ಭಾರತದ ಪುರುಷರ ತಂಡ ಮೊದಲ ಬಾರಿಗೆ ಏಷ್ಯನ್​ ಗೇಮ್​​ನಲ್ಲಿ.. ಜೊತೆಗೆ ಮಹಿಳಾ ಕ್ರಿಕೆಟ್​ ತಂಡವೂ ಭಾಗಿ

ಏಷ್ಯನ್ ಗೇಮ್ಸ್ 2023 ಈ ವರ್ಷದ ಕೊನೆಯಲ್ಲಿ ಚೀನಾದ ಹ್ಯಾಂಗ್‌ಝೌ ನಗರದಲ್ಲಿ ಆಯೋಜಿಸಲಾಗಿದೆ.: ಈ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್​ ತಂಡಗಳು ಭಾಗವಹಿಸಲಿವೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ಗೆ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡವನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಈ ಟೂರ್ನಿಯಲ್ಲಿ ಟಿ-20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುವುದು. ಆದರೆ, ಇಲ್ಲಿ […]

ಪ್ರಧಾನಿ ಮೋದಿ ಮಹತ್ವದ ಘೋಷಣೆ ಝೆಡ್ : ಅಮೆರಿಕದಲ್ಲೇ ಹೆಚ್​1ಬಿ ವೀಸಾ ನವೀಕರಣ

ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಭಾರತೀಯರು ಹೆಚ್​1ಬಿ ವೀಸಾ ನವೀಕರಣಕ್ಕಾಗಿ ಇನ್ನು ಭಾರತಕ್ಕೆ ಬರುವ ಅಗತ್ಯವಿಲ್ಲ. ಉದ್ಯೋಗ ವೀಸಾವಾದ ಹೆಚ್​1ಬಿ ನವೀನಕರಣಕ್ಕೆ ಇನ್ನು ಭಾರತಕ್ಕೆ ಬರುವ ತಾಪತ್ರಯ ಇರಲ್ಲ. ಅಮೆರಿಕದಲ್ಲೇ ವೀಸಾವನ್ನು ರಿನ್ಯುವಲ್​ ಮಾಡಿಕೊಳ್ಳಬಹುದಾಗಿದೆ. ಮೋದಿ ಮತ್ತು ಬೈಡನ್​​ ಮಧ್ಯೆ ಇಂತಹ ಮಹತ್ವದ ಮಾತುಕತೆ ನಡೆದಿದೆ. ಅಲ್ಲೇ ವೀಸಾವನ್ನು ನವೀಕರಣ ಮಾಡಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. 4 ದಿನಗಳ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು, ಆ ದೇಶದೊಂದಿಗೆ ಹಲವು ಮಹತ್ವದ […]

ಹುಡುಗಿಯರಿಗೆ ಒಲಿಯಲಿದೆ ಸೇನೆ ಸೇರುವ ಅವಕಾಶ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ಶುರು..

ಅಲ್ಮೋರಾ, ಉತ್ತರಾಖಂಡ: ಜಿಲ್ಲೆಯ ರಾಣಿಖೇತ್ ತಾಲೂಕಿನ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸೋಮನಾಥ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಉತ್ತರಾಖಂಡ್​ನಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೂ ಸೇನೆ ಸೇರುವ ಅವಕಾಶ ಸಿಗಲಿದೆ ಎಂದು ಹೆಡ್‌ಕ್ವಾರ್ಟರ್ಸ್ ನೇಮಕಾತಿ ವಲಯ (ಲಖನೌ) ಮೇಜರ್ ಜನರಲ್ ಮನೋಜ್ ತಿವಾರಿ ಹೇಳಿದರು. ಹೆಡ್‌ಕ್ವಾರ್ಟರ್ಸ್ ನೇಮಕಾತಿ ವಲಯ (ಲಖನೌ) ಮೇಜರ್ ಜನರಲ್ ಮನೋಜ್ ತಿವಾರಿ ಈ ವೇಳೆ ಯುವಕರಿಗೆ ಪ್ರೋತ್ಸಾಹಿಸಿದರು. ನೇಮಕಾತಿ ಪ್ರಕ್ರಿಯೆಯಲ್ಲಿ 1.6 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು. ಇದರಲ್ಲಿ ಪಾಸ್​ ಆದ […]

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೆ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ : ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ

ಉಡುಪಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸುವಲ್ಲಿ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಕಾರ್ಡ್ ತೋರಿಸಿ ಪ್ರಚಾರ ಮಾಡಿದ ಕಾಂಗ್ರೆಸ್ ನಾಯಕರು ಇದೀಗ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಆರೋಪಿಸುವ ಮೂಲಕ ತಮ್ಮ ಗ್ಯಾರಂಟಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಗೃಹ ಲಕ್ಷ್ಮಿ ಯೋಜನೆಯನ್ನು ಸರ್ಕಾರ ಮುಂದೂಡಿದ್ದು, ಪೂರ್ವ ತಯಾರಿಯಿಲ್ಲದೇ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 200 ಯೂನಿಟ್ ವಿದ್ಯುತ್ ಉಚಿತ ಘೋಷಿಸಿ […]

ಕ್ರಿಯೇಟಿವ್‌ ಕಾಲೇಜಿನ ಉಪನ್ಯಾಸಕ ಲೇಖಕ ಬಿ ರಾಘವೇಂದ್ರ ರಾವ್‌ ಅವರ 56ನೇ ಕೃತಿ “ಹಾವಿನ ಮನೆ” ಬಿಡುಗಡೆ

ರಾಘವೇಂದ್ರ ರಾವ್ ಅವರು ಈಗಾಗಲೇ 55 ಕೃತಿಗಳನ್ನು ಪೂರೈಸಿದ್ದು, 56ನೇ ಕೃತಿ “ಹಾವಿನ ಮನೆ” ಪತ್ತೆದಾರಿ ಕಾದಂಬರಿ ಇತ್ತೀಚೆಗೆ ಬೆಂಗಳೂರಿನ ರಮಣಶ್ರೀ ಹೋಟೇಲಿನಲ್ಲಿ ವೀರಲೋಕ ಪ್ರಕಾಶನದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಶಿವಾಜಿ ಸುರತ್ಕಲ್‌ ಚಲನಚಿತ್ರ ಖ್ಯಾತಿಯ ನಿರ್ದೇಶಕರಾದ ಆಕಾಶ್‌ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯಕ್ಕೆ ಪತ್ತೆದಾರಿ ಸಾಹಿತ್ಯದ ಅಗತ್ಯವಿದೆ. ಅದಕ್ಕೆ ಬಹುದೊಡ್ಡ ಓದುಗ ವರ್ಗವಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ರಾವ್ (ಅನು ಬೆಳ್ಳೆ) ಅವರ ʼಹಾವಿನ ಮನೆʼ ಮಹತ್ವದ ಕೃತಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು. […]