕಡಿಮೆಯಾಗುವುದರಿಂದ Personal Boundaries ಬೆಳೆಸಲು ಸಹಾಯವಾಗುತ್ತದೆ.

ಉತ್ತಮ ನಿದ್ರೆ ಮತ್ತು ಸಂಬಂಧಗಳ ಮೇಲೆ ಪರಿಣಾಮ

ರಾತ್ರಿ ಸಮಯದಲ್ಲಿ ನೋಟಿಫಿಕೇಶನ್‌ಗಳು ಬಂದಿಲ್ಲದಿದ್ದರೆ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ, ನೇರ ಸಂಭಾಷಣೆಯಲ್ಲಿ ಫೋನ್ ಕಡೆ ಗಮನ ಕಡಿಮೆಯಾಗುವುದರಿಂದ ಸಂಬಂಧಗಳು ಹೆಚ್ಚು ಗಾಢವಾಗುತ್ತವೆ.

ಮೌನವೇ ಏಕಾಗ್ರತೆಯ ಶಕ್ತಿ

ತಜ್ಞರ ಪ್ರಕಾರ, ಫೋನ್ ಕಣ್ಣಿಗೆ ಕಾಣುತ್ತಿದ್ದರೂ ಅದು ಸೈಲೆಂಟ್‌ನಲ್ಲಿದ್ದರೂ ಗಮನವನ್ನು ಸ್ವಲ್ಪ ಮಟ್ಟಿಗೆ ಸೆಳೆಯುತ್ತದೆ. ಆದ್ದರಿಂದ ಗರಿಷ್ಠ ಏಕಾಗ್ರತೆಗೆ ಫೋನ್ ಅನ್ನು ದೂರವಿಡುವುದು ಉತ್ತಮವೆಂದು ಸಲಹೆ ನೀಡಲಾಗಿದೆ.

ಮೊಬೈಲ್ ಸೈಲೆಂಟ್‌ನಲ್ಲಿ ಇಡುವುದು ಪ್ರಪಂಚದಿಂದ ದೂರವಾಗುವುದು ಅಲ್ಲ, ಬದಲಾಗಿ ನಿಮ್ಮ ಸಮಯ, ಮನಸ್ಸು ಮತ್ತು ಏಕಾಗ್ರತೆಯನ್ನು ಉತ್ತಮವಾಗಿ ನಿಯಂತ್ರಿಸುವ ಒಂದು ಸರಳ ಅಭ್ಯಾಸವಾಗಿದೆ.