ಉಡುಪಿ: ತಾಸೆ ನುಡಿಸುವ ಕಲಾವಿದ ಅವಿನಾಶ್ ಸೇರಿಗಾರ ಅನಾರೋಗ್ಯದಿಂದ ನಿಧನ

ಉಡುಪಿ: ಪರ್ಕಳ ಸಮೀಪದ ದೇವಸ್ಥಾನಬೆಟ್ಟು ನಿವಾಸಿ, ತಾಸೆ ನುಡಿಸುವ ಕಲಾವಿದ ಅವಿನಾಶ್ ಸೇರಿಗಾರ ( 33 ) ಅನಾರೋಗ್ಯದಿಂದ ನಿಧನರಾದರು. ಅವಿವಾಹತರಾಗಿದ್ದ ಇವರು ಪರ್ಕಳದ ಸುತ್ತಮುತ್ತ ನಾಗಸ್ವರ ನುಡಿಸುವವರೊಂದಿಗೆ ತಾಸೆ ಮತ್ತು ವಾದ್ಯವನ್ನು ನುಡಿಸುತ್ತಿದ್ದರು. ಉಳಿದ ಸಮಯದಲ್ಲಿ ಮೇಸ್ತ್ರಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಇವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ದಿವಂಗತ ದಾಸ ಸೇರಿಗಾರರ ಪುತ್ರರಾದ ಇವರು, ತಾಯಿ, ಓರ್ವ ಅಣ್ಣ, ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಮಾಜಸೇವಕ ಗಣೇಶ್ […]
ಕಲ್ಯಾಣಪುರ ತ್ರಿಶಾ ಪಿ.ಯು. ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.

ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು, ಕಲ್ಯಾಣಪುರದಲ್ಲಿ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಮಾತನಾಡಿ ಜಗತ್ತಿನ ಅತಿ ಶ್ರೇಷ್ಠ ಪ್ರಜಾಪ್ರಭುತ್ವಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ರ ಕೊಡುಗೆ ವಿಶೇಷವಾದದ್ದು. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಮೂಲಕ ರಕ್ಷಣೆ ಜೀವಿಸುವ ಹಕ್ಕು ನೀಡಿದ ಮತ್ತು ಹಕ್ಕುಗಳಿಗಾಗಿ ಹೋರಾಡಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ತೋರಿಸಿದ್ದಾರೆ. ಹಕ್ಕುಗಳಷ್ಟೇ ಅಲ್ಲದೆ ಕರ್ತವ್ಯವನ್ನು ತಿಳಿಸಿದ್ದಾರೆ. ಭಾರತೀಯತೆಗೆ ಹೊಸ ಅರ್ಥ […]
ಉಡುಪಿಯ “ಅಮರ್ ವಿಶ್ವಾಸ್ ಹಾಲಿಡೇಸ್ ಮತ್ತು ರೆಸಾರ್ಟ್ ನಿಂದ ಚಾರ್ ಧಾಮ್ ಯಾತ್ರೆಯ ಸ್ಪೆಷಲ್ ಪ್ಯಾಕೇಜ್: ತೀರ್ಥ ಕ್ಷೇತ್ರಗಳಲ್ಲಿ ಪಡೆಯಿರಿ ಭಕ್ತಿಯ ವಿಶೇಷ ಅನುಭವ!

ಉಡುಪಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ಉಡುಪಿಯ “ಅಮರ್ ವಿಶ್ವಾಸ್ ಹಾಲಿಡೇಸ್ ಮತ್ತು ರೆಸಾರ್ಟ್ ಸಂಸ್ಥೆ ವಿಶೇಷ ಚಾರ್ಧಾಮ್ ಯಾತ್ರಾ ಪ್ಯಾಕೇಜ್ ಘೋಷಿಸಿದೆ. ಈ ವಿಶೇಷ ಯಾತ್ರೆ 4 ರಾತ್ರಿ ಮತ್ತು 5 ದಿನಗಳ ಅವಧಿಯಲ್ಲಿ ನಡೆಯಲಿದ್ದು, ಹೆಲಿಕಾಫ್ಟರ್ ಗಳ ಮೂಲಕ ಭಕ್ತಿಯ ದರ್ಶನ ಪಡೆಯಬಹುದಾಗಿದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಮತ್ತು ಬದ್ರಿನಾಥ್ ಧಾಮಗಳ ದರ್ಶನವನ್ನು ಈ ಯಾತ್ರೆ ಒಳಗೊಂಡಿದೆ. ಡೆಹ್ರಾಡೂನ್‌ನಿಂದ ಆರಂಭವಾಗಿ ಮತ್ತೆ ಡೆಹ್ರಾಡೂನ್‌ನಲ್ಲೇ ಮುಕ್ತಾಯಗೊಳ್ಳುವ ಈ ಪ್ಯಾಕೇಜ್ ಸಂಪೂರ್ಣವಾಗಿ […]
ಉಡುಪಿ: ಶಾರದಾ ರೆಸಿಡೆನ್ಶಿಯಲ್ ಶಾಲೆಯಲ್ಲಿ ಪ್ರವೇಶ ಆರಂಭ: ಅತ್ಯುತ್ತಮ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಕಲಿಕೆಗೂ ಇಲ್ಲಿದೆ ಅವಕಾಶ

ಉಡುಪಿ: ಕುಂಜಿಬೆಟ್ಟುವಿನ ಶಾರದಾ ರೆಸಿಡೆನ್ಶಿಯಲ್ ಶಾಲೆ Sharada Residential School ಯಲ್ಲಿ 2026-27 ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಈ ಶಾಲೆ ಡಾ.ಟಿ.ಎಂ.ಎ ಪೈ ಫೌಂಡೇಶನ್ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸಿದ್ಧಿಯಾಗಿದೆ. ಶಾಲೆಯಲ್ಲಿ ICSE ಪಠ್ಯಕ್ರಮದ ಅಡಿಯಲ್ಲಿ 5ರಿಂದ 11ನೇ ತರಗತಿವರೆಗಿನ ಪ್ರವೇಶ ಅವಕಾಶ ಲಭ್ಯವಿದೆ. ವಿದ್ಯಾರ್ಥಿಗಳಿಗೆ ದಿನಪಾಠ (Day Boarding) ಹಾಗೂ ವಸತಿ (Hostel) ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಏನೇನು ಸೌಲಭ್ಯಗಳಿವೆ: CISCE ಮಂಡಳಿ ಪಠ್ಯಕ್ರಮ, ISC ಆಧಾರಿತ ಶಿಕ್ಷಣ ವ್ಯವಸ್ಥೆ, ಆಧುನಿಕ […]
ಕಾರ್ಕಳ: ನಿಟ್ಟೆ ಸಮೀಪ ಬಾವಿಗೆ ಬಿದ್ದ ಚಿರತೆಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಉಡುಪಿ: ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಬೋರ್ಗಲ್ಲುಗುಡ್ಡೆ ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದೆ. ಚಿರತೆಯು ಆಹಾರ ಅರಸಿ ಸ್ಥಳೀಯ ಮನೆಗೆ ಬಂದಿದೆ. ಈ ವೇಳೆ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬಾವಿಯಲ್ಲಿ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಮಾರ್ಗದರ್ಶನದಂತೆ ಚಂದ್ರಕಾಂತ್ ಕರುಣಾಕರ್ , ಗಸ್ತು ಅರಣ್ಯಪಾಲಕ ಸುರೇಶ್ ಮತ್ತು ಸ್ಥಳೀಯರ ಸಹಕಾರದೊಂದಿಗೆ […]