ಮಣಿಪಾಲದ MSDC ಯಿಂದ CNC ಮೆಷಿನ್ ತರಬೇತಿ: ಯುವಜನರ ಕೌಶಲ್ಯಾಭಿವೃದ್ಧಿಗೆ ಇಲ್ಲಿದೆ ಅದ್ಬುತ ಅವಕಾಶ

ಮಣಿಪಾಲ: ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ CNC ಮೆಷಿನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಲ್ಪಾವಧಿಯ ಈ ತರಬೇತಿಯಲ್ಲಿ CNC ಲೇಥ್ ಮತ್ತು ಮಿಲ್ಲಿಂಗ್ ಯಂತ್ರಗಳ ರಚನೆ ಹಾಗೂ ಕಾರ್ಯಾಚರಣೆ, CNC ವರ್ಕ್‌ಫ್ಲೋ, ಪ್ರೋಗ್ರಾಮಿಂಗ್‌ನ ಮೂಲಭೂತ ಅಂಶಗಳು, ಸುರಕ್ಷತಾ ಕ್ರಮಗಳು ಮತ್ತು ಲ್ಯಾಬ್ ಶಿಸ್ತು ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯ ಭಾಗವಾಗಿ ನೈಜ CNC ಲೇಥ್ ಮತ್ತು ಮಿಲ್ ಯಂತ್ರಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಅವಕಾಶವಿದೆ.

ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿರುವ ತರಬೇತಿಯಲ್ಲಿ ತಜ್ಞರ ಮಾರ್ಗದರ್ಶನ, ಪ್ರಾಯೋಗಿಕ ಕಲಿಕೆ ಹಾಗೂ ಯಂತ್ರೋಪಕರಣಗಳ ನೇರ ಅನುಭವಕ್ಕೆ ಆದ್ಯತೆ ನೀಡಲಾಗುತ್ತದೆ. CNC ಯಂತ್ರೋಪಕರಣ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬೇಕಾದ ಮೂಲಭೂತ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ: 81231 65069 / 73497 80582 ಸಂಪರ್ಕಿಸಬಹುದು. ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರನಗರ, ಮಣಿಪಾಲ, ಉಡುಪಿ ಜಿಲ್ಲೆ.