ಹೊಸಹೊಸ ಅನುಭವಗಳೇ ಇಲ್ಲಿ ಪಾಠವಾಗ್ತವೆ,ನಿಮ್ಮ ಬದುಕಿಗೆ ದಾರಿಯಾಗ್ತವೆ: ನಂಗೆ ಸಿಕ್ಕ ಪಾಠ ನಿಮಗೂ ಸಿಗಲಿ

♦♦ಶರಧಿ ಶೆಟ್ಟಿ ಅಯ್ಯೋ ದೇವ್ರೆ ಬೇಕಿತ್ತಾ ನಂಗೆ ಇದೆಲ್ಲಾ? ಅಂತ ಪರಿಸ್ಥಿತಿ, ಮನಸ್ಥಿತಿ ಕೆಟ್ಟಾಗ ಎಲ್ಲರೂ ತಮ್ಮಲ್ಲೇ ಅಂದುಕೂಂಡು ನೊಂದುಕೊಳ್ಳುವುದು ಸಹಜ..”ಶರಧಿ ಏಳು, ಓದು, ನೆನಪಿರಲಿ ಎಸ್ ಎಸ್.ಎಲ್. ಸಿ. ನೀನೀಗ” ಅಂತ ಪಕ್ಕದ ಮನೆಯ ರಾಜಿ ಆಂಟಿ ಕೂಡ ಹೇಳಲು ಶುರು ಮಾಡಿದ್ರೆ ಹೇಗ್ ಇರಬಹುದು ನನ್ನ ಪರಿಸ್ಥಿತಿ? ಆವಾಗ್ಲೇ ಧೃಢ ನಿಧಾ೯ರ ಮಾಡಿದೆ, ಹಾಸ್ಟೆಲ್ ಸೇರಬೇಕೆಂದು, ಈ ಮನೆಯವರ ರಗಳೆಯೇ ಬೇಡ ಅಂತ, ಎಂದೂ ಪುಸ್ತಕ ಮುಟ್ಟದ ನಾನು, ಅದ್ಭುತ ಎನ್ನುವ೦ತೆ ಓದಿ ಅಂಕ […]

ನೀ ನಡೆದು ಬರಲು ಸಪ್ತಸ್ವರಗಳಾದವು ಮೌನ

♥ ಸುನಿಲ್ ತಡಬಡಿಸಿ ತಡವರಿಸಿಕೊಂಡು ಬರೆಯುತ್ತಿರುವೆ ಒಂದೆರಡು ಸಾಲುಗಳ, ಈ ಪ್ರೇಮ ನಿವೇದನಾ ಓಲೆಯ, ಬರೆದಿರುವ ಪತ್ರ ಬರಿಯ ಹಾಳೆಯೆಂದು ಕೈಗೆ ಸಿಕ್ಕಕೂಡಲೆ ಹರಿದು ಎಸೆಯದಿರು, ಅಚ್ಚುಕಟ್ಟಾಗಿ ಬರೆಯಲು ಬಾರದಿದ್ದರು ಏನೋ ಒಂದಿಷ್ಟು ಯೋಚಿಸಿಕೊಂಡು ಬರೆದಿರುವ ನನ್ನ ಮೊದಲ ಪ್ರೇಮ ಪತ್ರವಿದು. ನಸುಗೆಂಪಿನ ಸಂಜೆಯಲಿ,‌ ಮೋಡಗಳ ಮುಸುಕಿನ ಸೂರ್ಯನ ಎದುರಲ್ಲಿ, ತಂಗಾಳಿಗೆ ಮೈಯೊಡ್ಡಿ ಕುಳಿತು, ತುಸು ಹೊತ್ತು ಕಣ್ಮುಚ್ಚಿ ಕುಳಿತಾಗ ಮನಸ್ಸ ಪರದೆಯ ಮೇಲೆ ಹಾದು‌ ಹೋದ ಬಯಕೆಗಳ ಬಣ್ಣಿಸಿಕೊಂಡು ಬರೆದಿರುವೆ ನಿನಗಾಗಿ ಈ ಓಲೆಯ. ಕಾಮನಬಿಲ್ಲಿನ […]

ಸುದೀರ್ಘ ದಾರಿ ಕೊನೆಯಿಲ್ಲದ ಪಯಣ: ಸಂಗೀತಾ ಬರೆದ ಭಾವಪೂರ್ಣ ಸಾಲುಗಳು

ಪಯಣ ♦ ಸಂಗೀತಾ ಸು ಗೋಪಾಲ್ ಸುದೀರ್ಘ ದಾರಿ. ಕೊನೆಯಿಲ್ಲದ ಗುರಿಯಿಲ್ಲದ ಪಯಣ ದಾರಿ ಸವೆದಂತೆ ಮನವು ಏಕಾಂಗಿತನದ ಬೇಗುದಿಗೆ ಚೀರುತ್ತಲೇ ಇದೆ ಅಂಗಿಂದ್ದಾಗೆ ಹಾದಿಯ ಕಲ್ಲು-ಮುಳ್ಳುಗಳಿಗೆ ಜರ್ಜರಿತಗೊಂಡಿವೆ ಪಾದಗಳು ನೋವಿನ ಹಾಹಾಕಾರ ಎತ್ತಿದರೂ ಕಣ್ಣೊರೆಸುವ ಮಮತೆಯೇ ಕಾಣದು. ಬಂಜರು ಇಳೆಗೆ ಪ್ರೀತಿಯ ಸೆಲೆ ಕಾಣಲು ಅರಸುತ್ತಲೇ ಇರುವವು ನಯನಗಳು ಕಾಣದು ಎಲ್ಲಿಯೂ ಮನ ತಣಿಯುವ ಆಸರೆಯು. ಅವರಿವರ ಬಿಸಿ ಚಾಟಿಯ ಏಟಿಗೆ ನೆತ್ತರು ಸುರಿದರು ಮೌನವೇ ಉತ್ತರವಾಗಿದೆ ಕಣ್ಣೀರೇ ಒಡಲ ದಾಹ ನೀಗುವ ಅಮೃತವೂ ಆಗಿದೆ. […]

ನೆನಪಿನ ಕ್ವಾರಂಟೈನ್ ನಲ್ಲಿ ಬಂಧಿಯಾಗಿದ್ದಾಳೆ ಆ ಕಪ್ಪು ಬುರ್ಖಾ ಸುಂದರಿ

ಆವತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಫಲಿತಾಂಶವೂ ಬಂದಾಗಿತ್ತು. ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದೆ. ಮುಂದೆ ಪದವಿಗೆ ಸೇರ್ಪಡೆಯಾಗಲು ಕಾರ್ಕಳದ ಕಾಲೇಜ್ ಗೆ ಬಂದೆ. ಅಡ್ಮಿಸನ್ ಫಾರ್ಮ್ ತೆಗೆದುಕೊಳ್ಳುವಾಗ ನನ್ನನ್ನು ಸೆಳೆದಿದ್ದು ಆ ಕಣ್ಣುಗಳು. ಆ ಕಣ್ಣುಗಳನ್ನು ನೋಡಿ ಒಂದು ಕ್ಷಣ ಕಳೆದುಹೋದೆ. ಯಾರಪ್ಪ ಈ ಸುಂದರಿ ಎಂದು ನನ್ನಲ್ಲೆ ನಾನು ಕೇಳಿಕೊಂಡೆ. ಅವಳು ಬುರ್ಖಾ ತೊಟ್ಟಿದರಿಂದ ಅವಳ‌ ಮುಖ ನೋಡಲು ಸಾಧ್ಯವಾಗಲಿಲ್ಲ. ಆದರೆ ಅವಳ ಕಣ್ಣುಗಳು ನನ್ನ ಮನಸ್ಸಿನಲ್ಲಿ ಹಚ್ಚೆ ಹಾಕಿದವು.  ಮೊದಲ […]

ಎಲ್ಲರಿಗೂ ಬ್ಯಾಟಿಂಗೇ ಬೇಕು ಗುರು, ಬೌಲಿಂಗ್ ಯಾರಿಗೆ ಬೇಕು? :ಈ ಬರಹ ಓದಿದ್ರೆ ನೀವಾಡಿದ ಗಲ್ಲಿ ಕ್ರಿಕೆಟ್ ಗ್ಯಾರಂಟಿ ನೆನಪಾಗತ್ತೆ

♥ ನಿಧಿ ಎನ್. ಪೈ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ ಬಂದಾಗ ನನಗೆ ನಮ್ಮ ಗಲ್ಲಿ ಕ್ರಿಕೆಟ್ ಜ್ಞಾಪಕಕ್ಕೆ ಬಂತು. ನಾವು ಆಡುತ್ತಿದ್ದದ್ದು ಸುಮಾರು 2009ರ ಸಮಯದಲ್ಲಿ. ಆಗಷ್ಟೇ ಐಪಿಎಲ್ ಆವೃತ್ತಿ ಪ್ರಾರಂಭವಾಗಿತ್ತು. ಅವಾಗ ನನಗೆ ಒಂಬತ್ತು ವರ್ಷ. ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ ನನ್ನ ಅಣ್ಣಂದಿರಿಗೆ ಕ್ರಿಕೆಟ್ ಬಿಟ್ಟು ಬೇರೆನೂ ಗೊತ್ತಿರಲಿಲ್ಲ. ಅವಾಗ PUB G ಎಲ್ಲ ಇರ್ಲಿಲ್ಲ ನೋಡಿ, ಹಾಗಾಗಿ ಹೊರಗೆ ಆಡುವುದೇ ಹೆಚ್ಚಾಗಿತ್ತು. ಎಲ್ಲಾ ಹುಡುಗಿಯರ ಹಾಗೆ ನಾನು ಕೂಡ ಅಡುಗೆ ಆಟ, […]