ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಲೋಕಾರ್ಪಣೆ.

ಕಾರ್ಕಳ: ವಿದ್ಯಾರ್ಥಿಗಳಲ್ಲಿ ಪರಿಜ್ಞಾನ ಮಾತ್ರವಲ್ಲ, ಅವರಲ್ಲಿನ ಜ್ಞಾನ ವಿಜ್ಞಾನ ಆಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಭಾವಂತರಿಗೆ ಪ್ರೋತ್ಸಾಹ ಅವಶ್ಯ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.ಅವರು ಎ. 14ರಂದು ಅಜೆಕಾರು ಜ್ಞಾನಸುಧಾ ಪಿಯು ಕಾಲೇಜು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಸಾಧನೆ ತೋರಿ ಕೇವಲ ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗದೇ ಇಡೀ ಜಗತ್ತಿಗೆ ಜ್ಞಾನಸುಧಾದ ಸುಗಂಧವನ್ನು ಪಸರಿಸಿದ್ದಾರೆ. ಇದು ಕಾರ್ಕಳಕ್ಕೆ ಹೆಮ್ಮೆ ಸಂಸ್ಥೆ ಎಂದು ವೀರಪ್ಪ […]

ಮಣಿಪಾಲ: ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನ

ಮಣಿಪಾಲ: ಮಣಿಪಾಲದಲ್ಲಿರುವ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಗೆ ಶಿಕ್ಷಕಿಯರು ಬೇಕಾಗಿದ್ದಾರೆ. ಅರ್ಹತೆ: ಪದವಿ ಶಿಕ್ಷಣ ಹೊಂದಿರಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಶಿಕ್ಷಣ ನೀಡಲು ಆಸಕ್ತಿ ಹೊಂದಿದವರು ಸಂಪರ್ಕಿಸಿ. ಮಾಹಿತಿಗಾಗಿ: 9901722527

ಏಪ್ರಿಲ್ 20ರಂದು ಉಡುಪಿಯ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ಹಾಗೂ ಅಭಿಷೇಕ ಸಮಾರಂಭ

ಉಡುಪಿ: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭವು ಏಪ್ರಿಲ್ 20, 2026ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ತಿಳಿಸಿದರು. ಅವರು ಬುಧವಾರ ಉಡುಪಿ ಶೋಕಮಾತಾ ಚರ್ಚಿನ ಆವೆ ಮರಿಯಾ ಸಭಾಂಗಣದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC […]

ಉಡುಪಿಯ “ಅಮರ್ ವಿಶ್ವಾಸ್ ಹಾಲಿಡೇಸ್ ಮತ್ತು ರೆಸಾರ್ಟ್‌ ನಿಂದ ಚಾರ್ ಧಾಮ್ ಯಾತ್ರೆಯ ಸ್ಪೆಷಲ್ ಪ್ಯಾಕೇಜ್: ತೀರ್ಥ ಕ್ಷೇತ್ರಗಳಲ್ಲಿ ಪಡೆಯಿರಿ ಭಕ್ತಿಯ ವಿಶೇಷ ಅನುಭವ!

ಉಡುಪಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ಉಡುಪಿಯ “ಅಮರ್ ವಿಶ್ವಾಸ್ ಹಾಲಿಡೇಸ್ ಮತ್ತು ರೆಸಾರ್ಟ್‌ ಸಂಸ್ಥೆ ವಿಶೇಷ ಚಾರ್ಧಾಮ್ ಯಾತ್ರಾ ಪ್ಯಾಕೇಜ್ ಘೋಷಿಸಿದೆ. ಈ ವಿಶೇಷ ಯಾತ್ರೆ 4 ರಾತ್ರಿ ಮತ್ತು 5 ದಿನಗಳ ಅವಧಿಯಲ್ಲಿ ನಡೆಯಲಿದ್ದು, ಹೆಲಿಕಾಫ್ಟರ್ ಗಳ‌ ಮೂಲಕ ಭಕ್ತಿಯ ದರ್ಶನ ಪಡೆಯಬಹುದಾಗಿದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಮತ್ತು ಬದ್ರಿನಾಥ್ ಧಾಮಗಳ ದರ್ಶನವನ್ನು ಈ ಯಾತ್ರೆ ಒಳಗೊಂಡಿದೆ. ಡೆಹ್ರಾಡೂನ್‌ನಿಂದ ಆರಂಭವಾಗಿ ಮತ್ತೆ ಡೆಹ್ರಾಡೂನ್‌ನಲ್ಲೇ ಮುಕ್ತಾಯಗೊಳ್ಳುವ ಈ ಪ್ಯಾಕೇಜ್ ಸಂಪೂರ್ಣವಾಗಿ […]

ಕುಂದಾಪುರ: ಯುವತಿ ನಾಪತ್ತೆ

ಉಡುಪಿ, ಏಪ್ರಿಲ್ 15: ಕುಂದಾಪುರ ತಾಲೂಕು ಅಂಪಾರು ಗ್ರಾಮದ ಬರ್ಲಾಡಿ ನಿವಾಸಿ ಜಯಶ್ರೀ (27) ಎಂಬ ಯುವತಿಯು ಏಪ್ರಿಲ್ 7 ರಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಸಪೂರ ಶರೀರ, ಕೋಲು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಪಿ.ಎಸ್ ದೂ.ಸಂಖ್ಯೆ: 08259-280299, ಸಿ.ಪಿ.ಐ ದೂ.ಸಂಖ್ಯೆ: 08254-230338, ಎಸ್.ಡಿ.ಪಿ.ಓ ದೂ.ಸಂಖ್ಯೆ: 08254-232338, ಡಿ.ಪಿ.ಓ ದೂ.ಸಂಖ್ಯೆ: 0820-2534777 ಹಾಗೂ ರೇಂಜ್ ದೂ.ಸಂಖ್ಯೆ: 8242220501 […]