ಫೆ. 1 ರಿಂದ 3ರ ವರೆಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ

ಮಂಗಳೂರು: ತೇಜಸ್ವಿನಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಸ್ಪೆರಾನ್ಝಾ ಸಹಯೋಗದೊಂದಿಗೆ ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಫೆಬ್ರವರಿ 1 ರಿಂದ 3ರ ವರೆಗೆ ಮಂಗಳೂರಿನ ಕದ್ರಿ ದೇವಸ್ಥಾನದ ಬಳಿಯಿರುವ ತೇಜಸ್ವಿನಿ ಆಸ್ಪತ್ರೆಯ ನೆಲಮಹಡಿಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ 6 ರ ವರೆಗೆ ನಡೆಯಲಿದ್ದು, ವಾಕ್ ಮತ್ತು ಶ್ರವಣ ತೊಂದರೆ ಎದುರಿಸುತ್ತಿರುವ ವ್ಯಕ್ತಿಗಳು ಇದರ ಪ್ರಯೋಜನವನ್ನು ಪಡೆಯಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಶಿಬಿರದಲ್ಲಿ ಉಚಿತವಾಗಿ ಲಭಿಸುವ ಸೇವೆಗಳು:

ಶ್ರವಣ ಸಮಸ್ಯೆಯುಳ್ಳವರಿಗೆ ಸಮಗ್ರ ಶ್ರವಣ ಪರೀಕ್ಷೆ ಹಾಗೂ ಅರ್ಹರಿಗೆ ಶ್ರವಣ ಸಾಧನಗಳ ಪ್ರಯೋಗ.
ಧ್ವನಿ ಸಮಸ್ಯೆಯುಳ್ಳವರಿಗೆ ವಿಶೇಷ ಮೌಲ್ಯಮಾಪನ ಮತ್ತು ಸಮಾಲೋಚನೆ.
ತೊದಲುವಿಕೆ ಸಮಸ್ಯೆಯುಳ್ಳವರಿಗೆ ವೈಯಕ್ತಿಕವಾಗಿ ಚಿಕಿತ್ಸೆಗೆ ಬೆಂಬಲ.
ಪೋಸ್ಟ್-ಸ್ಟ್ರೋಕ್, ಅಪಘಾತ ಮತ್ತು ಮಿದುಳಿನ ಗಾಯಗಳಾದ ವಯಸ್ಕರಲ್ಲಿ ಮಾತು ಮತ್ತು ಭಾಷಾ ಸಮಸ್ಯೆಗಳಿದ್ದಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಸೂಕ್ತ ಚಿಕಿತ್ಸೆಯ ಸಲಹೆ.
ಮಕ್ಕಳಲ್ಲಿ ಮಾತು ಮತ್ತು ಭಾಷಾ ಸಮಸ್ಯೆಗಳಿದ್ದಲ್ಲಿ ಸಕಾಲದಲ್ಲಿ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು.

ಶಿಬಿರದ ವಿಶೇಷ ಕೊಡುಗೆಗಳು:
ಶ್ರವಣ ಸಾಧನಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿ.
ಹಳೆಯ ಶ್ರವಣ ಸಾಧನಗಳಲ್ಲಿ ವಿನಿಮಯ ಕೊಡುಗೆ.
ಖರೀದಿಸಿದ ಶ್ರವಣ ಸಾಧನಗಳ ಮೇಲೆ ವಾರಂಟಿ ವಿಸ್ತರಣೆ.

ಉಚಿತ ಚಿಕಿತ್ಸೆ ಮತ್ತು ಮೌಲ್ಯಮಾಪನ
ನೋಂದಣಿಗಾಗಿ ಸಂಪರ್ಕಿಸಿರಿ: 7483992927 / 9916879333