ಧರ್ಮಸ್ಥಳ ದೇವರ ದರ್ಶನಕ್ಕೆ ಹೋಗುವವರು ಇಲ್ಲಿ ಗಮನಿಸಿ: ಈ ಆರು ದಿನಗಳು ದರ್ಶನಕ್ಕೆ ಸಮಯ ನಿಗದಿ

ಧರ್ಮಸ್ಥಳ: ಶ್ರೀ ಮಂಜುನಾಥ ನೆಲೆಸಿರುವ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಸಾಲಿನ ‘ಕಾಲಾವಧಿ ಜಾತ್ರೆ’ಗೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 13ರಿಂದ ಏಪ್ರಿಲ್ 23ರವರೆಗೆ ನಡೆಯಲಿರುವ ಈ ವೈಭವದ ಉತ್ಸವದ ಸಂಪೂರ್ಣ ವೇಳಾಪಟ್ಟಿಯನ್ನು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ತಮ್ಮ ಪ್ರಯಾಣ ಹಾಗೂ ದರ್ಶನವನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಅವಕಾಶ ದೊರೆತಿದೆ. ಜಾತ್ರಾ ಮಹೋತ್ಸವದ ಅವಧಿಯಲ್ಲಿ ದೇವರ ದರ್ಶನ ಸಮಯದಲ್ಲೂ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಭಕ್ತರಿಗೆ ಅದನ್ನು ಗಮನಿಸುವಂತೆ ಸೂಚಿಸಲಾಗಿದೆ. ಏಪ್ರಿಲ್ 13ರಂದು ಆರಂಭೋತ್ಸವ ಜಾತ್ರೆಯು […]
ಬೆಕ್ಕುಗಳ ಚೆಲ್ಲಾಟ; ಮನೆಯವರಿಗೆ ಪ್ರಾಣಸಂಕಟ- ಪೊಲೀಸರ ಚಾಣಾಕ್ಷತೆಯಿಂದ ಪ್ರಕರಣ ಸುಖಾಂತ್ಯ

ಬೆಂಗಳೂರು: ಎರಡು ಸಾಕು ಬೆಕ್ಕುಗಳ ‘ಪ್ರೇಮ ಕಥೆ’ ಎರಡು ಕುಟುಂಬಗಳ ನಡುವೆ ಭಾರೀ ಜಗಳಕ್ಕೆ ಕಾರಣವಾದ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ. ನೆರೆಹೊರೆ ಮನೆಯ ಹೆಣ್ಣು ಹಾಗೂ ಗಂಡು ಬೆಕ್ಕುಗಳ ಸಂಪರ್ಕದಿಂದ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮವಾಗಿದ್ದು, ಇದೇ ವಿಚಾರವಾಗಿ ಕುಟುಂಬಗಳ ನಡುವೆ ತೀವ್ರ ವಾಗ್ವಾದ ಉಂಟಾಗಿದೆ. ಹೆಣ್ಣು ಬೆಕ್ಕಿನ ಮಾಲೀಕರು, “ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಬೆಕ್ಕೇ ಕಾರಣ, ಹೀಗಾಗಿ ಎಲ್ಲಾ ಮರಿಗಳನ್ನೂ ನೀವು ಸಾಕಬೇಕು” ಎಂದು ಆಗ್ರಹಿಸಿದ್ದು, ಈ ವಿಚಾರದಿಂದ ಮಾತಿಗೆ ಮಾತು […]
ಮರಣೋತ್ತರ ವರದಿಯಲ್ಲಿ ಬಯಲಾಯ್ತು ಬಾಲಕಿ ಶ್ರೀನಂದಾ ಸಾವಿನ ಕಾರಣ!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಪ್ರಕರಣಕ್ಕೆ ಮರಣೋತ್ತರ ಪರೀಕ್ಷೆ ಮಹತ್ವದ ತಿರುವು ನೀಡಿದೆ. ವರದಿ ಪ್ರಕಾರ, ಬಾಲಕಿಯ ಸಾವಿನಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲವೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ತಲೆಯ ಬಲಭಾಗಕ್ಕೆ ಉಂಟಾದ ಗಂಭೀರ ಗಾಯವೇ ಸಾವಿಗೆ ಕಾರಣವೆಂದು ತಿಳಿದುಬಂದಿದೆ. ದೇಹದ ವಿವಿಧ ಭಾಗಗಳಲ್ಲಿ ಗಾಯಗಳು ಹಾಗೂ ಹಲವೆಡೆ ಮೂಳೆ ಮುರಿತಗಳೂ ಪತ್ತೆಯಾಗಿದ್ದು, ಇವು ಎತ್ತರದಿಂದ ಬಿದ್ದ ಪರಿಣಾಮ ಸಂಭವಿಸಿರುವುದಾಗಿ ವರದಿ ಹೇಳಿದೆ. ಬಾಲಕಿ ಶವವು […]
ದೇಹಕ್ಕೆ ಮತ್ತು ಆರೋಗ್ಯಕ್ಕೆ ಅಪಾಯಕಾರಿ ಸಿಂಥೆಟಿಕ್ ಬಟ್ಟೆ ಯಾವುದರಿಂದ ತಯಾರಾಗುತ್ತವೆ ಗೊತ್ತೇ?

ನಾವು ಧರಿಸುವ ಬಟ್ಟೆಗಳು ಕೇವಲ ನಮ್ಮ ದೇಹ ಮುಚ್ಚುವುದು ಮಾತ್ರವಲ್ಲದೇ, ದೇಹಕ್ಕೂ ಹಿತಕರವಾಗಿರಬೇಕು. ಹಾಗಾಗಿ ನಾವು ಹಾಕುವ ಬಟ್ಟೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಹತ್ತಿಯ, ಕಾಟನ್ ಬಟ್ಟೆಗಳು ಎಲ್ಲಾ ಕಾಲಕ್ಕೂ ತಕ್ಕನಾಗಿದ್ದು, ಇದು ಹಿಂದಿನ ಕಾಲದಿಂದಲೂ ಇರುವ, ಎಲ್ಲರೂ ಇಷ್ಟ ಪಟುವ ಬಟ್ಟೆಯಾಗಿದೆ. ಆದರೆ ಈಗ ನಿರ್ವಹಣೆ ಸುಲಭ ಎಂಬ ಕಾರಣದಿಂದಾಗಿ ಸಿಂಥೆಟಿಕ್ (Synthetic) ಬಟ್ಟೆಗಳ ಬಳಕೆ ಹೆಚ್ಚಾಗಿದೆ. ಈ ಸಿಂಥೆಟಿಕ್ ಬಟ್ಟೆ, ಪ್ಲಾಸ್ಟಿಕ್ ಆಧಾರಿತ ನಾರುಗಳಿಂದ ತಯಾರಾಗುತ್ತವೆ. ಇವು ಫ್ಯಾಷನ್‌ಗೆ ಸುಲಭವಾದರೂ, ದೀರ್ಘಕಾಲ […]
ಕೂಡಲೇ ಕೆಲಸಕ್ಕೆ ಜನ ಬೇಕಾಗಿದ್ದಾರೆ.

ಖಾಸಗಿ ಕಂಪನಿ, ಇಂಡಸ್ಟ್ರಿ, ಕನ್ನಕ್ಷನ್ ಕಂಪನಿ, ಫಾರ್ಮ ಕಂಪನಿ, ಆಫೀಸ್, ಸ್ಟಾರ್ ಹೋಟೆಲ್ BPO, ಫರ್ನಿಚರ್ ಶೋರೂಮ್, ವೆಹಿಕಲ್ ಶೋರೂಮ್, ಮಾಲ್ ಸೇರಿ ಇನ್ನಿತರ ಸಂಸ್ಥೆಗಳಲ್ಲಿ ನೂರಾರು ಹುದ್ದೆಗಳಿವೆ. ಆರ್ಹತೆಗಳು: SSLC, PUC, Degree, ITI, Diploma, B.E ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 9481347563, +91 9481347653