ಜಾರುಕುದ್ರು ಪ್ರದೇಶದ ಪಾಪನಾಶಿನಿ ನದಿಯ ತೀರದಲ್ಲಿ ಭೂ ಸವಕಳಿ: ಎರಡು ಎಕರೆಗೂ ಅಧಿಕ ಭೂಮಿ ನದಿ ಪಾಲು.!

ಉಡುಪಿ: ಕಾಪು ತಾಲೂಕಿನ ಉದ್ಯಾವರ ಗ್ರಾಮದ ಜಾರುಕುದ್ರು ಪ್ರದೇಶದಲ್ಲಿ ಪಾಪನಾಶಿನಿ ನದಿಯ ತೀರದಲ್ಲಿ ಭೂ ಸವಕಳಿ ತೀವ್ರಗೊಂಡಿದ್ದು, ಈಗಾಗಲೇ ಎರಡು ಎಕರೆಗೂ ಅಧಿಕ ಭೂಮಿ ನದಿ ಪಾಲಾಗಿದೆ. ಮಳೆಗಾಲದಲ್ಲಿ ಸವಕಳಿ ಮತ್ತಷ್ಟು ಹೆಚ್ಚುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ಉದ್ಯಾವರದಲ್ಲಿ ಪಾಪನಾಶಿನಿ ನದಿ ಎರಡು ಕವಲುಗಳಾಗಿ ಹರಿದು ಮುಂದೆ ಸಮುದ್ರ ಸೇರುತ್ತದೆ. ಹೀಗಾಗಿ ಈ ಭಾಗದಲ್ಲಿ ನದಿಯ ಹರಿವಿನ ವೇಗ ಹೆಚ್ಚಾಗಿದ್ದು, ತೀರದ ಮಣ್ಣು ನಿರಂತರವಾಗಿ ಕೊಚ್ಚಿಹೋಗುತ್ತಿದೆ. ಈಗಾಗಲೇ ಹಲವು ತೆಂಗಿನ ಮರಗಳು ನದಿ ಪಾಲಾಗಿವೆ.ಜಾರುಕುದ್ರು ಪ್ರದೇಶದಲ್ಲಿ ಸಣ್ಣ […]

ಉಡುಪಿ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮಹಿಳೆಯರು ಬೆಳಗ್ಗೆಯೇ ಮನೆಗಳನ್ನು ಸ್ವಚ್ಛಗೊಳಿಸಿ, ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿ, ತೋರಣ ಕಟ್ಟಿ, ಹೊಸ ಬಟ್ಟೆ ಹಾಗೂ ಆಭರಣಗಳನ್ನು ಧರಿಸಿ ವರಮಹಾಲಕ್ಷ್ಮಿ ದೇವಿಯ ಪೂಜೆ ನೆರವೇರಿಸಿದರು. ಮನೆಗಳಲ್ಲಿ ವಿಶೇಷ ನೈವೇದ್ಯ ಸಿದ್ಧಪಡಿಸಿ, ದೇವಿಗೆ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಹಾಗೂ ಮಹತ್ವದ ಹಬ್ಬವಾಗಿದೆ. ಕುಟುಂಬದ […]

ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

ಉಡುಪಿ: ಮೂಲತಃ ಹೆಜಮಾಡಿ ಗ್ರಾಮದವರಾದ ಪಡುಬಿದ್ರಿ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಪಾಂಡು (78) ಎಂಬ ವೃದ್ಧರನ್ನು ರಕ್ಷಿಸಿ, ಆಶ್ರಯ ಕಲ್ಪಿಸುವ ಸಲುವಾಗಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಶ್ವಾಸದ ಮನೆ ವೃದ್ದಾಶ್ರಮಕ್ಕೆ 2025 ರ ಮಾರ್ಚ್ 21 ರಂದು ದಾಖಲಿಸಲಾಗಿರುತ್ತದೆ. ಈ ವೃದ್ಧರಿಗೆ ಮೂರು ಜನ ಮಕ್ಕಳಿರುವುದು ತಿಳಿದುಬಂದ ಹಿನ್ನೆಲೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ವೃದ್ಧರನ್ನು ವಿಚಾರಿಸಿದಾಗ ಕೌಟುಂಬಿಕ ಕಲಹದಿಂದ ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದು, ವೃದ್ಧರ ಮಕ್ಕಳನ್ನು ಪತ್ತೆಹಚ್ಚಿ, ಅವರನ್ನು ಹಿರಿಯ […]

“ದಿ ಮಾನ್ಸೂನ್ ಎಡಿಟ್”: ಉಡುಪಿಯಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟ

ಉಡುಪಿ: ಉಡುಪಿಯ ಜೋಡುಕಟ್ಟೆಯ ಡಯಾನಾ ಹೋಟೆಲ್‌ನಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟ “ದಿ ಮಾನ್ಸೂನ್ ಎಡಿಟ್” ಮಲ್ಹಾರ್ ಆಯೋಜಕರಾದ ವೈಶಾಲಿ ಶೆಟ್ಟಿ ಭರ್ಜರಿ ಫ್ಯಾಷನ್ ಮೇಳ ಆಯೋಜಿಸಿದ್ದಾರೆ. ಈ ಫ್ಯಾಷನ್ ಮೇಳದಲ್ಲಿ ವಿವಿಧ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು ಸೇರಿದಂತೆ ಹಲವಾರು ಹೊಸ ಫ್ಯಾಷನ್ ಉಡುಪುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ ಕೊರಿಯನ್ ಜುವೆಲ್ಲರಿ, ಆಂಟಿಕ್ ಜುವೆಲ್ಲರಿ, ಒನ್ ಗ್ರಾಮ್ ಜುವೆಲ್ಲರಿ, ಬ್ಯಾಗ್‌ಗಳು ಮತ್ತು ಬೆಡ್‌ಶೀಟ್‌ಗಳು ಸಹ ವಿಶೇಷ ರಿಯಾಯಿತಿಯಲ್ಲಿ ದೊರೆಯಲಿವೆ. ಆ.22 […]

SIR: ರಾಜ್ಯದ 43.80 ಲಕ್ಷ ಮತದಾರರ ಮನೆಗೆ ಬರಲಿದೆ ನೋಟಿಸ್:ಯಾರಿಗೆಲ್ಲಾ ಸಿಗಲಿದೆ ನೋಟಿಸ್ ?

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚುರುಕುಗೊಂಡಿದ್ದು, ಮ್ಯಾಪಿಂಗ್ ಆಗದ ಹಾಗೂ ಮಾಹಿತಿಯಲ್ಲಿ ದೋಷವಿರುವ 43.80 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಗುರುತಿಸಿದೆ. ಈ ಮತದಾರರಿಗೆ ಶೀಘ್ರದಲ್ಲೇ ನೋಟಿಸ್ ಜಾರಿಯಾಗಲಿದ್ದು, ದಾಖಲೆಗಳ ಪರಿಶೀಲನೆ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಕರಡು ಮತದಾರರ ಪಟ್ಟಿ ಆಗಸ್ಟ್ 24ರಂದು ಪ್ರಕಟವಾಗಲಿದ್ದು, ಅದೇ ದಿನದಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಜಾರಿ, ದಾಖಲೆ ಪರಿಶೀಲನೆ ಹಾಗೂ ತಕರಾರು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ನೋಟಿಸ್ ಬಂದ ತಕ್ಷಣವೇ ಮತದಾರರ […]