ಮಣಿಪಾಲದ MSDC ಯಿಂದ CNC ಮೆಷಿನ್ ತರಬೇತಿ: ಯುವಜನರ ಕೌಶಲ್ಯಾಭಿವೃದ್ಧಿಗೆ ಇಲ್ಲಿದೆ ಅದ್ಬುತ ಅವಕಾಶ

ಮಣಿಪಾಲ: ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ CNC ಮೆಷಿನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಪಾವಧಿಯ ಈ ತರಬೇತಿಯಲ್ಲಿ CNC ಲೇಥ್ ಮತ್ತು ಮಿಲ್ಲಿಂಗ್ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆ, CNC ವರ್ಕ್‌ಫ್ಲೋ, ಪ್ರೋಗ್ರಾಮಿಂಗ್‌ನ ಮೂಲಭೂತ ಅಂಶಗಳು, ಸುರಕ್ಷತಾ ಕ್ರಮಗಳು ಮತ್ತು ಲ್ಯಾಬ್ ಶಿಸ್ತು ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯ ಭಾಗವಾಗಿ ನೈಜ CNC ಲೇಥ್ ಮತ್ತು ಮಿಲ್ ಯಂತ್ರಗಳಲ್ಲಿ ಪ್ರಾಯೋಗಿಕ ಅನುಭವ […]
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ, ಪ್ರಯಾಣಿಕರಿಂದ ದೂರು, ಗುತ್ತಿಗೆದಾರರಿಗೆ ₹2 ಲಕ್ಷ ದಂಡ ವಿಧಿಸಿದ ರೈಲ್ವೇ!

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಗುಣಮಟ್ಟದ ಪರೋಟ ನೀಡಲಾಗಿದೆ ಎಂಬ ಪ್ರಯಾಣಿಕರ ದೂರಿನ ಬೆನ್ನಲ್ಲೇ IRCTC ಕ್ರಮ ಕೈಗೊಂಡಿದೆ. ಆಹಾರ ವಿತರಣೆ ಗುತ್ತಿಗೆ ಪಡೆದ ಸಂಸ್ಥೆಗೆ ₹2 ಲಕ್ಷ ದಂಡ ವಿಧಿಸಲಾಗಿದೆ. ಆಗಸ್ಟ್ 16ರಂದು ಬನಾರಸ್‌ನಿಂದ ದೆಹಲಿಗೆ ತೆರಳುತ್ತಿದ್ದ 22435 ಸಂಖ್ಯೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಪರೋಟ ಆರ್ಡರ್ ಮಾಡಿದ್ದರು. ಪರೋಟ ಸರಿಯಾಗಿ ಬೆಂದಿಲ್ಲ ಹಾಗೂ ಆಹಾರದ ಗುಣಮಟ್ಟ ತೃಪ್ತಿಕರವಾಗಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಕೇಂದ್ರ […]
ಉಡುಪಿ: ಪತ್ರಕರ್ತನ ಮೇಲೆ ವೈದ್ಯನಿಂದಲೇ ಹಲ್ಲೆ- ಪತ್ರಕರ್ತ ಸಂಘದಿಂದ ತೀವ್ರ ಖಂಡನೆ

ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯ ಹಾಗೂ ಕನ್ನಡಪ್ರಭ ಪತ್ರಿಕೆಯ ಕುಂದಾಪುರ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ. ಕುಂದಾಪುರ ಸರಕಾರಿ ಆಸ್ಪತ್ರೆಯ ವರದಿಗೆ ಸಂಬಂಧಿಸಿ ಅಲ್ಲಿನ ವೈದ್ಯಾಧಿಕಾರಿಯಾಗಿದ್ದ ಡಾ.ಮಹೇಂದ್ರ ಶೆಟ್ಟಿ, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು […]
SBI ಗ್ರಾಹಕರೇ ಗಮನಿಸಿ, ಅ.1 ರಿಂದ ಹೊಸ ನಿಯಮ: ತಿಂಗಳಿಗೆ 4 ಬಾರಿ ಮಾತ್ರ ATM ನಗದು ವಿತ್‌ಡ್ರಾ ಉಚಿತ, 5ನೇ ವಿತ್‌ಡ್ರಾಗೆ ಹೆಚ್ಚುವರಿ ಶುಲ್ಕ!

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ Basic Savings Bank Deposit (BSBD) ಖಾತೆಗಳ ನಗದು ಹಿಂಪಡೆಯುವ ಶುಲ್ಕದಲ್ಲಿ ಪರಿಷ್ಕರಣೆ ಮಾಡಿದೆ. ಹೊಸ ಶುಲ್ಕ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಹೊಸ ನಿಯಮದಂತೆ, BSBD ಖಾತೆದಾರರು ತಿಂಗಳಿಗೆ 4 ಬಾರಿ ATM ಮೂಲಕ ಹಣ ಹಿಂಪಡೆಯುವುದು ಉಚಿತ. ಐದನೇ ವಹಿವಾಟಿನಿಂದ ಪ್ರತಿ ನಗದು ಹಿಂಪಡೆಯುವಿಕೆಗೆ ₹15 + GST ಶುಲ್ಕ ವಿಧಿಸಲಾಗುತ್ತದೆ. ಡಿಜಿಟಲ್ ವಹಿವಾಟು ಉಚಿತ ಈ ಶುಲ್ಕವು ATM ನಗದು ವಿತ್‌ಡ್ರಾ ವಹಿವಾಟುಗಳಿಗೆ ಮಾತ್ರ […]
ನಕಲಿ ಔಷಧಿ ಜಾಲಕ್ಕೆ 5 ರಾಜ್ಯಗಳ ನಂಟು, ತನಿಖೆಗೆ ಐದು ತಂಡ ರಚನೆ

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲದ ತನಿಖೆ ಮತ್ತಷ್ಟು ವಿಸ್ತರಿಸಿದೆ. ಈ ಜಾಲಕ್ಕೆ ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ ಹಾಗೂ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಬಿದದಿ ಸಮೀಪದ ಲೈಸೆನ್ಸ್‌ರಹಿತ ಘಟಕದ ಮೇಲೆ ನಡೆದ ದಾಳಿಯಲ್ಲಿ ನಕಲಿ ಔಷಧಗಳು, ಪ್ಯಾಕೇಜಿಂಗ್ ಯಂತ್ರಗಳು, ಖಾಲಿ ವಯಲ್‌ಗಳು ಹಾಗೂ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು ₹5 ಕೋಟಿ ಎಂದು ವರದಿಯಾಗಿದೆ. ಜಾಲದ ಅಂತರರಾಜ್ಯ ಸಂಪರ್ಕದ ಹಿನ್ನೆಲೆಯಲ್ಲಿ ಡ್ರಗ್ […]