ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಇದೀಗ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೌದು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. 3 ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ (ಮೇ 7) ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಸಂದೀಪ್‌ ಪಾಟೀಲ್, […]

ಇಲ್ಲಿದೆ ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದರ ಹಿಂದಿನ ಅರ್ಥ!

ಹಿಂದೂ ಧರ್ಮ ಮತ್ತು ಭಾರತೀಯ ಸಂಪ್ರದಾಯದಲ್ಲಿ ವಿವಾಹವು ಕೇವಲ ಒಂದು ಸಾಮಾಜಿಕ ಕಾರ್ಯಕ್ರಮವಲ್ಲ, ಅದು ಪವಿತ್ರ ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಅಥವಾ ಮಾಂಗಲ್ಯಸೂತ್ರ ಕಟ್ಟುವ ಕ್ಷಣ ಅತ್ಯಂತ ಮಹತ್ವದ್ದಾಗಿದೆ. ಈ ತಾಳಿ ದಾಂಪತ್ಯ ಜೀವನದ ಶಾಶ್ವತ ಬಾಂಧವ್ಯದ ಪ್ರತೀಕವೆಂದು ನಂಬಲಾಗುತ್ತದೆ. ಆದರೆ ತಾಳಿ ಕಟ್ಟುವಾಗ ಸಾಮಾನ್ಯವಾಗಿ ಮೂರು ಗಂಟುಗಳನ್ನು ಹಾಕುವ ಸಂಪ್ರದಾಯದ ಹಿಂದೆ ಏನು ಅರ್ಥ ಇದೆ ಎಂಬುದನ್ನು ಅನೇಕರು ತಿಳಿದಿರಲಾರರು. ಹಿಂದೂ ಶಾಸ್ತ್ರಗಳ ಪ್ರಕಾರ ಈ ಮೂರು ಗಂಟುಗಳಿಗೆ […]

ಮಲಗುವಾಗ ತಲೆದಿಂಬಿನ ಹತ್ತಿರ ಮೊಬೈಲ್ ಇಡುವ ಅಭ್ಯಾಸ ನಿಮಗಿದೆಯೇ? ಈ ಸಮಸ್ಯೆಗಳು ಕಾಡುತ್ತವೆ ಹುಷಾರು

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ನಮ್ಮ ಜೊತೆಗೇ ಇರುತ್ತದೆ. ಸಂವಹನ, ಮಾಹಿತಿ, ಮನರಂಜನೆ ಸೇರಿದಂತೆ ಅನೇಕ ಕೆಲಸಗಳನ್ನು ಸುಲಭಗೊಳಿಸಿರುವ ಈ ಸಣ್ಣ ಸಾಧನವು ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ಆದರೆ, ಮಲಗುವಾಗ ಮೊಬೈಲ್ ಅನ್ನು ತಲೆಯ ಹತ್ತಿರ ಅಥವಾ ಹಾಸಿಗೆಯ ಪಕ್ಕದಲ್ಲಿಟ್ಟು ಮಲಗುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಮೊಬೈಲ್ ಫೋನ್‌ಗಳಿಂದ ಹೊರಬರುವ ವಿದ್ಯುತ್ಕಾಂತೀಯ ವಿಕಿರಣ ಹಾಗೂ […]

ವೆನ್‍ ಲಾಕ್ ಆಸ್ಪತ್ರೆಯಲ್ಲಿ ಶಾಖಾಘಾತ ಚಿಕಿತ್ಸೆಗೆ ವಿಶೇಷ 10 ಹಾಸಿಗೆಗಳ ಘಟಕ

ಮಂಗಳೂರು: ಕರಾವಳಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವಾಗಿ ಶಾಖಾಘಾತ (Heat Stroke) ಪ್ರಕರಣಗಳು ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸಿದ್ಧತೆ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಹೊಸ ಶಸ್ತ್ರಚಿಕಿತ್ಸಾ ಬ್ಲಾಕ್‌ನ 5ನೇ ಮಹಡಿಯಲ್ಲಿ ಶಾಖಾಘಾತ ರೋಗಿಗಳ ಚಿಕಿತ್ಸೆಗೆ 10 ಹಾಸಿಗೆಗಳ ವಿಶೇಷ ಘಟಕವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕರು ತಿಳಿಸಿದ್ದಾರೆ. ಶಾಖಾಘಾತ ಎಂದರೇನು? ಶಾಖಾಘಾತವು ಜೀವಕ್ಕೆ ಅಪಾಯಕಾರಿ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ದೇಹದ ಉಷ್ಣತೆ 104°F (40°C) ಅಥವಾ ಅದಕ್ಕಿಂತ ಹೆಚ್ಚು ಏರಿದಾಗ ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ತಕ್ಷಣ […]

ಉಡುಪಿ: ಗಾಂಧಿ ಆಸ್ಪತ್ರೆಯ ಜನೋಪಯೋಗಿ ಕಾರ್ಯ ಶ್ಲಾಘನೀಯ- ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

ಉಡುಪಿ: ಕಳೆದ‌ ಮೂವತ್ತೊಂದು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಗರದ ಸಿಟಿಬಸ್‌ ನಿಲ್ದಾಣ ಬಳಿಯ ಗಾಂಧಿ ಆಸ್ಪತ್ರೆಯ ಸಾಮಾಜಿಕ ಕಾರ್ಯ ಶ್ಲಾಘನೀಯ. ಸುಮಾರು 25 ವರ್ಷಗಳಿಂದ ರಕ್ತದಾನ ಶಿಬಿರ ಆಯೋಜನೆಯ ಮೂಲಕ ಸಾಕಷ್ಟು ಜನರ ಪ್ರಾಣ ಉಳಿಸಿದ ಪುಣ್ಯದ ಕೆಲಸ ಮಾಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು. ಗಾಂಧಿ ಆಸ್ಪತ್ರೆ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ ಪಂಚಮಿ ಟ್ರಸ್ಟ್ ಪಂಚಲಹರಿ ಫೌಂಡೇಶನ್ ಸಹಯೋಗದೊಂದಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು […]