ಬ್ರಹ್ಮಾವರ: ವೃದ್ಧೆ ನಾಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ ಮಾಸ್ತಿನಗರ ನಿವಾಸಿ ಬಚ್ಚಿ ಪೂಜಾರ್ತಿ (69) ಎಂಬ ವೃದ್ಧೆಯು 2019 ರ ನವೆಂಬರ್ ನಲ್ಲಿ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 1 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2561044, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2561966 ಅನ್ನು […]

ಬೆಂಗಳೂರು: ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆಯ ಕ್ಯಾಂಪಸ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ ನೂತನ ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆಯ ಕ್ಯಾಂಪಸ್ ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿಯಲ್ಲಿ ಬೋಯಿಂಗ್‌ನ ಅತ್ಯಾಧುನಿಕ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಆವಿಷ್ಕಾರ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ನೂತನ ಬೋಯಿಂಗ್ ಕ್ಯಾಂಪಸ್ ಅನ್ನು 1,600 ಕೋಟಿ ರೂ.ಗಳ ಬಂಡವಾಳದಲ್ಲಿ ನಿರ್ಮಿಸಲಾಗಿದ್ದು, 43-ಎಕರೆ ಕ್ಯಾಂಪಸ್ ಅಮೆರಿಕದಿಂದ […]

ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳ ಶರಣಾಗತಿಯ ಗಡುವನ್ನು ವಿಸ್ತರಿಸಲು ‘ಸುಪ್ರೀಂ’ ನಕಾರ

ನವದೆಹಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಶರಣಾಗತಿಯ ಗಡುವನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಹಿಂದೆ, ಕುಟುಂಬದ ಜವಾಬ್ದಾರಿಗಳು, ವಯಸ್ಸಾದ ಪೋಷಕರ ಆರೈಕೆ, ಚಳಿಗಾಲದ ಬೆಳೆಗಳ ಕೊಯ್ಲು ಮತ್ತು ಆರೋಗ್ಯ ಪರಿಸ್ಥಿತಿಗಳಂತಹ ಕಾರಣಗಳನ್ನು ಉಲ್ಲೇಖಿಸಿ 10 ಅಪರಾಧಿಗಳು ಶರಣಾಗಲು ಹೆಚ್ಚಿನ ಸಮಯ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ, ಒಂಬತ್ತು ಅಪರಾಧಿಗಳು ಇನ್ನೂ ಆರು ವಾರಗಳ ವಿಸ್ತರಣೆಯನ್ನು ಕೋರಿದ್ದರೆ, ಒಬ್ಬರು ನಾಲ್ಕು ವಾರಗಳ ಹೆಚ್ಚುವರಿ ಸಮಯವನ್ನು ಕೇಳಿದ್ದರು. ಅರ್ಜಿಯನ್ನು ತಿರಸ್ಕರಿಸುವ […]

ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ಕೊಡವೂರಿನ ಉಡುಪರತ್ನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ “ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ “ಛಾಯಾಚಿತ್ರ ಪ್ರದರ್ಶನವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ. 18 ರಂದು ಉದ್ಘಾಟನೆಗೊಂಡಿತು. ಜಪಾನಿನ ರಿಸ್ಸೋ ಕೊಸೈ ಕೋಯ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೆ. ಕೋಶೊ ನಿವಾನೋ ಪ್ರದರ್ಶನವನ್ನು ಉದ್ಘಾಟಿಸಿದರು. ಆಸ್ಟ್ರೇಲಿಯಾ, ವಿಕ್ಟೋರಿಯಾದ ಮಾಜಿ ಸಚಿವ, ಲ್ಯೂಕ್ ಡನೆಲನ್ , […]

ವಿದ್ಯಾರ್ಥಿಗಳಿಗಾಗಿ ಅಂತಾರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆ

ಉಡುಪಿ: ಅಂಚೆ ಇಲಾಖೆಯ ವತಿಯಿಂದ ಯು.ಪಿ.ಯು ಅಂತಾರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆಯ ಪ್ರಯುಕ್ತ 9 ರಿಂದ 15 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ “At 150 years old, the UPU has served people around the world for more than eight generations. The world has changed enormously since then” ಎಂಬ ವಿಷಯದ ಕುರಿತು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ […]