ಹೃದಯ ಬಡಿದರೆ ಬರಲಿ ಕನ್ನಡ: ಶರಧಿ ಶೆಟ್ಟಿ ಬರೆದ ಕನ್ನಡಾಭಿಮಾನದ ಬರಹ

»ಶರಧಿ ಶೆಟ್ಟಿ

ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು ಕಾಮನ‌ ಬಿಲ್ಲನ್ನು ಕವಿಯೊಳು ತೆಕ್ಕನೆ ಮನೆ ಮೈ ಮರೆಯುವುದು

ಕನ್ನಡ ಎಂದರೆ ನಾವು ಅತ್ಯಂತ ಪ್ರೀತಿಯಿಂದ ಆರಾಧನಾ ಭಾವನೆಯಿಂದ ನೋಡುತ್ತೇವೆ. ಹಿಂದಿ, ಬಂಗಾಳಿ ಮತ್ತು ಪಂಜಾಬಿ ಈ ಭಾಷೆಗಳು ಇತ್ತೀಚಿನ ಭಾಷೆಗಳು.ಈ ಕನ್ನಡ ಎನ್ನುವಂತಹ ಒಂದು ಲೋಕ ಒಂದು ರಾಜ್ಯದ ಸ್ವರೂಪ.ಅಂದರೆ ಕನಾ೯ಟಕ ಎಂಬ ರೂಪ ಪಡೆದುಕೊಂಡಿದೆ.ಕನ್ನಡಕ್ಕೆ ಸುಮಾರು ೨೦೦೦ ವಷ೯ ಸುದೀರ್ಘ ಇತಿಹಾಸವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ವಿವಿಧ ರೂಪದಲ್ಲಿ ೪೫ ದಶಲಕ್ಷ ಜನರು ಆಡು ಭಾಷೆಯಾಗಿ ಬಳಸುತ್ತಿದ್ದರು.

ಕೊಟ್ಟು ತಾ ಕೆಟ್ಟೆನೆನಬೇಡ , ಮುಂದಕ್ಕೆ ಕಟ್ಟಿಹುದು ಬುತ್ತಿ ಸವ೯ಜ್ಞ| ಎಂದು ವಚನ ಸಾಹಿತ್ಯದಲ್ಲಿದೆ. ಹಾಡಿದರೆ ಹಾಡಾಗುತ್ತದೆ, ಓದಿದರೆ ಗದ್ಯವಾಗುತ್ತದೆ ಕನ್ನಡ ಸಾಹಿತ್ಯ.

ಹಿಂದಿನ ಹಳಗನ್ನಡ ಸಾಹಿತ್ಯವು ಅತ್ಯಂತ ಸುಂದರವಾಗಿದ್ದ ಛಂದಸ್ಸಿನೂಂದಿಗೆ ಹೊಂದಿಸಿ ಬರೆದು ಪದ್ಯ, ಭಾವನೆಗಳನ್ನೂಳಗೊಂಡಿರುತ್ತಿತ್ತು. ಹೀಗೆ ಮುಂದೆ ಬರುತ್ತಾ ಬ್ರಿಟಿಷರು ದೇಶಕ್ಕೆ ಕಾಲಿಡುವ ಮೊದಲು ಕನ್ನಡ, ಜನರ ಆಡು ಭಾಷೆಯಾಗಿ ಉತ್ತುಂಗ ಸ್ಥಿತಿಯಲ್ಲಿತ್ತು.

ಇಂದು ನಾವು ಕನಾ೯ಟಕದ ಯಾವುದಾದರೊಂದು ಪ್ರದೇಶಕ್ಕೆ ಹೋದರೆ ಅದು ಕನಾ೯ಟಕವೇ ಎಂದು ನಾವೇ ಹುಬ್ಬೇರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಮ್ಮೆ ಯೋಚಿಸಿ!! ಕನ್ನಡ ನಮ್ಮ ಮಾತೃಭಾಷೆ. ಮಾತೃಭಾಷೆ ನಮ್ಮ ಕಣ್ಣು ಇದ್ದಂತೆ. ನಾವು ಮೊದಲು ನಮ್ಮ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಬೇರೆ ಭಾಷೆಯನ್ನು ಕನ್ನಡಕದ ರೂಪದಲ್ಲಿ ಸಮಯೋಚಿತವಾಗಿ ಬಳಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಕನ್ನಡ ಮಾತಾಡುವ ಜನರನ್ನು ಅಲ್ಲಲ್ಲಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ನಮ್ಮ ಕನ್ನಡಿಗರ ಕೆಲವು ಪ್ರತಿಭೆಯನ್ನು ವಿಶ್ವವೇ ಬೆರಗಾಗಿ ನೋಡುತ್ತಿದೆ.ಹಾಗೆಯೇ ನಾವು ಕನ್ನಡದ ಪ್ರಗತಿಯನ್ನು ಮುಂದುವರಿಸಿದರೆ ಮುಂದೆ ಕನಾ೯ಟಕವು ಶ್ರೇಷ್ಠತೆಯ ಹಾಗೂ ಪ್ರಗತಿಯ ಉತ್ತುಂಗಕ್ಕೇರಲು ಸಾಧ್ಯ.

ಎದೆ ಬಗೆದರೆ ಇರಲಿ ಕನ್ನಡ
ಹೃದಯ ಬಡಿದರೆ ಬರಲಿ ಕನ್ನಡ
ಅಭಿಮಾನದಿಂದ ಹೇಳು ‌ನನ್ನ ಭಾಷೆ ಕನ್ನಡ
ಹೆಮ್ಮೆಯಿಂದ ಹೇಳು ನಾನೊಬ್ಬ ಕನ್ನಡಿಗ

»ಶರಧಿ ಶೆಟ್ಟಿ