ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ Basic Savings Bank Deposit (BSBD) ಖಾತೆಗಳ ನಗದು ಹಿಂಪಡೆಯುವ ಶುಲ್ಕದಲ್ಲಿ ಪರಿಷ್ಕರಣೆ ಮಾಡಿದೆ. ಹೊಸ ಶುಲ್ಕ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಹೊಸ ನಿಯಮದಂತೆ, BSBD ಖಾತೆದಾರರು ತಿಂಗಳಿಗೆ 4 ಬಾರಿ ATM ಮೂಲಕ ಹಣ ಹಿಂಪಡೆಯುವುದು ಉಚಿತ. ಐದನೇ ವಹಿವಾಟಿನಿಂದ ಪ್ರತಿ ನಗದು ಹಿಂಪಡೆಯುವಿಕೆಗೆ ₹15 + GST ಶುಲ್ಕ ವಿಧಿಸಲಾಗುತ್ತದೆ.
ಡಿಜಿಟಲ್ ವಹಿವಾಟು ಉಚಿತ
ಈ ಶುಲ್ಕವು ATM ನಗದು ವಿತ್‌ಡ್ರಾ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಡಿಜಿಟಲ್ ವಹಿವಾಟುಗಳಿಗೆ ಯಾವುದೇ ಮಿತಿ ಇರುವುದಿಲ್ಲ ಮತ್ತು ಅವು ಉಚಿತವಾಗಿಯೇ ಮುಂದುವರಿಯಲಿವೆ ಎಂದು SBI ತಿಳಿಸಿದೆ. ಉದಾಹರಣೆಗೆ, ತಿಂಗಳಲ್ಲಿ 6 ಬಾರಿ ಹಣ ಹಿಂಪಡೆದರೆ ಮೊದಲ 4 ವಹಿವಾಟು ಉಚಿತವಾಗಿದ್ದು, 5ನೇ ಮತ್ತು 6ನೇ ವಹಿವಾಟಿಗೆ ತಲಾ ₹15 + GST ಶುಲ್ಕ ಪಾವತಿಸಬೇಕಾಗುತ್ತದೆ.
SBI BSBD ಖಾತೆ ಎಂದರೇನು?
Basic Savings Bank Deposit Account (BSBD) ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲದ ಮೂಲ ಉಳಿತಾಯ ಖಾತೆಯಾಗಿದೆ. ಹಣ ಠೇವಣಿ, ನಗದು ಹಿಂಪಡೆಯುವಿಕೆ ಸೇರಿದಂತೆ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಈ ಖಾತೆಯ ಮೂಲಕ ಪಡೆಯಬಹುದು. ಹೊಸ ನಿಯಮದಿಂದ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ATMನಲ್ಲಿ ಹಣ ಹಿಂಪಡೆಯುವ BSBD ಖಾತೆದಾರರಿಗೆ ಮಾತ್ರ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ.















