ನಕ್ಷತ್ರದ ಹಾಗೆ ಮಿರಿ ಮಿರಿ ಮಿಂಚುವ ನನ್ನ ಕಿವಿಯೋಲೆಯ ಕತೆಯಿದು: ಸ್ವಾತಂತ್ರ್ಯ ಬರೆದ ತಣ್ಣಗಿನ ಬರಹ

ಕಿ ವಿಯೋಲೆ ಅಂದ್ರೆ ನನ್ನಂತ ಕೆಲವರಿಗಂತೂ ಬಣ್ಣ ಬಣ್ಣದ ಕನಸಿನ ಹಾಗೆ, ನಕ್ಷತ್ರಗಳ ಬೆಳಕಿನ ಹಾಗೆ, ಮನದಾಳದ ಹಾಡಿನ ಹಾಗೆ, ಮಳೆಯ ಹಾಗೆ, ಕೊಳಲ ಇಂಪಿನ ಹಾಗೆ, ಇನ್ನೂ ಏನೇನೋ. ಒಂದೊಂದು ಕಿವಿಯೋಲೆಗೂ ಒಂದೊಂದು ಕಥೆ, ಒಂದೊಂದು ನೆನಪು. ಜಾತ್ರೆಯಲ್ಲಿ ರಾಶಿ ಜನಗಳ ಮಧ್ಯೆ ಚಕ ಪಕ ನಕ್ಷತ್ರದ ಹಾಗೆ ಹೊಳೆಯುವ ಆ ಕಿವಿಯೋಲೆಯ ಅಂಗಡಿಯನ್ನ ನೋಡದೆ, ಮಾತನಾಡಿಸದೆ, ಸ್ಪರ್ಶಿಸದೆ, ಇಷ್ಟವಾದ್ರೆ ಕೊಳ್ಳದೆ ಇರೋಕ್ಕೆ ಸಾಧ್ಯವೇ ಇಲ್ಲ. ಒಂದಕ್ಕಿಂತ ಒಂದು ಚಂದ. ಒಂದೇ ಕೊಂಡರೆ ಇನ್ನೊಂದಕ್ಕೆ ಬೇಸರ […]
ನಿನ್ನೆ ಮೊನ್ನೆ ನಮ್ಮೊಂದಿಗೆ ಹರಟೆ ಹೊಡೆಯುತ್ತಿದ್ದವರು ಈಗಿಲ್ಲ ಅಂದರೆ ನಂಬೋದು ಹೇಗೆ?:ಶ್ರದ್ದಾ ಬರೆದ ಬರಹ

ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ನಿನ್ನೆ ಮೊನ್ನೆ ಎಲ್ಲಾ ಹಕ್ಕಿಯಂತೆ ಹಾಯಾಗಿ ಹಾರಾಡುತ್ತ ಇದ್ದ ನಾವು ಈಗ ಪಂಜರದ ಹಕ್ಕಿಯಂತೆ ಬಂಧಿಯಾಗಿದ್ದೇವೆ. ಬೆನ್ನು ಹಿಡಿದ ಬೇತಾಳನಂತೆ ಈ ರೋಗ ನಮ್ಮನ್ನು ಹಿಂಬಾಲಿಸುತ್ತಿದೆ. ಇತ್ತೀಚೆಗೆ ಮಳೆಗಾಲದ ಹೊತ್ತಿನಲ್ಲಿ ಬರುವ ಶೀತ ಜ್ವರಗಳಿಗೂ ಕರೋನಾ ಎನ್ನುವಂತಾಗಿದೆ. ಜನರು ಈ ವೈರಸ್ ಗೆ ಎಷ್ಟು ಬೆಂದು ಹೋಗಿದ್ದಾರೆ ಎಂದರೆ ಸಾಮಾನ್ಯ ಜ್ವರಕ್ಕೂ ಮದ್ದು ತರಲು ಹೋಗಲು ಹಿಂದೆ ಮುಂದೆ ನೋಡುತ್ತಾರೆ. ಇತ್ತೀಚೆಗೆ ಹಳ್ಳಿ ಪ್ರದೇಶದ ಬಡಕುಟುಂಬಗಳಿಗೆ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಾರೆ. […]
ಕಹಿ ಕ್ಷಣಗಳನ್ನು ನುಂಗಿಬಿಡೋಣ, ಖುಷಿಯ ಕ್ಷಣವನ್ನು ಚಾಕ್ಲೇಟ್ ನಂತೆ ಚಪ್ಪರಿಸೋಣ: ಗೌತಮಿ ಬರೆದ ಬರಹ

ಗೌತಮಿ ಕಾಮತ್ , ಬಿ.ಎ ಪತ್ರಿಕೋದ್ಯಮ ವಿಭಾಗ, ಎಂ.ಪಿ.ಎಂ.ಕಾಲೇಜು ಕಾರ್ಕಳ ಅದೃಷ್ಟ ಇದ್ದಾಗ ಮುಟ್ಟಿದ್ದೆಲ್ಲ ಚಿನ್ನ ಅಂತಾರೆ. ಆದರೆ ಶ್ರಮಪಡದೇ ಬಿತ್ತಿದ ಬೀಜ ಎಂದೂ ಅನ್ನ ಆಗುವುದಿಲ್ಲ. ನಾವು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿ ಎತ್ತರಕ್ಕೆ ಬೆಳೆದರೂ ಆ ಅನ್ನವನ್ನು ತಿನ್ನಲು ತಲೆಬಾಗಲೇಬೇಕು. ಅದೇ ರೀತಿ ಜೀವನದ ಪಯಣದಲ್ಲಿ ಅನೇಕ ದಾರಿಗಳು ಸುಂದರವಾಗಿಯೇ ಕಾಣಬಹುದು, ಆದರೆ ನಾವು ನಮ್ಮ ಗುರಿಯ ಬಗ್ಗೆ ಯೋಚಿಸಬೇಕು. ಆ ಗುರಿ ಸುಂದರವಾಗಿದ್ದರೆ ಗುರಿ ಸಾಧಿಸುವ ಆ ದಾರಿಯನ್ನೂ ಸುಂದರಗೊಳಿಸೋದು ಹೇಗೆ ಅಂತ […]
ಹೃದಯ ಬಡಿದರೆ ಬರಲಿ ಕನ್ನಡ: ಶರಧಿ ಶೆಟ್ಟಿ ಬರೆದ ಕನ್ನಡಾಭಿಮಾನದ ಬರಹ

»ಶರಧಿ ಶೆಟ್ಟಿ ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು ಕಾಮನ ಬಿಲ್ಲನ್ನು ಕವಿಯೊಳು ತೆಕ್ಕನೆ ಮನೆ ಮೈ ಮರೆಯುವುದು ಕನ್ನಡ ಎಂದರೆ ನಾವು ಅತ್ಯಂತ ಪ್ರೀತಿಯಿಂದ ಆರಾಧನಾ ಭಾವನೆಯಿಂದ ನೋಡುತ್ತೇವೆ. ಹಿಂದಿ, ಬಂಗಾಳಿ ಮತ್ತು ಪಂಜಾಬಿ ಈ ಭಾಷೆಗಳು ಇತ್ತೀಚಿನ ಭಾಷೆಗಳು.ಈ ಕನ್ನಡ ಎನ್ನುವಂತಹ ಒಂದು ಲೋಕ ಒಂದು ರಾಜ್ಯದ ಸ್ವರೂಪ.ಅಂದರೆ ಕನಾ೯ಟಕ ಎಂಬ ರೂಪ ಪಡೆದುಕೊಂಡಿದೆ.ಕನ್ನಡಕ್ಕೆ ಸುಮಾರು ೨೦೦೦ ವಷ೯ ಸುದೀರ್ಘ ಇತಿಹಾಸವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ವಿವಿಧ ರೂಪದಲ್ಲಿ ೪೫ ದಶಲಕ್ಷ […]
ನಿನ್ನನ್ನು ಹಚ್ಚಿಕೊಂಡಷ್ಟು ಪ್ರೀತಿ ಹೆಚ್ಚಾಗುತ್ತಿದೆ

♥ ರಮ್ಯ ಬೋಳಂತೂರು ನನ್ನ ಕನಸಿನ ಕೂಸು ಕಣೋ ನೀನು. ನೀನಿಲ್ಲದೆ ಈ ಸಂಜೆ ಯಾಕಾಗಿದೆ ಅಂತ ಅನಿಸುತ್ತಿದೆ. ಪ್ರೀತಿಯೆಂಬ ಪಲ್ಲಕ್ಕಿಯಲ್ಲಿ ತೇಲಾಡುತ್ತಿರುವ ನನಗೆ ನಿನ್ನದೇ ಕನವರಿಕೆ. ಹೇಗೂ ನನ್ನ ಪಾಡಿಗೆ ಇದ್ದ ಮನಸ್ಸು ಈಗ ನಿನ್ನ ಪ್ರೀತಿಯಲ್ಲಿ ಕಳೆದು ಹೋಗಿದೆ. ಈ ಪ್ರೀತಿಯ ನಡುವೆಯೂ ಜಗಳ ತಮಾಷೆ ಎಷ್ಟೊಂದಿದೆ. ನನ್ನ ಪ್ರೀತಿಯ ಇನಿಯಾಗಿ, ಗೆಳೆಯನಾಗಿ ಪ್ರೀತಿ ,ಕಾಳಜಿ, ನಿನ್ನ ನಗು ಮಾತು ಎಲ್ಲಾ ನೋವುಗಳನ್ನು ಮರೆಸಿ ಹೊಸ ಚೈತನ್ಯವನ್ನು ಮೂಡಿಸಿ ನನ್ನ ಎಲ್ಲಾ ಕೆಲಸಕ್ಕೆ ಸಾಥ್ […]