ಒಂದು ನೀರಿನ ಬಾಟಲಿಗೆ ಗ್ರಾಹಕರಿಂದ ರೂ.7 ಹೆಚ್ಚುವರಿ ಪಡೆಯುವ ಆಸೆಯಲ್ಲಿ 7 ಲಕ್ಷ ಕಳೆದುಕೊಂಡ ಅಂಗಡಿ ಮಾಲಿಕ!

ಕೆಲವೊಮ್ಮೆ ಅಂಗಡಿ ಮಾಲಿಕರು ಕೆಲವೊಂದು ವಸ್ತುಗಳಿಗೆ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಾರೆ. ಅತೀಯಾದ ಲಾಭದ ಆಸೆಯಿಂದ ಹೆಚ್ಚುವರಿ ಬೆಲೆ ವಿಧಿಸುತ್ತಾರೆ. ಗ್ರಾಹಕರು ಈ ಕುರಿತು ಏನನ್ನೂ ಪ್ರಶ್ನಿಸದೇ ಸುಮ್ಮನಾಗುತ್ತಾರೆ. ಆದರೆ ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಕೇವಲ 7 ರೂ. ಹೆಚ್ಚುವರಿಯಾಗಿ ವಸೂಲಿ ಮಾಡಿದ ಅಂಗಡಿ ಮಾಲೀಕನಿಗೆ ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ. ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಗ್ರಾಹಕರ ಆಯೋಗದ ಮೊರೆ […]
ಮಾರುತಿ ಸುಜುಕಿ ಕಾರು ಪ್ರಿಯರಿಗೆ ಶಾಕ್, ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ಕಂಪೆನಿ!

ನವದೆಹಲಿ: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ಆಯ್ದ ಕಾರು ಮಾದರಿಗಳ ಬೆಲೆಯನ್ನು ಗರಿಷ್ಠ ₹20,000ವರೆಗೆ ಹೆಚ್ಚಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 2026ರಿಂದಲೇ ಜಾರಿಗೆ ಬಂದಿವೆ. ಮೇ ತಿಂಗಳಿನಿಂದ ಕಂಪನಿ ಬೆಲೆ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ. ಈ ಬಾರಿ ಎಲ್ಲ ಮಾದರಿಗಳ ಬದಲಿಗೆ ಆಯ್ದ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗಲಿದೆ. ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ […]
ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ₹1.38 ಕೋಟಿ ಮೌಲ್ಯದ ಆಹಾರ ವಶ

ಬೆಂಗಳೂರು: ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್ ಮಾಡದ ಆಹಾರ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹದ ವಿರುದ್ಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ಜಾರಿ ಕಾರ್ಯಾಚರಣೆ ನಡೆಸಿದೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿರುವ ಅಮೆಜಾನ್ ಹಾಗೂ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು ₹1.38 ಕೋಟಿ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ-1940ರ ಅಡಿಯಲ್ಲಿ ನೇಮಕಗೊಂಡ ಅಧಿಕಾರಿಗಳು […]
ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್: ಇನ್ನು ಗ್ರಾಮೀಣ ಪ್ರದೇಶದಲ್ಲಿ 25 ದಿನಕ್ಕೊಮ್ಮೆ ಸಿಲಿಂಡರ್!

ನವದೆಹಲಿ: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸೌಲಭ್ಯ ಘೋಷಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ರಿಫಿಲ್ ಬುಕ್ಕಿಂಗ್ ನಡುವಿನ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಲಾಗಿದೆ ಎಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಸೋಮವಾರ ತಿಳಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ಗೃಹಬಳಕೆ ಎಲ್‌ಪಿಜಿ ಗ್ರಾಹಕರು ಇನ್ನು ಮುಂದೆ 25 ದಿನಗಳಿಗೊಮ್ಮೆ ರಿಫಿಲ್ ಬುಕ್ ಮಾಡಬಹುದಾಗಿದೆ. ಈ ವ್ಯವಸ್ಥೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಕೇಂದ್ರ […]
ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ! ಪತಿಯನ್ನು ಬಿಡುಗಡೆಗೊಳಿಸಲು ಮೋದಿ, ಯೋಗಿಗೆ ಪತ್ನಿ ಮನವಿ

ಮಾಸ್ಕೋ: ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದ ದೆಹಲಿಯ ಟೆಕ್ಕಿಯೊಬ್ಬರನ್ನು ಮಾಸ್ಕೋ ಪೊಲೀಸರು ಬಂಧಿಸಿರುವ ಆರೋಪ ಕೇಳಿಬಂದಿದೆ. ಪತಿಯನ್ನು ಬಿಡುಗಡೆಗೊಳಿಸಿ ನೆರವು ನೀಡುವಂತೆ ಅವರ ಪತ್ನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ. ನೋಯ್ಡಾದ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಚಂದನ್ ಗುಪ್ತಾ ಅವರನ್ನು ಪೊಲೀಸರು ರಾತ್ರಿ 12.30ರ ಸುಮಾರಿಗೆ ಕರೆದೊಯ್ದಿದ್ದಾರೆ ಎಂದು ಪತ್ನಿ ಸ್ನೇಹ ಗುಪ್ತಾ ಆರೋಪಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ […]