ಏ. 17ಕ್ಕೆ ಬಂಡೇಲ್ ಬೊಬ್ಬರ್ಯ ದೈವಸ್ಥಾನದ ಕೋಲ ಸೇವೆ

ಬ್ರಹ್ಮಾವರ: ಇಲ್ಲಿನ ಹೇರೂರು ಬಂಡೇಲ್ ಬೊಬ್ಬರ್ಯ ದೈವಸ್ಥಾನ ಕೋಲ ಸೇವೆ ಇದೇ ಏ.17ರಂದು ನಡೆಯಲಿದೆ.

ಅಂದು ಬೆಳಿಗ್ಗೆ 9ಕ್ಕೆ ಕಲಶಾಭಿಷೇಕ, ಬೆಳಿಗ್ಗೆ 11 ಗಂಟೆಗೆ ದರ್ಶನ ಸೇವೆ ಹಾಗೂ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 8 ಗಂಟೆಗೆ ಬೊಬ್ಬರ್ಯ ದೈವದ ಕೋಲ ಸೇವೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.