ಮೀನಿನ ಮುಳ್ಳು ಕಸವಲ್ಲ, ದಂತ ಚಿಕಿತ್ಸೆಗೆ ರಸ! ಮಂಗಳೂರಿನಲ್ಲಿ ನಡೆದ ಈ ಮಹತ್ವಪೂರ್ಣ ಸಂಶೋಧನೆ ಸೃಷ್ಟಿಸಿತು ಹೊಸ ಸಾಧ್ಯತೆ!

ಮೀನು ತಿಂದ ಬಳಿಕ ಉಳಿಯುವ ಮುಳ್ಳು, ಮೂಳೆ ಸೇರಿದಂತೆ ತ್ಯಾಜ್ಯವನ್ನು ಸಾಮಾನ್ಯವಾಗಿ ಕಸವೆಂದು ಎಸೆಯಲಾಗುತ್ತದೆ. ಆದರೆ ಇದೇ ತ್ಯಾಜ್ಯಕ್ಕೆ ಇದೀಗ ಹೊಸ ಮೌಲ್ಯ ದೊರೆಯುವ ಸಾಧ್ಯತೆ ಮೂಡಿದೆ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ (College of Fisheries) ನಡೆಸಿರುವ ಸಂಶೋಧನೆಯು ಮೀನಿನ ಮೂಳೆ ತ್ಯಾಜ್ಯದಿಂದ ಹೈಡ್ರಾಕ್ಸಿ ಅಪಟೈಟ್ (Hydroxyapatite) ಎಂಬ ಪ್ರಮುಖ biomaterial ಪಡೆಯುವ ಸಾಧ್ಯತೆಯನ್ನು ತೋರಿಸಿದೆ. ಹೈಡ್ರಾಕ್ಸಿ ಅಪಟೈಟ್‌ ಎಂಬುದು calcium-phosphate ಆಧಾರಿತ ಖನಿಜವಾಗಿದ್ದು, ಮಾನವನ ಮೂಳೆ ಮತ್ತು ಹಲ್ಲುಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತದೆ. ಹೀಗಾಗಿ biomedical ಕ್ಷೇತ್ರದಲ್ಲಿ […]

ಮಂಗಳೂರು: ವಂದೇ ಭಾರತ್ ರೈಲಿನ ಆಹಾರ ಪೂರೈಕೆ ಘಟಕದಲ್ಲಿ ಆಹಾರ ಗುಣಮಟ್ಟ, ನೈರ್ಮಲ್ಯ ಪರಿಶೀಲಿಸಿದ ಅಧಿಕಾರಿಗಳು!

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಆಹಾರ ಪೂರೈಸುವ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದರು. ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ, ನೈರ್ಮಲ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಆಹಾರ ತಯಾರಿಕೆ ಮತ್ತು ಸಾಗಣೆ ವೇಳೆ ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಯಿತು. ಇದರ ಜೊತೆಗೆ ಆಹಾರ ಸಾಗಿಸುವ ವಾಹನದ ಶುಚಿತ್ವ, ಆಹಾರದ ಸೂಕ್ತ ಸಂಗ್ರಹಣೆ ಹಾಗೂ […]