ನಾವು ಧರಿಸುವ ಬಟ್ಟೆಗಳು ಕೇವಲ ನಮ್ಮ ದೇಹ ಮುಚ್ಚುವುದು ಮಾತ್ರವಲ್ಲದೇ, ದೇಹಕ್ಕೂ ಹಿತಕರವಾಗಿರಬೇಕು. ಹಾಗಾಗಿ ನಾವು ಹಾಕುವ ಬಟ್ಟೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಹತ್ತಿಯ, ಕಾಟನ್ ಬಟ್ಟೆಗಳು ಎಲ್ಲಾ ಕಾಲಕ್ಕೂ ತಕ್ಕನಾಗಿದ್ದು, ಇದು ಹಿಂದಿನ ಕಾಲದಿಂದಲೂ ಇರುವ, ಎಲ್ಲರೂ ಇಷ್ಟ ಪಟುವ ಬಟ್ಟೆಯಾಗಿದೆ. ಆದರೆ ಈಗ ನಿರ್ವಹಣೆ ಸುಲಭ ಎಂಬ ಕಾರಣದಿಂದಾಗಿ ಸಿಂಥೆಟಿಕ್ (Synthetic) ಬಟ್ಟೆಗಳ ಬಳಕೆ ಹೆಚ್ಚಾಗಿದೆ. ಈ ಸಿಂಥೆಟಿಕ್ ಬಟ್ಟೆ, ಪ್ಲಾಸ್ಟಿಕ್ ಆಧಾರಿತ ನಾರುಗಳಿಂದ ತಯಾರಾಗುತ್ತವೆ. ಇವು ಫ್ಯಾಷನ್‌ಗೆ ಸುಲಭವಾದರೂ, ದೀರ್ಘಕಾಲ ಧರಿಸುವುದರಿಂದ ಕೆಲವು ಆರೋಗ್ಯ ಮತ್ತು ಆರಾಮದ ಸಮಸ್ಯೆಗಳು ಉಂಟಾಗಬಹುದು.
ಚರ್ಮಕ್ಕೆ ಉಷ್ಣ ಹೆಚ್ಚಾಗುವುದು
- ಸಿಂಥೆಟಿಕ್ ಬಟ್ಟೆಗಳು ಗಾಳಿಯ ಸಂಚಾರವನ್ನು ತಡೆಯುತ್ತವೆ
- ದೇಹದ ಉಷ್ಣತೆ ಹೆಚ್ಚಾಗಿ ಅಸ್ವಸ್ಥತೆ ಉಂಟಾಗಬಹುದು
- ಬೇಸಿಗೆಯಲ್ಲಿ ಹೆಚ್ಚು ಬೆವರು ಉಂಟಾಗುತ್ತದೆ
- ಬೆವರು ಸರಿಯಾಗಿ ಆವಿಯಾಗದ ಕಾರಣ ಚರ್ಮ ತೇವವಾಗಿರುತ್ತದೆ
- ಇದರಿಂದ ದುರ್ಗಂಧ ಉಂಟಾಗುವ ಸಾಧ್ಯತೆ ಹೆಚ್ಚು
ಚರ್ಮದ ಅಲರ್ಜಿ ಸಮಸ್ಯೆಗಳು
- ಕೆಲವು ಜನರಿಗೆ ರಾಶ್ ಅಥವಾ ಕೆಂಪು ಗುಳ್ಳೆಗಳು ಕಾಣಿಸಬಹುದು
- ಸಂವೇದನಾಶೀಲ ಚರ್ಮ ಹೊಂದಿರುವವರಿಗೆ ಹೆಚ್ಚು ತೊಂದರೆ
- ತೇವಾಂಶ ಹೆಚ್ಚಾಗುವುದರಿಂದ ಫಂಗಸ್ ಬೆಳೆಯಲು ಅನುಕೂಲ
- ದೀರ್ಘಕಾಲ ಧರಿಸಿದರೆ ದಣಿವು ಹೆಚ್ಚಾಗಬಹುದು
ಸಿಂಥೆಟಿಕ್ ಬಟ್ಟೆಗಳು ಆಕರ್ಷಕ ಮತ್ತು ಕಡಿಮೆ ಬೆಲೆಯಾದರೂ, ಚರ್ಮದ ಆರೋಗ್ಯ ಮತ್ತು ಆರಾಮದ ದೃಷ್ಟಿಯಿಂದ ಹತ್ತಿ ಬಟ್ಟೆಗಳು ಹೆಚ್ಚು ಉತ್ತಮ ಆಯ್ಕೆ. ಆದ್ದರಿಂದ ಸಿಂಥೆಟಿಕ್ ಬಟ್ಟೆಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಿ .

















