ಚಂಡೀಗಢದ ಮೇಯರ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೆಲುವು; ಇಂಡಿಯಾ ಬಣಕ್ಕೆ ಸೋಲು

ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಗೆಲುವು ಸಾಧಿಸಿದ್ದು ‘ಇಂಡಿಯಾ’ ಬಣಕ್ಕೆ ಸೋಲುಂಟಾಗಿದೆ. ಚಂಡೀಗಢದಲ್ಲಿ ಮಂಗಳವಾರ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಸೋಂಕರ್ ಅವರು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದರು. ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಮನೋಜ್ ಸೋಂಕರ್ 16 ಮತಗಳನ್ನು ಪಡೆದರೆ, ಕುಮಾರ್ 12 ಮತಗಳನ್ನು ಪಡೆದರು. ಎಂಟು ಮತಗಳು ಅಸಿಂಧುವಾಗಿವೆ. ಹೊಸದಾಗಿ ಆಯ್ಕೆಯಾದ ಮೇಯರ್ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಚುನಾವಣೆ […]

ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ಗಾಯಕ ಸಾಯಿ ವಿಘ್ನೇಶ್ ಕೃಷ್ಣ ಮಠ ಭೇಟಿ

ಉಡುಪಿ: ಬಹು ಚರ್ಚಿತ ಕಾಂತರ ಚಿತ್ರದ ಸೂಪರ್ ಹಿಟ್ ಹಾಡು ವರಾಹ ರೂಪಂ ಹಾಡಿನ ಮೂಲಕ ಮನೆಮಾತಾಗಿರುವ ಸುಮಧುರ ಕಂಠದ ಗಾಯಕ ಸಾಯಿ ವಿಘ್ನೇಶ್ ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ವೇಳೆ ಇಲ್ಲಿನ ಶ್ರೀಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ದರ್ಶನದ ಬಳಿಕ ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ ಸುಶ್ರೀಂದ್ರ ತೀರ್ಥರ ಸಮ್ಮುಖದಲ್ಲಿ ವರಾಹ ರೂಪಂ ಹಾಡು ಹಾಡಿದರು. ವಿಘ್ನೇಶ್ ಅವರ ಹಾಡು ಕೇಳಿ ಶ್ರೀಪಾದರು ಸಂತೋಷ ವ್ಯಕ್ತಪಡಿಸಿದರು. ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರು […]

ಕೇರಳ ಬಿಜೆಪಿ ಒಬಿಸಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ: ಪಿಎಫ್‌ಐ ನಂಟಿದ್ದ15 ಆರೋಪಿಗಳಿಗೆ ಮರಣದಂಡನೆ ವಿಧಿಸಿದ ಕೇರಳ ಹೈಕೋರ್ಟ್

ತಿರುವನಂತಪುರ: ಅಲಪ್ಪುಳ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಈಗ ನಿಷೇಧಿತ ಇಸ್ಲಾಮಿಸ್ಟ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಬಂಧ ಹೊಂದಿದ್ದ 15 ಆರೋಪಿಗಳಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ. ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಿ ಶ್ರೀದೇವಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರಿತ್ತು. ಅಪರಾಧಿಗಳು “ತರಬೇತಿ […]

ಫೆ. 1 ರಿಂದ 3ರ ವರೆಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ

ಮಂಗಳೂರು: ತೇಜಸ್ವಿನಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಸ್ಪೆರಾನ್ಝಾ ಸಹಯೋಗದೊಂದಿಗೆ ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಫೆಬ್ರವರಿ 1 ರಿಂದ 3ರ ವರೆಗೆ ಮಂಗಳೂರಿನ ಕದ್ರಿ ದೇವಸ್ಥಾನದ ಬಳಿಯಿರುವ ತೇಜಸ್ವಿನಿ ಆಸ್ಪತ್ರೆಯ ನೆಲಮಹಡಿಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ 6 ರ ವರೆಗೆ ನಡೆಯಲಿದ್ದು, ವಾಕ್ ಮತ್ತು ಶ್ರವಣ ತೊಂದರೆ ಎದುರಿಸುತ್ತಿರುವ ವ್ಯಕ್ತಿಗಳು ಇದರ ಪ್ರಯೋಜನವನ್ನು ಪಡೆಯಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದಲ್ಲಿ ಉಚಿತವಾಗಿ ಲಭಿಸುವ ಸೇವೆಗಳು: ಶ್ರವಣ ಸಮಸ್ಯೆಯುಳ್ಳವರಿಗೆ […]

ಕಿದಿಯೂರು ಅಷ್ಟಪವಿತ್ರ ನಾಗಮಂಡಲ ಉತ್ಸವದ ಐದನೇ ದಿನದ ಕಾರ್ಯಕ್ರಮದ ವಿವರಗಳು

ಉಡುಪಿ: ಕಿದಿಯೂರು ಹೋಟೆಲಿನ ಕಾರಣಿಕದ ಶ್ರೀನಾಗ ಸನ್ನಿಧಿಯ ಅಷ್ಟಪವಿತ್ರ ನಾಗಮಂಡಲ ಉತ್ಸವದ ಐದನೇ ದಿನದ ಕಾರ್ಯಕ್ರಮದ ವಿವರಗಳು ಬೆಳಗ್ಗೆ 7 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ: ಸರ್ಪ ಸೂಕ್ತ ಹವನ, ತತ್ವ ಕಲಾಶಾರಾಧನೆ, ತತ್ವ ಹೋಮ, ಶ್ರೀನಾಗ ದೇವರಿಗೆ ಹಾಲು ಹಾಗೂ ಸಿಯಾಳಗಳಿಂದ ವಿಶೇಷ ಕ್ಷೀರ ನಾರಿಕೇಳ ಅಭಿಷೇಕ, ತತ್ವ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ. ಸಂಜೆ 5 ಗಂಟೆಯಿಂದ ಬ್ರಹ್ಮಕಲಶ ಮಂಡಲ ಲೇಖನ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮ ಕುಂಭ ಸ್ಥಾಪನೆ, […]