ಮಣಿಪಾಲ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ರಂಜನ್ ಆರ್ ಪೈ ಅವರಿಗೆ ಪರ್ಯಾಯ ದರ್ಬಾರ್ ಪ್ರಶಸ್ತಿ

ಉಡುಪಿ: ಗುರುವಾರ ಬೆಳಿಗ್ಗೆ ರಾಜಾಂಗಣದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥಪರ್ಯಾಯ ಮಹೋತ್ಸವದಲ್ಲಿ ಮಣಿಪಾಲ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ರಂಜನ್ ಆರ್ ಪೈ ಅವರನ್ನು ‘ಪರ್ಯಾಯ ದರ್ಬಾರ್’ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ಡಾ. ರಾಮದಾಸ್ ಪೈ ಮತ್ತು ವಸಂತಿ ಆರ್ ಪೈ ಅವರ ಸುಪುತ್ರರಾಗಿರುವ ಡಾ.ರಂಜನ್ ಪೈ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲವನ್ನು ರಾಷ್ಟ್ರದ ಉನ್ನತ ಹತ್ತುಬಹುಶಿಸ್ತೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸುವಲ್ಲಿ ಮತ್ತು ಕೇಂದ್ರ ಶಿಕ್ಷಣ ಮಂತ್ರಾಲಯದಿಂದ ಶ್ರೇಷ್ಠ ಸ್ಥಾನಮಾನ […]

ಅಮೃತ್‌ ಭಾರತ್‌ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣದ ಪುನರ್ ಅಭಿವೃದ್ಧಿ

ನವದೆಹಲಿ: ಭಾರತೀಯ ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ “ಅಮೃತ್‌ ಭಾರತ್‌ ಯೋಜನೆ”ಗೆ ಉಡುಪಿಯ ರೈಲು ನಿಲ್ದಾಣ ಸೇರ್ಪಡೆಯಾಗಿರುವುದಾಗಿ ವರದಿ ತಿಳಿಸಿದೆ. ಉಡುಪಿಯ ರೈಲು ನಿಲ್ದಾಣ ಕೊಂಕಣ್‌ ರೈಲ್ವೆ ಕಾರ್ಪೋರೇಶನ್‌ ಲಿಮಿಟೆಡ್‌ (KRCL) ವ್ಯಾಪ್ತಿಗೆ ಒಳಪಟ್ಟಿದೆ. ಇದೀಗ ಉಡುಪಿ ರೈಲು ನಿಲ್ದಾಣವನ್ನು ಅಮೃತ್‌ ಭಾರತ್‌ ಯೋಜನೆಗೆ ಸೇರ್ಪಡೆಗೊಳಿಸಿರುವ ಬಗ್ಗೆ ರೈಲ್ವೆ ಸಚಿವಾಲಯ ಕೆಆರ್‌ ಸಿಎಲ್‌ ಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ. ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಉಡುಪಿ ರೈಲು ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಬೇಕೆಂಬ ಬೇಡಿಕೆಗೆ […]

ಜ. 26 ರಿಂದ ಫೆಬ್ರವರಿ 23 ರ ವರೆಗೆ ಸಂವಿಧಾನ ಜಾಗೃತಿ ಜಾಥಾ: ಡಾ. ಕೆ ವಿದ್ಯಾಕುಮಾರಿ

ಉಡುಪಿ: ಜನ ಸಾಮಾನ್ಯರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಜನವರಿ 26 ರಿಂದ ಫೆಬ್ರವರಿ 23 ರ ವರೆಗೆ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ದೇಶದ ಸಂವಿಧಾನ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ಹೊಂದಬೇಕು ಎಂಬ ಉದ್ದೇಶದಿಂದ ಸಂವಿಧಾನ […]

ಶಾಲಾ ಪ್ರವಾಸದ ದೋಣಿ ಮಗುಚಿ ಇಬ್ಬರು ಶಿಕ್ಷಕರ ಸಹಿತ 12 ಶಾಲಾ ಮಕ್ಕಳ ಸಾವು; ವಡೋದರಾದಲ್ಲೊಂದು ದಾರುಣ ಘಟನೆ

ಅಹಮದಾಬಾದ್: ಗುರುವಾರ ಶಾಲಾ ಪ್ರವಾಸದ ವೇಳೆ ವಡೋದರಾದ ಹರ್ನಿ ಸರೋವರದಲ್ಲಿ ದೋಣಿಯೊಂದು ಮಗುಚಿಬಿದ್ದ ಪರಿಣಾಮ 10-13 ವರ್ಷದೊಳಗಿನ ಕನಿಷ್ಠ 12 ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ದೋಣಿಯು 16 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಘಟನೆಯ ಸಮಯದಲ್ಲಿ ಅದರಲ್ಲಿ 34 ಪ್ರಯಾಣಿಕರಿದ್ದರು. ಒಟ್ಟು 30 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ದೋಣಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಲ್ಟಿಯಾದ ನಂತರ 18 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ರಕ್ಷಿಸಲಾಗಿದೆ. ಕೆರೆಯ ಕೆಳಭಾಗದಲ್ಲಿರುವ ಹೂಳಿನಿಂದಾಗಿ […]

ಕೋಚಿಂಗ್ ಸೆಂಟರ್ ಗಳ ಆಟಾಟೋಪಕ್ಕೆ ಕಡಿವಾಣ: ನಿಯಮ ಜಾರಿಗೊಳಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ: ದೇಶಾದ್ಯಂತ ಅಣಬೆಗಳಂತೆ ತಲೆ ಎತ್ತಿರುವ ಕೋಚಿಂಗ್ ಕೇಂದ್ರಗಳಿಗೆ ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ಜಾರಿಗೊಳಿಸಿದೆ. ದೇಶದ ಕೋಚಿಂಗ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಆತಂಕಕಾರಿ ಏರಿಕೆ ಪ್ರಕರಣದ ನಡುವೆ ಈ ಕ್ರಮವು ಬಂದಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಇನ್ನೂ ಪೂರ್ಣಗೊಳಿಸದ ಯಾವುದೇ ವಿದ್ಯಾರ್ಥಿಗಳ ಪ್ರವೇಶಾತಿ ಅತಿಯಾದ ಶುಲ್ಕ ವಸೂಲಿ, ಮೂಲಸೌಕರ್ಯ, ಸರಿಯಾದ ದೂರು ಪರಿಹಾರ ವ್ಯವಸ್ಥೆ, ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಕಟಣೆ ಮತ್ತು ಪ್ರವೇಶಾತಿಗೂ ಮುನ್ನ […]