ನಿನ್ನನ್ನು ಹಚ್ಚಿಕೊಂಡಷ್ಟು ಪ್ರೀತಿ ಹೆಚ್ಚಾಗುತ್ತಿದೆ

♥ ರಮ್ಯ ಬೋಳಂತೂರು

ನನ್ನ ಕನಸಿನ ಕೂಸು ಕಣೋ ನೀನು. ನೀನಿಲ್ಲದೆ ಈ ಸಂಜೆ ಯಾಕಾಗಿದೆ ಅಂತ ಅನಿಸುತ್ತಿದೆ. ಪ್ರೀತಿಯೆಂಬ ಪಲ್ಲಕ್ಕಿಯಲ್ಲಿ ತೇಲಾಡುತ್ತಿರುವ ನನಗೆ ನಿನ್ನದೇ ಕನವರಿಕೆ. ಹೇಗೂ ನನ್ನ ಪಾಡಿಗೆ ಇದ್ದ ಮನಸ್ಸು ಈಗ ನಿನ್ನ ಪ್ರೀತಿಯಲ್ಲಿ ಕಳೆದು ಹೋಗಿದೆ. ಈ ಪ್ರೀತಿಯ ನಡುವೆಯೂ ಜಗಳ ತಮಾಷೆ ಎಷ್ಟೊಂದಿದೆ.

ನನ್ನ ಪ್ರೀತಿಯ ಇನಿಯಾಗಿ, ಗೆಳೆಯನಾಗಿ ಪ್ರೀತಿ ,ಕಾಳಜಿ, ನಿನ್ನ ನಗು ಮಾತು ಎಲ್ಲಾ ನೋವುಗಳನ್ನು ಮರೆಸಿ ಹೊಸ ಚೈತನ್ಯವನ್ನು ಮೂಡಿಸಿ ನನ್ನ ಎಲ್ಲಾ ಕೆಲಸಕ್ಕೆ ಸಾಥ್ ನೀಡುವ ರಾಜ ನೀನು.

ಪ್ರೀತಿ ಇದ್ದಲ್ಲಿ ಜಗಳ ಜಾಸ್ತಿನೇ. ಹೌ ದು ನಮ್ಮಿಬ್ಬರ ನಡುವೆ ಜಾಗಳ ಕ್ಷಣಿಕ ಮಾತ್ರ. ಮತ್ತೆ ಅದೇ ಪ್ರೀತಿಯನ್ನು ತೋರಿಸುತ್ತ ನಾನು ನೀನನ್ನು ಮತ್ತೆ ಮತ್ತೆ ಹೆಚ್ಚು ಪ್ರೀತಿಸುವಂತೆ ಮಾಡುತ್ತಿರುವ ಕಳ್ಳ ನೀನು.

ಮೊದಲ ಸಲ ನೋಡಿದ ದಿನವೇ ನಿನ್ನ ಮಾತಿಗೆ, ನೋಟಕೆ ಮರುಳಾದೆ. ಮತ್ತೆ ಮಾತನಾಡಿಸಬೇಕಂಬ ತವಕ ನನ್ನಲ್ಲಿ. ಅಲ್ಲಿಂದ ನಮ್ಮಿಬ್ಬರ ಪ್ರೀತಿಯ ಪಯಣ ಶುರುವಾಯ್ತು. ನಿನ್ನ ಪ್ರೀತಿಯ, ಮಮತೆಯ ಮಡಿನಲ್ಲಿ ಮಗುವಾಗುವ ಆಸೆ ನನಗೆ.

ನಿನ್ನ ಜೊತೆ ಇನ್ನೊಂದು ಹುಡುಗಿ ಆತ್ಮೀಯವಾಗಿ ಮಾತನಾಡಿಸಿದರೆ ನನಗೆ ಮತ್ಸರ ಆಗುತ್ತೆ .ಇದು ಪ್ರತಿಯೊಂದು ಹೆಣ್ಣಿಗೂ ಆಗುವುದು ಸಹಜ ಹಾಗೇ ನನಗೂ ಕೂಡಾ.

ಯಾರಿಗೂ ಪ್ರವೇಶ ಇಲ್ಲದ ನಿನ್ನ ಮನಸಿನಲಿ ನನಗೊಂದು ಪುಟ್ಟ ಜಾಗವನ್ನು ನೀಡಿ ಕಾಪಾಡುತಿರುವ ನೀನು. ನನ್ನ ತುಂಟಾಟ, ಕೋಪವನ್ನು ಸಹಿಸಿಕೊಂಡು ಹತ್ತಿರವಾಗುತ್ತಿರುವ ಗೆಳೆಯ. ಒಬ್ಬಂಟಿಯಾಗಿದ್ದ ನಾನು, ನಿನ್ನ ಅನುಮತಿಯಿಲ್ಲದೆ ನಿನ್ನನ್ನು ಪ್ರೀತಿಸಿದೆ. ನಾವಿಬ್ಬರೂ ಗುಬ್ಬಚ್ಚಿಯಂತೆ ಜೊತೆ ಜೊತೆಯಾಗಿ ನಡೆಯೋಣ ನನ್ನ ಮನಸು ಕದ್ದ ಚಕೋರನೇ. ನಿನ್ನ ಪ್ರತಿ ಹೆಜ್ಜೆಯಲ್ಲಿ ನಾ ಜೊತೆಯಾಗುವೆ, ನಿನ್ನ ಪ್ರತಿ ನೋವು ನಲಿವಿಗೂ ಒಡತಿಯಾಗುವೆ.
                     ರಮ್ಯ ಬೋಳಂತೂರು