ಸೆಪ್ಟೆಂಬರ್‌ ಆರಂಭದಲ್ಲೇ ಏರಿತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ,ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಶಾಕ್

ನವದೆಹಲಿ: ಸೆಪ್ಟೆಂಬರ್‌ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರಿಗೆ ದರ ಏರಿಕೆಯ ಶಾಕ್‌ ನೀಡಿವೆ. 19 ಕೆ.ಜಿ. ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ₹9.50ರವರೆಗೆ ಹೆಚ್ಚಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ (IOCL) ಮಾಹಿತಿಯಂತೆ, ವಾಣಿಜ್ಯ ಸಿಲಿಂಡರ್‌ ದರ ಪರಿಷ್ಕರಣೆಯಾಗಿದ್ದರೂ ಗೃಹ ಬಳಕೆಯ 14 ಕೆ.ಜಿ. ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಕೆ.ಜಿ. ಹಾಗೂ 10 ಕೆ.ಜಿ. ಸಿಲಿಂಡರ್‌ಗಳ ದರದಲ್ಲೂ ಹೆಚ್ಚಿನ ಬದಲಾವಣೆ ಇಲ್ಲ. ಸಿಲಿಂಡರ್‌ಗಳ ಪರಿಷ್ಕೃತ ದರ:

ಸೆ.1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವ ಮೊದಲು ಈ ಎಲ್ಲಾ ವಿಷಯಗಳು ನಿಮಗೆ ತಿಳಿದಿರಲೇಬೇಕು!

ನವದೆಹಲಿ, ಸೆಪ್ಟೆಂಬರ್ 1ರಿಂದ ಎಲ್‌ಪಿಜಿ (LPG) ಬಳಕೆದಾರರಿಗೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಎಲ್‌ಪಿಜಿ ಸಿಲಿಂಡರ್ ಬಳಸುವ ಗ್ರಾಹಕರು ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ಕೆಲವು ಬದಲಾವಣೆಗಳು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. LPG e-KYC ಕಡ್ಡಾಯ LPG e-KYC ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಆಗಸ್ಟ್ 23ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. e-KYC ಪೂರ್ಣಗೊಳಿಸದ ಗ್ರಾಹಕರ LPG ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, […]

LAC ಯಲ್ಲಿ ಬದಲಾಯ್ತು ಇಡೀ ಲೆಕ್ಕಾಚಾರ, ಚೀನಾಗೆ ಉತ್ತರ ಕೊಡಲು ಸಿಕ್ತು ಹೊಸ ಮಾರ್ಗ, ಡ್ರ್ಯಾಗನ್‌ಗೆ ಕಂಟಕವಾಯ್ತು ಆ ರಸ್ತೆ

ಕುರುಂಗ್ ಕುಮೆ ಜಿಲ್ಲೆಯ ಹುರಿಯಿಂದ ಅಪ್ಪರ್ ಸುಬನ್ಸಿರಿಯ ಟಕ್ಸಿಂಗ್ ವರೆಗೆ 95.348 ಕಿಲೋಮೀಟರ್ ಉದ್ದದ ಎಲ್ಲಾ ಹವಾಮಾನ ಗ್ರೀನ್‌ಫೀಲ್ಡ್ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ನವದೆಹಲಿ(ಆ.31): ಅರುಣಾಚಲ ಪ್ರದೇಶದ ಅತ್ಯಂತ ಸೂಕ್ಷ್ಮ ಮತ್ತು ದುರ್ಗಮ ಗಡಿಗೆ ಭಾರತೀಯ ಸೇನೆಯ ಪ್ರವೇಶವನ್ನು ಭದ್ರಪಡಿಸಿಕೊಳ್ಳಲು ಗಡಿ ರಸ್ತೆಗಳ ಸಂಸ್ಥೆ (BRO) ಒಂದು ಭವ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಕುರುಂಗ್ ಕುಮೆ ಜಿಲ್ಲೆಯ ಹುರಿಯಿಂದ ಅಪ್ಪರ್ ಸುಬನ್ಸಿರಿಯ ಟಕ್ಸಿಂಗ್ ವರೆಗೆ 95.348 ಕಿಲೋಮೀಟರ್ ಉದ್ದದ ಎಲ್ಲಾ ಹವಾಮಾನ ಗ್ರೀನ್‌ಫೀಲ್ಡ್ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ತನ್ನ […]

ಜಿಯೋ–ಏರ್‌ಟೆಲ್‌ಗೆ ಸೆಡ್ಡು ಹೊಡೆಯಲು BSNL–Vi ಜೊತೆಯಾಟ, ನೆಟ್‌ವರ್ಕ್ ಹಂಚಿಕೆಗೆ ಮಹತ್ವದ ಹೆಜ್ಜೆ:ಸದ್ದು ಮಾಡಲಿದೆ BSNL ಮತ್ತು ವೊಡಾಫೋನ್ ಐಡಿಯಾ!

ಬೆಂಗಳೂರು: ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಳ ಪಾರುಪತ್ಯಕ್ಕೆ ಸವಾಲು ಹಾಕಲು ಬಿಎಸ್ಎನ್ಎಲ್ ಹಾಗೂ ವೊಡಾಫೋನ್ ಐಡಿಯಾ (Vi) ಹೊಸ ತಂತ್ರ ರೂಪಿಸಿವೆ. ಎರಡೂ ಸಂಸ್ಥೆಗಳು ತಮ್ಮ ನೆಟ್‌ವರ್ಕ್ ಹಾಗೂ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಮುಂದಾಗಿದ್ದು, ಈ ಒಪ್ಪಂದ ಜಾರಿಯಾದರೆ ಗ್ರಾಹಕರಿಗೆ ನೆಟ್‌ವರ್ಕ್ ವ್ಯಾಪ್ತಿ ಹೆಚ್ಚುವ ಜತೆಗೆ ಎರಡೂ ಕಂಪನಿಗಳ ವೆಚ್ಚವೂ ತಗ್ಗಲಿದೆ. ವೊಡಾಫೋನ್ ಐಡಿಯಾ ಸಿಇಒ ಅಭಿಜಿತ್ ಕಿಶೋರ್ ಮತ್ತು ಬಿಎಸ್ಎನ್ಎಲ್ ಸಿಎಂಡಿ ರಾಬರ್ಟ್ ಜೆ. ರವಿ ನಡುವೆ ನಡೆದ ಸಭೆಯಲ್ಲಿ ಈ ಕುರಿತು […]

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 392ಕ್ಕೆ ಏರಿಕೆ,1,500ಕ್ಕೂ ಅಧಿಕ ಮಂದಿ ನಾಪತ್ತೆ

ಕಠ್ಮಂಡು: ಕಳೆದ 30 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ನೇಪಾಳ ತತ್ತರಿಸಿದ್ದು, ಜಲಪ್ರಳಯದಲ್ಲಿ ಸಾವಿನ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. Nepal ಬುಧವಾರ (ಆ.6) ಸಂಭವಿಸಿದ ಭೀಕರ ಪ್ರವಾಹದಿಂದ ದೇಶಾದ್ಯಂತ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಚಿತ್ರಾನ್, ನವಲ್ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಸಾವುನೋವು ವರದಿಯಾಗಿದೆ. ಪ್ರವಾಹದಲ್ಲಿ ನಾಪತ್ತೆಯಾಗಿರುವವರಿಗಾಗಿ ನೇಪಾಳದ ಸೇನೆ ಹಾಗೂ ರಕ್ಷಣಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಸಕ್ಕೆ ತೆರಳಿದ್ದ […]