ಆಟೋ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವಲಯ ಸ್ಟಿಕರ್ ಅಳವಡಿಕೆಗೆ ಕಡ್ಡಾಯ

ಉಡುಪಿ: ಉಡುಪಿ ತಾಲೂಕು ವಲಯ-01 ರ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳು ನಗರದ ಯಾವುದೇ ಆಟೋರಿಕ್ಷಾ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದಾಗಿದೆ. ಆದರೆ ಕೆಲವು ಆಟೋರಿಕ್ಷಾ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡದೇ ದಬ್ಬಾಳಿಕೆ ಮಾಡುತ್ತಿರುವುದಾಗಿ ಸಾಕಷ್ಟು ದೂರುಗಳು ಪ್ರಾಧಿಕಾರಕ್ಕೆ ಬಂದಿದ್ದು, ಉಡುಪಿ ತಾಲೂಕು ವಲಯ-01 ರ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳನ್ನು ನಗರದ ಯಾವುದೇ ಆಟೋರಿಕ್ಷಾ ನಿಲ್ದಾಣದಲ್ಲಿ ನಿಲುಗಡೆ ಮಾಡಲು ತೊಂದರೆ ನೀಡಬಾರದು ಮತ್ತು ಈಗಾಗಲೇ ಜಾರಿಯಲ್ಲಿರುವಂತೆ ಎಲ್ಲಾ ಆಟೋ ರಿಕ್ಷಾಗಳಿಗೆ ಕಲರ್ ಕೋಡಿಂಗ್ ವಲಯ ಸ್ಟಿಕರ್‌ಗಳನ್ನು ಕಡ್ಡಾಯವಾಗಿ […]

ಉಡುಪಿ: ಕೃತಿ ಆರ್. ಸನಿಲ್ ಗೆ “ಹೊಯ್ಸಳ ಕೆಳದಿ ಚೆನ್ನಮ್ಮ” ಪ್ರಶಸ್ತಿ

ಉಡುಪಿ: ಕರ್ನಾಟಕ ಸರಕಾರದ ವತಿಯಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಕೃತಿ ಆರ್ ಸನಿಲ್ ಆಯ್ಕೆಯಾಗಿದ್ದಾರೆ. ಜನವರಿ 26ರಂದು ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ […]

ಉಡುಪಿ: ವಿದ್ಯಾರ್ಥಿಗೆ ತಂಡವೊಂದು ಹಲ್ಲೆ ನಡೆಸಿ ಚೂರಿ ಇರಿತ..!

ಉಡುಪಿ: ವಿದ್ಯಾರ್ಥಿಯೋರ್ವನಿಗೆ ತಂಡವೊಂದು ಹಲ್ಲೆ ನಡೆಸಿ ಚೂರಿಯಿಂದ ಇರಿದ ಘಟನೆ ಉಡುಪಿಯ ಎಂಜಿಎಂ ಮೈದಾನದಲ್ಲಿ ಜ. 29ರಂದು ಮಧ್ಯಾಹ್ನ ನಡೆದಿದೆ. ಬ್ರಹ್ಮಾವರದ ಹೇರೂರಿನ ಪ್ರತೀಕ್ (17) ಹಲ್ಲೆಗೊಳಗಾದ ವಿದ್ಯಾರ್ಥಿ. ಇವರು ಉಡುಪಿಯ ಕೋಚಿಂಗ್ ಸೆಂಟರ್‌ವೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲಿ ಸುಹಾಸ್ ಎಂಬಾತ ಪರಿಚಯವಾಗಿತ್ತು. ಪ್ರತೀಕ್ ಒಂದುವರೆ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದರು. ಇದನ್ನು ನೋಡಿದ ಸುಹಾಸ್ ನು ಹೊಟ್ಟೆ ಕಿಚ್ಚಿನಿಂದ ನೀನು ಈ ಬೈಕ್ ನ್ನು ಕದ್ದಿದ್ದೀಯಾ ಎಂದು ಹಿಯಾಲಿಸಿದ್ದನು. ಜ. […]

ಯುವಕನೋರ್ವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತ್ಯು

ಉಡುಪಿ: ಹಠಾತ್ ಹೃದಯಾಘಾತ ಸಂಭವಿಸಿದ ಪರಿಣಾಮ ಬಸ್ಸಿನಲ್ಲೇ ಯುವಕನೋರ್ವ ಮೃತಪಟ್ಟ ಘಟನೆ ಘಟನೆ ಕುಂದಾಪುರ – ಶಿವಮೊಗ್ಗ ರಾಜ್ಯ ರಸ್ತೆಯ ಸಿದ್ದಾಪುರ ಗ್ರಾಮದ ಜನ್ಸಾಲೆ ಬಳಿ ನಡೆದಿದೆ. ಗದಗ ಜಿಲ್ಲೆಯ ಈರಪ್ಪ ಎಂಬವರ ಮಗ ಚಂದ್ರು (24) ಮೃತದುರ್ದೈವಿ. ಇವರು ದಾವಣಗೆರೆಗೆ ಹೋಗಲು ದುರ್ಗಾಂಬ ಬಸ್‌ನಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಉಡುಪಿಯಲ್ಲಿ ಬಸ್ ಹತ್ತಿ ಪ್ರಯಾಣಿಸುತ್ತಿದ್ದ ಇವರು, ದಾರಿ ಮಧ್ಯೆ ತೀವ್ರವಾಗಿ ಅಸ್ವಸ್ಥಗೊಂಡರು. ಕೂಡಲೇ ಚಾಲಕ ಬಸ್ಸನ್ನು ಸಿದ್ದಾಪುರ ಪೇಟೆಯಲ್ಲಿ ನಿಲ್ಲಿಸಿ ಅಸ್ವಸ್ಥಗೊಂಡ ಚಂದ್ರು […]

ಏರುಗತಿಯಲ್ಲಿ ಬೆಳ್ಳುಳ್ಳಿ ದರ: ಕೆಜಿಗೆ 400 ರೂ; ಫೆಬ್ರವರಿ ಅತ್ಯಂಕ್ಕೆ ಇಳಿಕೆ ಸಾಧ್ಯತೆ

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಬೆಳ್ಳುಳ್ಳಿ ದರ ಏರಿಕೆ ಕಂಡಿದ್ದು ಇಳಿಕೆಯಾಗುವ ಲಕ್ಷಣ ಸದ್ಯಕ್ಕಿಲ್ಲ. ಕೆಲ ದಿನಗಳಿಂದ ಕೆಜಿಗೆ 300 ರೂ.ವರೆಗೆ ಇದ್ದ ಬೆಳ್ಳುಳ್ಳಿ ದರ ಈ ವಾರ ಮತ್ತೆ ಏರಿಕ ಕಂಡಿದೆ. ಬೆಂಗಳೂರು ಸಹಿತ ಬಹುತೇಕ ಕಡೆ ಕೆಜಿಗೆ 400 ರೂ. ಗೆ ಮಾರಾಟವಾಗಿದೆ. ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರ 450 ರೂ.ದಿಂದ 500 ರೂ.ವರೆಗೂ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಬರುವ ಬೆಳ್ಳುಳ್ಳಿ ಪ್ರಮಾಣ ಕಡಿಮೆಯಾಗಿರುವುದು ದರ ಏರಿಕೆಯಾಗಲು ಕಾರಣ ಎನ್ನಲಾಗಿದೆ. ಫೆಬ್ರವರಿಯಲ್ಲಿ ಉತ್ತರ ಭಾರತದ […]