ಏ. 17ಕ್ಕೆ ಬಂಡೇಲ್ ಬೊಬ್ಬರ್ಯ ದೈವಸ್ಥಾನದ ಕೋಲ ಸೇವೆ

ಬ್ರಹ್ಮಾವರ: ಇಲ್ಲಿನ ಹೇರೂರು ಬಂಡೇಲ್ ಬೊಬ್ಬರ್ಯ ದೈವಸ್ಥಾನ ಕೋಲ ಸೇವೆ ಇದೇ ಏ.17ರಂದು ನಡೆಯಲಿದೆ. ಅಂದು ಬೆಳಿಗ್ಗೆ 9ಕ್ಕೆ ಕಲಶಾಭಿಷೇಕ, ಬೆಳಿಗ್ಗೆ 11 ಗಂಟೆಗೆ ದರ್ಶನ ಸೇವೆ ಹಾಗೂ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 8 ಗಂಟೆಗೆ ಬೊಬ್ಬರ್ಯ ದೈವದ ಕೋಲ ಸೇವೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಸಮಾಜಮುಖಿ ಕಾರ್ಯದ ಮೂಲಕ ಕಾರ್ಕಳ ಯುವ ಬಂಟರ ಸಂಘದ ಉದ್ಘಾಟನೆ

ಕಾರ್ಕಳ: ಮಿಯಾರಿನ ಭದ್ರಪಾಡಿಯ ಬಂಟ ಸಮುದಾಯದ ಬಡ ಕುಟುಂಬಕ್ಕೆ ₹30 ಸಾವಿರ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಕಾರ್ಕಳ ಯುವ ಬಂಟರ ಸಂಘ ಇಂದು ಉದ್ಘಾಟನೆಗೊಂಡಿತು. ವಕೀಲ ಸುನಿಲ್ ಕುಮಾರ್ ಶೆಟ್ಟಿ ನೂತನ ಯುವ ಬಂಟರ ಸಂಘವನ್ನು ಉದ್ಘಾಟಿಸಿದರು. ನೂತನ ಯುವ ಬಂಟರ ಸಂಘದ ಅಧ್ಯಕ್ಷರಾಗಿ ಅವಿನಾಶ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ಅವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ವಿಜಯ್ ಶೆಟ್ಟಿ, ವಿಜಯ್ ಶೆಟ್ಟಿ […]

ರೆಂಜಾಳ ಮಹಾಲಕ್ಷ್ಮಿನಗರದಲ್ಲಿ ತುಳುಲಿಪಿ ನಾಮಫಲಕದ ಉದ್ಘಾಟನೆ

ಕಾರ್ಕಳ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಲಿಪಿ ಅಳಿವಿನಂಚಿನಲ್ಲಿದ್ದು, ಅದನ್ನು ಬೆಳೆಸಿ ಪೋಷಿಸುವುದು ತುಳುವರ ಜವಾಬ್ದಾರಿಯಾಗಿದೆ. ತುಳುವಿಗೆ ತನ್ನದೇ ಆದ ಇತಿಹಾಸವಿದ್ದು ದೇಶದ ಸಂಸ್ಕೃತಿಗೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಮಲ್ಲಿಕಾ ಮುನಿರಾಜ್ ಜೈನ್ ಹೇಳಿದರು. ರೆಂಜಾಳ ಮಹಾಲಕ್ಷ್ಮಿ ನಗರದಲ್ಲಿ ಅಳವಡಿಸಿರುವ ತುಳುಲಿಪಿ ನಾಮ ಫಲಕವನ್ನು ಉದ್ಘಾಟಿಸಿ ಮಾತನಾಡಿದರು. ರೆಂಜಾಳದ ತುಲು ಬಾಂಧವರಿಗೆ ತುಲು ಲಿಪಿ‌ಕಲಿಕೆಗೆ ಅನುಕೂಲವಾಗುಂತೆ ತುಲುಲಿಪಿ ತರಗತಿಯನ್ನು ಆರಂಭಿಸಲಾಗುವುದು. ತುಳುನಾಡಿನಲ್ಲಿ ಹೆಣ್ಣಿಗೆ ಹೆಚ್ಚಿನ ಮಹತ್ವದ ಸ್ಥಾನ ನೀಡಲಾಗಿದ್ದು ತುಳು ಬೆಳೆಸುವುದು ನಮ್ಮ ಕರ್ತವ್ಯ ಎಂದರು. […]

ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮ

ಉಡುಪಿ: ಶತಮಾನೋತ್ಸವ ಸಂಭ್ರಮ ನಮ್ಮೊಳಗಿನ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸಲು ಒಂದು ದಾರಿಯಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಬುಧವಾರ ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮದ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಾಸ್ತಾನ ಧರ್ಮಕೇಂದ್ರ 100 ವರ್ಷಗಳ ಹಿಂದೆ ಕಲ್ಯಾಣಪುರ ದೇವಾಲಯದ ಒಂದು ಭಾಗವಾಗಿದ್ದು, ಅಂದಿನ ಪೂರ್ವಜರು ಮೂರು ನದಿಗಳನ್ನು ದಾಟಿ ಕಾಲ್ನಡಿಗೆ ಮೂಲಕ ಚರ್ಚಿಗೆ ತೆರಳಿ ಕ್ರೈಸ್ತ ಸಭೆಯಲ್ಲಿ ತಮ್ಮ […]

ಹಿರಿಯಡಕ: ಬೈಕ್ ಗೆ ಟಿಪ್ಪರ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಹಿರಿಯಡಕ: ಟಿಪ್ಪರ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬಲ್ಲಿ ಇಂದು ಸಂಭವಿಸಿದೆ. ಹಿರಿಯಡಕ ಬಜೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಮೃತ ಬೈಕ್ ಸವಾರ ಕೋಟೇಶ್ವರದ ಮೊಹಮ್ಮದ್ ಹನೀಫ್ (45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೊಹಮ್ಮದ್ ಕುಕ್ಕೆಹಳ್ಳಿಯಿಂದ ಹಿರಿಯಡಕ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದು, ಈ ವೇಳೆ ಎದುರಿನಿಂದ ಬಂದ ಟಿಪ್ಪರ್ […]