ಉಡುಪಿ ಕೃಷ್ಣಮಠದಲ್ಲಿ ಸೌರಮಾನ ಯುಗಾದಿ ಆಚರಣೆ

ಉಡುಪಿ: ಇಂದು ಸೌರಮಾನ ಯುಗಾದಿ. ಉಡುಪಿ ಜಿಲ್ಲೆಯಲ್ಲಿ ವೈದಿಕ ಮತ್ತು ಜನಪದ ಸಂಪ್ರದಾಯದಂತೆ ಈ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯ್ತು. ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಪಂಚಾಂಗ ಶ್ರವಣ, ಮಹೋತ್ಸವ ಜರುಗಿತು. ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಯುಗಾದಿ ಆಚರಿಸಲಾಯ್ತು. ಕೃಷ್ಣ ದೇವರ ಮಠದಲ್ಲಿ ಜ್ಯೋತಿಷ್ಯರ ಮೂಲಕ ವರ್ಷದ ಗ್ರಹಗತಿಗಳನ್ನು ತಿಳಿಯಲು ಭಕ್ತಗಣ ಉತ್ಸುಕತೆಯಿಂದ ಭಾಗವಹಿಸಿದ್ದರು. ಕೃಷ್ಣ ದೇವರ ಸಮ್ಮುಖದಲ್ಲಿರುವ ಚಂದ್ರಶಾಲೆಯಲ್ಲಿ ಪುರೋಹಿತರಾದ ಸುದರ್ಶನ ಆಚಾರ್ಯರು ಪಂಚಾಂಗ ಶ್ರವಣ ನಡೆಸಿದರು. ಅಷ್ಟಮಠಾಧೀಶರು ಭಕ್ತರ ಜೊತೆ ಕುಳಿತು ವರ್ಷದ ಗ್ರಹಗತಿಗಳನ್ನು ಕೇಳಿದರು. ಉಡುಪಿ ಪಂಚಾಂಗಕ್ಕೆ […]
ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಲೋಕಾರ್ಪಣೆ

ಕಾರ್ಕಳ: ಅಜೆಕಾರು ಪದ್ಮ ನಗರದಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ಲೋಕಾರ್ಪಣೆ ಎ 14 ರಂದು ನಡೆಯಿತು. ಕಾಲೇಜಿನ ಶಾರದಾ ಮಾತೆ ಹಾಗೂ ರಾಮಲಲ್ಲಾ ಮೂರ್ತಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲೇ ಹೆಸರು ಗಳಿಸಿದ ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ರಾಷ್ಟ್ರಪ್ರೇಮ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.ಜ್ಞಾನಸುಧಾ ರಾಜ್ಯದ ನಂಬರ್ ಒನ್ ಶಿಕ್ಷಣ ಸಂಸ್ಥೆ, ಗ್ರಾಮೀಣ ಭಾಗವಾದ ಅಜೆಕಾರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ. […]
ದ್ವಿತೀಯ ಪಿಯುಸಿ ಫಲಿತಾಂಶ: ಬ್ರಹ್ಮಾವರದ ಎಸ್.ಎಂ.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಬ್ರಹ್ಮಾವರ: ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಸ.ಎಂ.ಎಸ್. ಕಾಲೇಜ್, ಬ್ರಮ್ಹಾವರ ಇಲ್ಲಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದು, ಒಟ್ಟು 70 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 160 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ವಿಜ್ಞಾನ ವಿಭಾಗದಲ್ಲಿ ಧೀರಜ್ (580), ಡಾಮಿಯಾನೋ ಅರ್ನಾಲ್ಡ್ (572), ಸಮೃದ್ಧ್ ದೇವಾಡಿಗ(571), ಸಾಯಿ ಸಾಗರ್ ಶೆಟ್ಟಿ(561) ಕಿರಣ್ ಜಿ (555), ನಿತ್ಯಸ್ಥ ನಾಯಕ್ (555), ಅಕಾಂಕ್ಷಾ ಸುವರ್ಣ (554), ಸನ್ನಿಧ್ – […]
ಕುಂದಾಪುರ: ಕಾರು ಡಿಕ್ಕಿ ಹೊಡೆದು ಮಹಿಳೆ ಮೃತ್ಯು

ಉಡುಪಿ: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪಸ ವಂಡ್ಸೆಯಲ್ಲಿ ನಡೆದಿದೆ. ವಂಡ್ಸೆಯಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಶಶಿಕಲಾ ಮೊಗವೀರ (50) ಮೃತಪಟ್ಟ ದುರ್ದೈವಿ ಎಂದು ತಿಳಿಯಲಾಗಿದೆ. ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ವಂಡ್ಸೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿರುವ ದಿನಸಿ ಅಂಗಡಿಗೆ ಸಾಮಾನು ಖರೀದಿಸಲು ಶಶಿಕಲಾ ಅವರು ಬಂದಿದ್ದರು. ಖರೀದಿಯ ಬಳಿಕ ರಸ್ತೆಯ […]
ದಿನದ ಕೆಲವು ಸಮಯ ನಿಮ್ಮ ಮೊಬೈಲ್ ಸೈಲೆಂಟ್ ಮಾಡೋದ್ರಿಂದ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ?

ಇಂದಿನ ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನವಿಲ್ಲದೇ ಬದುಕೇ ಅಸಾಧ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಕೆಲವರಿಗಂತೂ ಒಂದರೆಘಳಿಗೆಯೂ ಮೊಬೈಲ್ ಬಿಟ್ಟು ಇರಲು ಸಾಧ್ಯವೇ ಇಲ್ಲದಾಗಿದೆ. “ನೋಮೋಫೋಬಿಯಾ” ಎಂಬ ಹೊಸ ಖಾಯಿಲೆಯೂ ಶುರುವಾಗಿದೆ. ಇಂತಹಾ ಸಂದರ್ಭದಲ್ಲಿ ದಿನದ ಒಂದಷ್ಟು ಸಮಯ ಮೊಬೈಲ್ ಬಿಟ್ಟಿರುವುದು ಅಥವಾ ಸೈಲೆಂಟ್ ಮೋಡ್ ನಲ್ಲಿಡುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ತಿಳಿಯೋಣ. ನಿರಂತರ ರಿಂಗ್‌ಟೋನ್ ಹಾಗೂ ಮೆಸೇಜ್ ಅಲರ್ಟ್‌ಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡುವುದನ್ನು ತಡೆಯುತ್ತವೆ. ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ನಿರಂತರ ನೋಟಿಫಿಕೇಶನ್‌ಗಳು […]