ಡಿ.ಇಎಲ್.ಇಡಿ ಕೋರ್ಸಿಗೆ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಪ್ರಸಕ್ತ ಸಾಲಿನಲ್ಲಿ ಡಿ.ಎಎಲ್.ಇಡಿ ಕೋರ್ಸುಗಳ ಸರಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆಫ್‌ಲೈನ್ ಮೂಲಕ ಜೂನ್ 1 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ www.schooleducation.kar.nic.inನಲ್ಲಿ ಪ್ರಕಟಿಸಲಾದ ಅಧಿಸೂಚನೆಯಲ್ಲಿ ಅರ್ಹತೆ, ಮೀಸಲಾತಿ ಶುಲ್ಕದ ವಿವರಗಳು ಹಾಗೂ ಜಿಲ್ಲಾವಾರು ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯಂತೆ ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಅಂತಿಮ ದಿನಾಂಕದ ಒಳಗಾಗಿ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಇ ತ್ಯಾಜ್ಯ ಸಂಗ್ರಹ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ಘಟಕವು ನಿರಂತರ ಎರಡನೇ ವರ್ಷದ ವಾರ್ಷಿಕ ಇ- ತ್ಯಾಜ್ಯ ಸಂಗ್ರಹ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿತು. ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ಘಟಕವು ಈ ಅಭಿಯಾನದಲ್ಲಿ ಸುಮಾರು ೫೦೦ ಕಿಲೋ ಗ್ರಾಂ ಗೂ ಹೆಚ್ಚು ಇ – ತ್ಯಾಜ್ಯವನ್ನು ಸಂಗ್ರಹಿಸಿರುವ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಸಂಗ್ರಹಿಸಲಾದ ಇ – ತ್ಯಾಜ್ಯವನ್ನು ಮಾನ್ಯತೆ ಪಡೆದ ಮರುಬಳಕೆಯ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು […]

ಸಮಾನತೆ ಮತ್ತು ಒಳಗೊಳ್ಳುವಿಕೆಯತ್ತ ಮಹತ್ವದ ಹೆಜ್ಜೆ: ಮಾಹೆ ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ನಡುವೆ ಒಪ್ಪಂದಕ್ಕೆ ಸಹಿ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಇತ್ತೀಚೆಗೆ ‘ಸ್ಪೆಷಲ್ ಒಲಿಂಪಿಕ್ಸ್ ಭಾರತ್’ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಸುಧಾರಣೆಯತ್ತ ಇಟ್ಟಿರುವ ಒಂದು ಮಹತ್ವದ ಹೆಜ್ಜೆ ಇದಾಗಿದೆ. ಶಿಕ್ಷಣ ಮತ್ತು ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶೇಷ ಚೇತನರನ್ನು ಸಬಲೀಕರಿಸಲು ಈ ಒಪ್ಪಂದ ಸಹಕಾರಿಯಾಗಿದೆ. ಸಮಾಜದಲ್ಲಿ ಅವರಿಗೆ ಸಮಾನ ಸ್ಥಾನಮಾನ ಮತ್ತು ಗೌರವ ಸಿಗುವಂತೆ ಮಾಡುವಲ್ಲಿ ಹಾಗೂ […]

ನಿಮ್ಮ ಮಕ್ಕಳನ್ನು ಲೆಕ್ಕದಲ್ಲಿ ಪಕ್ಕಾ ಕ್ರಿಯೇಟಿವ್ ಮಾಡುತ್ತೆ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್: ಮೇ 11 ರಿಂದ ಶುರುವಾಗುವ ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಗಣಿತ ಕೌಶಲ್ಯ ಪಡೀರಿ

ಉಡುಪಿ: ಮಕ್ಕಳಲ್ಲಿ ಗಣಿತದ ಮೇಲಿನ ಆಸಕ್ತಿ ಹೆಚ್ಚಿಸಿ, ಅವರಿಗೆ ಪಾಠಗಳನ್ನು ಸುಲಭವಾಗಿ ಕಲಿಸುವ ಉದ್ದೇಶದಿಂದ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವಿಶೇಷ “ಟೇಬಲ್ಸ್ ವರ್ಕ್‌ಶಾಪ್” ನ್ನು ಮೇ 11  ರಿಂದ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ 99 ರವರೆಗಿನ ಟೇಬಲ್ಸ್ ಗಳನ್ನು ಮನರಂಜನಾತ್ಮಕವಾಗಿ ಹಾಗೂ ಸುಲಭ ವಿಧಾನಗಳ ಮೂಲಕ ಕಲಿಸಲಾಗುತ್ತದೆ. ಜೊತೆಗೆ ಪಾಠಗಳನ್ನು ಅವರಿಗೆ ಖುಷಿ ಕೊಡುವ ಚಟುವಟಿಕೆಗಳನ್ನು, ಕ್ವಿಜ್ ಹಾಗೂ ಗೇಮ್ಸ್‌ಗಳ ಮೂಲಕವೂ ಕ್ರಿಯಾಶೀಲವಾಗಿ ಹೇಳಿಕೊಡಲಾಗುತ್ತದೆ. ಒಟ್ಟಾರೆಯಾಗಿ  ಮಕ್ಕಳಲ್ಲಿ ಗಣಿತ ಕೌಶಲ್ಯವನ್ನು ವೃದ್ಧಿಸುವ […]

ಕ್ರೈಸ್ಟ್ ಕಿಂಗ್: ಸಹನ್ ಕುಮಾರ್‌’ಗೆ ರಾಷ್ಟ್ರ ಮಟ್ಟದ ಜೆಇಇ ಮೈನ್ ಬಿ. ಆರ್ಕ್’ನಲ್ಲಿ 667 ಮತ್ತು ಬಿ. ಪ್ಲ್ಯಾನಿಂಗ್ ನಲ್ಲಿ 439ನೇ ರ‍್ಯಾಂಕ್

ಕಾರ್ಕಳ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರಮಟ್ಟದ ಜೆಇಇ ಮೈನ್ – 2026ರ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹೆಚ್. ಸಹನ್ ಕುಮಾರ್ ಒಬಿಸಿ ಎನ್‌ಸಿಎಲ್ ಕ್ಯಾಟಗರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿ.ಆರ್ಕ್’ನಲ್ಲಿ 667 ನೇ ರ‍್ಯಾಂಕ್ ಹಾಗೂ ಬಿ. ಪ್ಲ್ಯಾನಿಂಗ್ ನಲ್ಲಿ 439ನೇ ರ‍್ಯಾಂಕ್ ಪಡೆದಿದ್ದಾನೆ.