ಡೆಲಿವರಿ ಸಂದರ್ಭದಲ್ಲಿ ಗಂಡ ಜೊತೆಗಿದ್ದರೆ ಹೆರಿಗೆ ಸುಖಮಯ ಅಂತಾರೆ ತಜ್ಞರು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಹಲವು ಆಸ್ಪತ್ರೆಗಳು ಹೆರಿಗೆ ಸಮಯದಲ್ಲಿ ಪತ್ನಿಯ ಜೊತೆ ಗಂಡ ಇರಲು ಅವಕಾಶ ನೀಡುತ್ತಿವೆ. ವಿದೇಶಗಳಲ್ಲಿ ಬಹಳ ಸಾಮಾನ್ಯವಾಗಿರುವ ಈ ಪದ್ಧತಿ ಈಗ ನಮ್ಮ ದೇಶದಲ್ಲೂ ನಿಧಾನವಾಗಿ ಹೆಚ್ಚುತ್ತಿದೆ. ವೈದ್ಯರು ಮತ್ತು ತಜ್ಞರ ಪ್ರಕಾರ, ಹೆರಿಗೆ ಸಮಯದಲ್ಲಿ ಗಂಡ ಜೊತೆಯಲ್ಲಿರುವುದು ಮಹಿಳೆಯ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಭಾವನಾತ್ಮಕ ಬೆಂಬಲವನ್ನೂ ನೀಡುತ್ತದೆ. ಜೊತೆಗಾರ ನೀಡುವ ಮನೋಸ್ಥೈರ್ಯ ಹೆರಿಗೆಯ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು, ಆತಂಕ ಮತ್ತು ಒತ್ತಡದ ನಡುವೆ ತಮ್ಮ ಗಂಡ ಹತ್ತಿರದಲ್ಲಿದ್ದರೆ ಅವರಿಗೆ ಧೈರ್ಯ […]
ಹೇರ್ ಫಾಲ್ ಸಮಸ್ಯೆಗೆ ಶಾಂಪೂ ಬದಲಿಸಬೇಕಂತಿಲ್ಲ; ಈ 5 ಆಹಾರಗಳು ನಿಮ್ಮ ಡಯಟ್ ನಲ್ಲಿ ಇರಲಿ!

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಜೀವನಶೈಲಿ, ಒತ್ತಡ, ಹಾರ್ಮೋನು ಬದಲಾವಣೆಗಳು ಮತ್ತು ಪೌಷ್ಟಿಕಾಂಶದ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ದೇಹದಲ್ಲಿ ಒಮೆಗಾ-3 ಕೊರತೆಯಿದ್ದರೆ ಕೂದಲು ದುರ್ಬಲವಾಗಿ ಉದುರುವಿಕೆ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒಮೆಗಾ-3 ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದ್ದು, ಇದು ಕೂದಲು, ಚರ್ಮ, ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಕಾರಿ. ಆದರೆ ದೇಹವೇ ಇದನ್ನು ಉತ್ಪತ್ತಿ ಮಾಡಲಾರದು. ಆದ್ದರಿಂದ ಆಹಾರದ ಮೂಲಕವೇ ಪಡೆಯಬೇಕು. ಒಮೆಗಾ-3 ಕೊರತೆಯಿಂದ ಏನಾಗುತ್ತದೆ? ಒಮೆಗಾ-3 ಕೊರತೆಯಿದ್ದರೆ ನೆತ್ತಿಯಲ್ಲಿ […]
ಗಂಡ/ ಹೆಂಡತಿ ಒಬ್ಬರನ್ನೊಬ್ಬರು ಹೆಚ್ಚು ಪ್ರೀತಿಸಲು ಸಿಂಪಲ್ ಸೂತ್ರ ಇಲ್ಲಿದೆ

ಗಂಡ-ಹೆಂಡತಿ ನಡುವಿನ ಪ್ರೀತಿ ಮತ್ತು ಆತ್ಮೀಯತೆ ಹೆಚ್ಚಲು ದೊಡ್ಡ ರಹಸ್ಯಗಳ ಅಗತ್ಯವಿಲ್ಲ. ಪ್ರತಿದಿನದ ಸಣ್ಣ ಸಣ್ಣ ನಡೆಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಪ್ರೀತಿ ಹೆಚ್ಚಿಸಲು ಸರಳ ಮಾರ್ಗಗಳು ಮುಖ್ಯ ಮಂತ್ರ ನಂಬಿಕೆ + ಗೌರವ + ಸಂವಹನ + ಸಮಯ = ದೀರ್ಘಕಾಲದ ಸಂತೋಷದ ದಾಂಪತ್ಯ ಪ್ರೀತಿ ಒಂದೇ ದಿನದಲ್ಲಿ ಹೆಚ್ಚಾಗುವುದಿಲ್ಲ. ಪ್ರತಿದಿನದ ಸಣ್ಣ ಸಣ್ಣ ಕಾಳಜಿಗಳು ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ.
ಟೊಮೆಟೊ ಬೇಗ ಹಾಳಾಗುತ್ತಿದೆಯೇ? ಹೀಗೆ ಮಾಡಿದರೆ ವಾರಗಟ್ಟಲೇ ಫ್ರೆಶ್ ಆಗಿರುತ್ತದೆ!

ಎಲ್ಲರ ಮನೆಗಳಲ್ಲೂ ಟೊಮ್ಯಾಟೋ ಒಂಥರಾ ಆಪದ್ಭಾಂಧವ ಇದ್ದ ಹಾಗೆ. ಬೇರೆ ಯಾವುದೇ ತರಕಾರಿ ಇಲ್ಲದಿದ್ದರೂ ತೊಂದರೆ ಇಲ್ಲ ಟೊಮ್ಯಾಟೋ ಒಂದಿದ್ದರೆ ದಿಢೀರ್ ಅಡುಗೆ ತಯಾರಿಸಬಹುದು. ಹಾಗಾಗೇ ಪ್ರತಿಯೊಬ್ಬರ ಮನೆಯ ಅಡುಗೆಯಲ್ಲೂ ಟೊಮೆಟೊ ಪ್ರಮುಖ ಸ್ಥಾನ ಪಡೆದಿದೆ. ಸಾಂಬಾರ್, ದಾಲ್, ಕರಿ ಸೇರಿದಂತೆ ಬಹುತೇಕ ಎಲ್ಲಾ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಟೊಮೆಟೊ ಇಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ. ಆದರೆ ಗೃಹಿಣಿಯರಿಗೆ ಟೊಮ್ಯಾಟೋ ಕೊಳೆತು ಹೋಗದಂತೆ ವಾರಗಟ್ಟಲೇ ಸಂರಕ್ಷಿಸಿಟ್ಟಿಕೊಳ್ಳುವುದೇ ಒಂದು ದೊಡ್ಡ ತಲೆಬಿಸಿ. ಟೊಮೆಟೊದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ […]
ಕೃಷಿ ಭೂಮಿಯಲ್ಲಿ ಮನೆ ಕಟ್ಟೋ ಪ್ಲಾನ್ ನಿಮಗಿದ್ಯಾ? ಹಾಗಾದ್ರೆ ಈ ನಿಯಮ ನಿಮಗೆ ತಿಳಿದಿರ್ಲೇಬೇಕು

ಒಂದು ಸಣ್ಣದಾದರೂ ತೋಟ, ಜಮೀನು ಖರೀದಿಸುವುದು, ಅಲ್ಲೊಂದು ಪುಟ್ಟದಾದರೂ ಮನೆ ಕಟ್ಟಿ ನೆಮ್ಮದಿಯಿಂದ ಜೀವನ ನಡೆಸೋದು ಪ್ರತಿಯೊಬ್ಬರ ಕನಸು. ಭೂಮಿ ಖರೀದಿ ಅಥವಾ ಮನೆ ನಿರ್ಮಾಣ ಮಾಡುವ ಮುನ್ನ ಬಹುತೇಕ ಜನರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆಗಳಲ್ಲಿಕೃಷಿ ಭೂಮಿಯಲ್ಲಿ ಮನೆ ಕಟ್ಟಬಹುದೇ? ಎಂಬುದೂ ಒಂದು. ಇದರ ಉತ್ತರ ಸರಳವಾಗಿಲ್ಲ. ಕೆಲವು ಕಾನೂನು ಕ್ರಮಗಳನ್ನು ಪಾಲಿಸಿದರೆ ಮಾತ್ರ ಮನೆ ನಿರ್ಮಾಣ ಸಾಧ್ಯ. ಕೃಷಿ ಭೂಮಿ ಎಂದರೇನು? ಕೃಷಿ ಭೂಮಿ ಎಂದರೆ ಬೆಳೆ ಬೆಳೆಸಲು, ಹಣ್ಣು-ತರಕಾರಿಗಳು ಬೆಳೆಯಲು, ಹೈನುಗಾರಿಕೆ ಅಥವಾ ಕೋಳಿ […]