ಕಾಡುವ ಅಪ್ಪನ ಕುರಿತು ವಿಶ್ವಪ್ರಕಾಶ ಮಲಗೊಂಡ ಬರೆದ ಆಪ್ತ ಸಾಲುಗಳು

ಅ ಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..! ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ! ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ! ಅಪ್ಪ ಅತ್ತಿದ್ದು ಕಂಡವರು ಕಡಿಮೆ ! ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ! ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ ಗಮನಿಸಿದವರಾರು?! ಧರೆಯ ನಿತ್ಯ ಪೊರೆವ ಅಂಬರದಂತೆ ತಂದೆ ಸತಿಸುತರ ಹಗಲಿರುಳು ಕಾಯ್ವ ವಾತ್ಸಲ್ಯಧಾರೆ ! ಅಮ್ಮನ ಮಡಿಲಿಂದ ಕೈಹಿಡಿದು ನಮ್ಮನ್ನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ […]

ಸಿಂಪಲ್ಲಾಗಿ ಕಲೀರಿ ಇಂಗ್ಲೀಷ್:ಈ ವಾರದ ಇಂಗ್ಲೀಷ್ ಕ್ಲಾಸ್ ವಿಡಿಯೋ ಇಲ್ಲಿದೆ

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಜೀರೋ ಟು ಹೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ. ಇಂಗ್ಲೀಷ್ ತಜ್ಞರಾದ ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ.  ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್  ಕ್ಲಾಸ್ ಗೆ ಎಂಟ್ರಿ ಆಗಿ https://youtu.be/nbFK22snwDk

ನಕ್ಷತ್ರದ ಹಾಗೆ ಮಿರಿ ಮಿರಿ ಮಿಂಚುವ ನನ್ನ ಕಿವಿಯೋಲೆಯ ಕತೆಯಿದು: ಸ್ವಾತಂತ್ರ್ಯ ಬರೆದ ತಣ್ಣಗಿನ ಬರಹ

ಕಿ ವಿಯೋಲೆ ಅಂದ್ರೆ ನನ್ನಂತ ಕೆಲವರಿಗಂತೂ ಬಣ್ಣ ಬಣ್ಣದ ಕನಸಿನ ಹಾಗೆ, ನಕ್ಷತ್ರಗಳ ಬೆಳಕಿನ ಹಾಗೆ, ಮನದಾಳದ ಹಾಡಿನ ಹಾಗೆ, ಮಳೆಯ ಹಾಗೆ, ಕೊಳಲ ಇಂಪಿನ ಹಾಗೆ, ಇನ್ನೂ ಏನೇನೋ. ಒಂದೊಂದು ಕಿವಿಯೋಲೆಗೂ ಒಂದೊಂದು ಕಥೆ, ಒಂದೊಂದು ನೆನಪು. ಜಾತ್ರೆಯಲ್ಲಿ ರಾಶಿ ಜನಗಳ ಮಧ್ಯೆ ಚಕ ಪಕ ನಕ್ಷತ್ರದ ಹಾಗೆ ಹೊಳೆಯುವ ಆ ಕಿವಿಯೋಲೆಯ ಅಂಗಡಿಯನ್ನ ನೋಡದೆ, ಮಾತನಾಡಿಸದೆ, ಸ್ಪರ್ಶಿಸದೆ, ಇಷ್ಟವಾದ್ರೆ ಕೊಳ್ಳದೆ ಇರೋಕ್ಕೆ ಸಾಧ್ಯವೇ ಇಲ್ಲ. ಒಂದಕ್ಕಿಂತ ಒಂದು ಚಂದ. ಒಂದೇ ಕೊಂಡರೆ ಇನ್ನೊಂದಕ್ಕೆ ಬೇಸರ […]

ನಿನ್ನೆ ಮೊನ್ನೆ ನಮ್ಮೊಂದಿಗೆ ಹರಟೆ ಹೊಡೆಯುತ್ತಿದ್ದವರು ಈಗಿಲ್ಲ ಅಂದರೆ ನಂಬೋದು ಹೇಗೆ?:ಶ್ರದ್ದಾ ಬರೆದ ಬರಹ

ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ನಿನ್ನೆ ಮೊನ್ನೆ ಎಲ್ಲಾ ಹಕ್ಕಿಯಂತೆ ಹಾಯಾಗಿ ಹಾರಾಡುತ್ತ ಇದ್ದ ನಾವು ಈಗ ಪಂಜರದ ಹಕ್ಕಿಯಂತೆ ಬಂಧಿಯಾಗಿದ್ದೇವೆ. ಬೆನ್ನು ಹಿಡಿದ ಬೇತಾಳನಂತೆ ಈ ರೋಗ  ನಮ್ಮನ್ನು ಹಿಂಬಾಲಿಸುತ್ತಿದೆ. ಇತ್ತೀಚೆಗೆ ಮಳೆಗಾಲದ ಹೊತ್ತಿನಲ್ಲಿ ಬರುವ ಶೀತ ಜ್ವರಗಳಿಗೂ ಕರೋನಾ ಎನ್ನುವಂತಾಗಿದೆ. ಜನರು ಈ ವೈರಸ್ ಗೆ ಎಷ್ಟು ಬೆಂದು ಹೋಗಿದ್ದಾರೆ ಎಂದರೆ ಸಾಮಾನ್ಯ ಜ್ವರಕ್ಕೂ ಮದ್ದು ತರಲು ಹೋಗಲು ಹಿಂದೆ ಮುಂದೆ ನೋಡುತ್ತಾರೆ. ಇತ್ತೀಚೆಗೆ ಹಳ್ಳಿ ಪ್ರದೇಶದ ಬಡಕುಟುಂಬಗಳಿಗೆ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಾರೆ. […]

ಕಹಿ ಕ್ಷಣಗಳನ್ನು ನುಂಗಿಬಿಡೋಣ, ಖುಷಿಯ ಕ್ಷಣವನ್ನು ಚಾಕ್ಲೇಟ್ ನಂತೆ ಚಪ್ಪರಿಸೋಣ: ಗೌತಮಿ ಬರೆದ ಬರಹ

ಗೌತಮಿ ಕಾಮತ್ , ಬಿ.ಎ ಪತ್ರಿಕೋದ್ಯಮ ವಿಭಾಗ, ಎಂ.ಪಿ.ಎಂ.ಕಾಲೇಜು ಕಾರ್ಕಳ ಅದೃಷ್ಟ ಇದ್ದಾಗ ಮುಟ್ಟಿದ್ದೆಲ್ಲ ಚಿನ್ನ ಅಂತಾರೆ. ಆದರೆ ಶ್ರಮಪಡದೇ ಬಿತ್ತಿದ ಬೀಜ ಎಂದೂ ಅನ್ನ ಆಗುವುದಿಲ್ಲ. ನಾವು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿ ಎತ್ತರಕ್ಕೆ ಬೆಳೆದರೂ ಆ ಅನ್ನವನ್ನು ತಿನ್ನಲು ತಲೆಬಾಗಲೇಬೇಕು. ಅದೇ ರೀತಿ ಜೀವನದ ಪಯಣದಲ್ಲಿ ಅನೇಕ ದಾರಿಗಳು ಸುಂದರವಾಗಿಯೇ ಕಾಣಬಹುದು, ಆದರೆ ನಾವು ನಮ್ಮ ಗುರಿಯ ಬಗ್ಗೆ ಯೋಚಿಸಬೇಕು. ಆ ಗುರಿ ಸುಂದರವಾಗಿದ್ದರೆ ಗುರಿ ಸಾಧಿಸುವ ಆ ದಾರಿಯನ್ನೂ ಸುಂದರಗೊಳಿಸೋದು ಹೇಗೆ ಅಂತ […]