ಬಾಂಗ್ಲಾ ವಿರುದ್ಧ ಭಾರತ ಟಿ20 ಸರಣಿ ನಾಳೆಯಿಂದ ಆರಂಭ

ಭಾರತದ ಮಹಿಳಾ ತಂಡ ನಾಲ್ಕು ತಿಂಗಳ ಬ್ರೇಕ್​ನ ನಂತರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದೆ ಹರ್ಮನ್​ಪ್ರೀತ್ ಕೌರ್​​ ನಾಯಕತ್ವದಲ್ಲಿ ಆಟಗಾರ್ತಿಯರು ಬಾಂಗ್ಲಾ ನೆಲದಲ್ಲಿ ಮೂರು ಟಿ20 ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ. ನಾಳೆಯಿಂದ ಮೂರು ಟಿ20 ಪಂದ್ಯದ ಸರಣಿ ಆರಂಭವಾಗಲಿದೆ. ಟಿ20 ನಂತರ ಮೂರು ಏಕದಿನ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ಕೌರ್​ ನಾಯಕತ್ವದ ತಂಡ ಆಡಲಿದೆ.ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡದ ಯುವ ಪ್ರತಿಭೆಗಳನ್ನ ಹೊಂದಿದ ತಂಡದ ಜೊತೆಗೆ ಕೌರ್​ ನಾಯಕತ್ವದ ತಂಡ ಬಾಂಗ್ಲಾದೇಶದ ವಿರುದ್ಧ ನಾಳೆ ಕಣಕ್ಕಿಳಿಯಲಿದೆ. .ಮಹಿಳಾ ತಂಡವು […]

ವಂದೇ ಭಾರತ್ ಸೇರಿ, ಎಲ್ಲ ಎಸಿ ರೈಲುಗಳ ಟಿಕೆಟ್‌ ದರ ಕಡಿತ

ನವದೆಹಲಿ:ವಸತಿ ಸೌಕರ್ಯದ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಎಸಿ ಆಸನಗಳನ್ನು ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ಶುಲ್ಕ ಯೋಜನೆಗಳನ್ನು ಪರಿಚಯಿಸಲು ರೈಲ್ವೆ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಅಧಿಕಾರವನ್ನು ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ವಂದೇ ಭಾರತ್ ಸೇರಿದಂತೆ ಎಲ್ಲ ರೈಲುಗಳ ಎಸಿ ಚೇರ್ ಕಾರ್‌ಗಳು ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ಗಳು ಹಾಗೂ ಅನುಭೂತಿ, ವಿಸ್ಟಾಡೋಮ್ ಕೋಚ್‌ಗಳ ದರವನ್ನು ಸೀಟುಗಳಿಗೆ ಅನುಗುಣವಾಗಿ ಶೇ.25 ರಷ್ಟು ಕಡಿಮೆ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ದರಗಳು ಸಹ ಸ್ಪರ್ಧಾತ್ಮಕ […]

ಕಾರ್ಕಳ: ಕ್ರಿಯೇಟಿವ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ; ಕ್ರಿಯೇಟಿವ್‌ ಸಮಾಗಮ

ಕಾರ್ಕಳ: ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇದರ ವತಿಯಿಂದ ಜುಲೈ 07 ರಂದು 2023-24 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ʼಕ್ರಿಯೇಟಿವ್‌ ಸಮಾಗಮʼ ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರ್ಷಿಕ ಸಂಚಿಕೆ “ಸಪ್ತಸ್ವರ”ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಗಣನಾಥ ಶೆಟ್ಟಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು. ಸಂಸ್ಥಾಪಕ ಅಮೃತ್‌ ರೈ ಕಾಲೇಜಿನ ವಿವಿಧ ಸಂಘಗಳನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ […]

ಚಿಕ್ಕೋಡಿ: ನಾಪತ್ತೆಯಾದ ಜೈನ ಮುನಿ; ಹತ್ಯೆ ಸಂಬಂಧಿಸಿ ಇಬ್ಬರ ಬಂಧನ

ಚಿಕ್ಕೋಡಿ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಲಾಗಿದೆ ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅವರ ಗುರುತು ಇನ್ನೂ ಬಹಿರಂಗಗೊಂಡಿಲ್ಲ. ಸನ್ಯಾಸಿಯು ಕಳೆದ 15 ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ […]

ಕ್ಯಾಥೋಲಿಕ್ ಅಸೋಸಿಯೇಷನ್ ​​ಆಫ್ ಸೌತ್ ಕೆನರಾ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಕ್ಯಾಥೋಲಿಕ್ ಅಸೋಸಿಯೇಷನ್ ​​ಆಫ್ ಸೌತ್ ಕೆನರಾ (CASK) 1914 ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಮಾಡಿದೆ. ವಿಶೇಷವಾಗಿ ಕಳೆದ ಒಂದು ದಶಕದಲ್ಲಿ ಅನೇಕ ಪರಿಣಾಮಕಾರಿ ದತ್ತಿ ಮತ್ತು ಸಮುದಾಯ ಸೇವಾ ಯೋಜನೆಗಳನ್ನು ಸಂಸ್ಥೆಯು ಅನುಷ್ಠಾನಗೊಳಿಸಿದೆ. ಅಸೋಸಿಯೇಷನ್ ನ ಪ್ರಮುಖ ಯೋಜನೆಗಳು: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ (5,665 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ); ಶಿಕ್ಷಕರ ಉನ್ನತೀಕರಣ ಕಾರ್ಯಕ್ರಮ (1,543 ಶಿಕ್ಷಕರು […]