SBI Scholarship 2026: ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ₹15 ಲಕ್ಷದವರೆಗೆ ಸ್ಕಾಲರ್‌ಶಿಪ್; ಅರ್ಜಿ ಸಲ್ಲಿಸಿ, ನಿಮ್ಮ ಶಿಕ್ಷಣದ ಕನಸನ್ನು ನನಸಾಗಿಸಿ!

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫೌಂಡೇಶನ್ ಮತ್ತೊಂದು ಮಹತ್ವದ ಅವಕಾಶವನ್ನು ನೀಡುತ್ತಿದೆ. **‘SBI ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್‌ಶಿಪ್ 2026-27’**ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 9ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳವರೆಗೆ ಈ ವಿದ್ಯಾರ್ಥಿವೇತನ ಅನ್ವಯಿಸುತ್ತದೆ. ವಿದ್ಯಾರ್ಥಿಯ ಶಿಕ್ಷಣ ಮಟ್ಟ ಮತ್ತು ಕೋರ್ಸ್‌ಗೆ ಅನುಗುಣವಾಗಿ ವಾರ್ಷಿಕ ₹15 ಸಾವಿರದಿಂದ ಗರಿಷ್ಠ ₹15 ಲಕ್ಷದವರೆಗೆ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ. […]

ಹೆಂಡತಿ-ಮಕ್ಕಳಿಲ್ಲದೆ ವ್ಯಕ್ತಿ ಮೃತಪಟ್ಟರೆ ಆಸ್ತಿ ಯಾರ ಪಾಲಿಗೆ ಹೋಗುತ್ತದೆ? ಮಾಹಿತಿ ತಿಳಿಯಿರಿ

ಒಬ್ಬ ವ್ಯಕ್ತಿ ವಿಲ್ ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ. ಅದರಲ್ಲೂ ಮೃತರಿಗೆ ಹೆಂಡತಿ, ಮಕ್ಕಳು ಇಲ್ಲದಿದ್ದರೆ ಇಡೀ ಆಸ್ತಿ ಅಣ್ಣ-ತಂಗಿಯರಿಗೆ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಕಾನೂನಿನಲ್ಲಿ ಉತ್ತರಾಧಿಕಾರಿಗಳಿಗೆ ನಿಗದಿತ ಆದ್ಯತೆಯ ಕ್ರಮವಿದೆ. ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಸಂಬಂಧಿಸಿದಂತೆ ಉತ್ತರಾಧಿಕಾರದ ಪ್ರಮುಖ ನಿಯಮಗಳನ್ನು ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ನಿಯಂತ್ರಿಸುತ್ತದೆ. ವಿಲ್ ಇಲ್ಲದೆ ಹಿಂದೂ ಪುರುಷ ಮೃತಪಟ್ಟಾಗ ಮೊದಲು Class I ಉತ್ತರಾಧಿಕಾರಿಗಳನ್ನು ಪರಿಗಣಿಸಲಾಗುತ್ತದೆ. […]

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ಭಾರತೀಯ ವಾಯುಪಡೆಯ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಆಪರೇಷನ್ ಸಿಂಧೂರ್‌ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಜೀತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಅನುಭವಿ ಯುದ್ಧ ವಿಮಾನ ಪೈಲಟ್ ಆಗಿರುವ ಅವರು ಭಾರತೀಯ ವಾಯುಪಡೆಯಲ್ಲಿ 38 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಜೀತೇಂದ್ರ ಮಿಶ್ರಾ ಯಾರು? ನಿವೃತ್ತ ಏರ್‌ […]

ಬೇರೆಲ್ಲಾ ಆಯ್ತು, ಈಗ ಐಸ್ ಕ್ರೀಂ ಉದ್ಯಮಕ್ಕೂ ಜಿಗಿದ ರಿಲಯನ್ಸ್!

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್‌ನ ಎಫ್‌ಎಂಸಿಜಿ ವಿಭಾಗದ ಸಂಸ್ಥೆಯಾಗಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ಇದೀಗ ಭಾರತದ ಐಸ್‌ಕ್ರೀಂ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿದೆ. ಸಂಸ್ಥೆಯ ಹೊಸ ಐಸ್‌ಕ್ರೀಂ ಬ್ರ್ಯಾಂಡ್ ಬಾಂಬೆ ಕ್ರೀಮರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ವಿಶ್ವದರ್ಜೆಯ ಗುಣಮಟ್ಟ, ಕೈಗೆಟುಕುವ ಬೆಲೆ ಎಂಬ ಉದ್ದೇಶದೊಂದಿಗೆ ಬಾಂಬೆ ಕ್ರೀಮರಿ ಬ್ರ್ಯಾಂಡ್ ಅನ್ನು ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಕೃತಕ ಉತ್ಪನ್ನಗಳ ನಡುವೆ, ನೈಜ ಹಾಲಿನ ಕೆನೆಯಿಂದ ತಯಾರಿಸಿದ ಗುಣಮಟ್ಟದ ಐಸ್‌ಕ್ರೀಂ ಅನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದು ಕಂಪನಿಯ […]

ವಿಶ್ವದ ಏಕೈಕ ‘ಓಂ’ ಆಕಾರದ ಶಿವ ದೇವಾಲಯ; ಇಲ್ಲಿದೆ 1,008 ಶಿವಲಿಂಗಗಳು

ದೇವಾಲಯಗಳ ವಾಸ್ತುಶಿಲ್ಪವೇ ಒಂದು ಅದ್ಭುತ. ‘ಓಂ ಆಶ್ರಮ’ ತನ್ನ ವಿಶಿಷ್ಟ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ‘ಓಂ’ ಸಂಕೇತದ ಆಕಾರದಲ್ಲಿ ನಿರ್ಮಿಸಲಾದ ಭವ್ಯ ದೇವಾಲಯವು ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಅಪರೂಪದ ಸಂಗಮವಾಗಿದ್ದು, ರಾಜಸ್ಥಾನದ ಪಾಲಿ ಜಿಲ್ಲೆಯ ಜಾದನ್ ಗ್ರಾಮದಲ್ಲಿದೆ ಈ ದೇವಾಲಯ. ಸುಮಾರು 250 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ದೇವಾಲಯ ಸಂಕೀರ್ಣವು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಸುಮಾರು 2,000 ಕಂಬಗಳ ಮೇಲೆ ನಿಂತಿರುವ ಮುಖ್ಯ ರಚನೆ ಸುಮಾರು 135 ಅಡಿ ಎತ್ತರ ಹೊಂದಿದೆ. 1,008 ಶಿವಲಿಂಗಗಳು, […]