ಸಮುದ್ರದಲ್ಲಿ 3.9 ಕಿ.ಮೀ‌. ದೂರ ಈಜುವ ಮೂಲಕ ಪರಿಸರ ಜಾಗೃತಿ ಮೂಡಿಸಿದ ಕರಂಬಳ್ಳಿ ಸ್ವಿಮ್ಮರ್ಸ್ ತಂಡದ ಸದಸ್ಯರು

ಉಡುಪಿ: ಇಲ್ಲಿನ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ನಿತ್ಯ ಈಜುವ ಹವ್ಯಾಸಿ ಈಜುಗಾರರ ಕರಂಬಳ್ಳಿ ಸ್ವಿಮ್ಮರ್ಸ್ ತಂಡದ 15 ಮಂದಿ ಸಮುದ್ರಕ್ಕೆ ಕಸ, ಕಲ್ಮಶ ಎಸೆಯದೆ, ಪರಿಸರ ರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಬುಧವಾರ ಮುಂಜಾನೆ ಸೈಂಟ್ ಮೆರೀಸ್ ದ್ವೀಪದಿಂದ ಮಲ್ಪೆ ಕಡಲ ಕಿನಾರೆಯವರೆಗೆ ಈಜಿ ಜಾಗೃತಿ ಮೂಡಿಸಿದರು. ಆರ್. ಕೆ. ರಮೇಶ್ ಪೂಜಾರಿ ನೇತೃತ್ವದ ತಂಡದಲ್ಲಿ ಪ್ರಕಾಶ್ ಜೋಗಿ, ನಿತ್ಯಾನಂದ ಜೋಗಿ, ಪ್ರಶಾಂತ್, ವಿಜಯರಾಜ್, ಕೇಶವ ಗೌಡ, ಆನಂದ ಹೊಳ್ಳ, ಲೋಕೇಶ ಪಾಲನ್, ದಿನೇಶ್ ಜತ್ತನ್, […]

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಹಾಸಿಗೆಗಳ ಕೊರತೆ: ದೃಢೀಕರಿಸಿಕೊಂಡು ಬರುವಂತೆ ಸೂಚನೆ

ಮಣಿಪಾಲ: ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಇದರಿಂದ ಐಸಿಯುನಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್ ತೀವ್ರ ಕೊರತೆಯಂಟಾಗಿದೆ. ಆದ್ದರಿಂದ ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ರೋಗಿಗಳು / ರೋಗಿಗಳ ಆರೈಕೆದಾರರು, ಆಂಬ್ಯುಲೆನ್ಸ್, ಸೇವಾ ಪೂರೈಕೆದಾರರು ತಮ್ಮ ಸ್ಥಳದಿಂದ ಹೊರಡುವ ಮುನ್ನ ದೂರವಾಣಿ ಸಂಖ್ಯೆ 96866 92603 ಗೆ ಕರೆ ಮಾಡುವುದರ ಮೂಲಕ, ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) […]

ಸಿಬಿಎಸ್​ಇ ಪರೀಕ್ಷೆ: 10ನೇ ತರಗತಿಗೆ ರದ್ದು, 12ನೇ ತರಗತಿಗೆ ಮುಂದೂಡಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್​ಇ 10ನೇ ತರಗತಿಗೆ ಪರೀಕ್ಷೆ ರದ್ದುಗೊಳಿಸಿ, 12 ನೇ ತರಗತಿಗೆ ಪರೀಕ್ಷೆಗಳನ್ನು ಮುಂದೂಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸಿಬಿಎಸ್​ಇ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಪರೀಕ್ಷೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದವು. ಈ ಹಿನ್ನೆಲೆ ಇಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಪ್ರಮುಖ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ರಮೇಶ್ ಪೋಖ್ರಿಯಾಲ್ ಸಿಬಿಎಸ್​ಇ ಬೋರ್ಡ್ ಜೊತೆಗೆ ಸಭೆ ನಡೆಸಿತ್ತು. ಸಭೆಯಲ್ಲಿ ಅಂತಿಮವಾಗಿ […]

ರಾಜಸ್ಥಾನ ರಾಯಲ್ಸ್ ಗೆ ಮತ್ತೊಂದು ಆಘಾತ: ಪ್ರಮುಖ ಆಲ್ ರೌಂಡರ್ ಟೂರ್ನಿಯಿಂದ ಹೊರಕ್ಕೆ

ಮುಂಬೈ: ಐಪಿಎಲ್ ಟೂರ್ನಿಯ ಆರಂಭದಲ್ಲಿಯೇ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಅಲಭ್ಯತೆಯಿಂದ ಸಂಕಷ್ಟಕ್ಕೊಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ. ಪ್ರಮುಖ ಆಲ್ ರೌಂಡರ್, ಆರಂಭಿಕ ಬ್ಯಾಟ್ಸಮನ್ ಬೆನ್ ಸ್ಟೋಕ್ಸ್ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದು, ತಂಡಕ್ಕೆ ಹೊಸ ತಲೆನೋವಾಗಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸ್ಟೋಕ್ಸ್ ಗಾಯಗೊಂಡಿದ್ದರು. ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಕ್ಯಾಚ್ ಮಾಡುವ ವೇಳೆ ಸ್ಟೋಕ್ಸ್ ಬೆರಳಿಗೆ ಗಾಯವಾಗಿತ್ತು. ಎಡಗೈ ಯ ತೋರು ಬೆರಳು ಮುರಿತವಾಗಿದೆ. ಇದರಿಂದ ನಾಲ್ಕೈದು […]

ದ.ಕ‌. ಹಾಲು ಉತ್ಪಾದಕರ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ನಿಂದ ನೀಲಾವರ ಗೋಶಾಲೆಗೆ ₹1 ಲಕ್ಷ ದೇಣಿಗೆ ಹಸ್ತಾಂತರ

ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್‌ ನಿಂದ ನಡೆಸಲ್ಪಡುತ್ತಿರುವ ನೀಲಾವರ ಗೋಶಾಲೆಗೆ ₹1 ಲಕ್ಷ ದೇಣಿಗೆ ಹಸ್ತಾಂತರಿಸಲಾಯಿತು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಅವರು ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಇಂದು ಭೇಟಿಯಾಗಿ ದೇಣಿಗೆಯ ಚೆಕ್ ಹಸ್ತಾಂತರಿಸಿದರು.‌