ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆ ಮುರಿಯಲು ಹೊರಟಿದೆ: ಸಿದ್ದರಾಮಯ್ಯ ಟೀಕೆ
ಬೆಂಗಳೂರು: ನಾಡಿನ ರೈತರು ಬರಗಾಲ, ಪ್ರವಾಹ, ಕೊರೊನಾ ಹಾವಳಿಗಳಿಂದಾಗಿ ಈಗಾಗಲೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಇಂದು ಬೆಂಗಳೂರಿನಲ್ಲಿ ನಡೆದ ನ್ಯಾ. ನಾಗಮೋಹನ ದಾಸ್ ಅವರ ರೈತರ ಭದ್ರತೆ ದೇಶದ ಭದ್ರತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಕಿಪೊಟ್ಟಣ ತಯಾರಿಸುವವನೂ ದರ ನಿಗದಿ ಮಾಡುತ್ತಾನೆ. […]
ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಇದ್ದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ: ಕೃಷ್ಣಭೈರೇಗೌಡ
ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಯಾರೇ ಇದ್ದರೂ ರಕ್ಷಣೆ ಮಾಡಬಾರದು. ರಾಜಕಾರಣಿಗಳು ಅಥವಾ ಅವರ ಪುತ್ರರು ಇದ್ದರೂ ಕೂಡ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೃಷ್ಣಭೈರೇಗೌಡ ಆಗ್ರಹಿಸಿದ್ದಾರೆ. ಕೋಲಾರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ತನಿಖೆ, ಸಾಕ್ಷ್ಯಧಾರ ರಹಿತವಾಗಿ ಯಾರ ಮೇಲೂ ಆರೋಪ ಹೊರೆಸಬಾರದು. ಯಾವುದೇ ವ್ಯಕ್ತಿಯ ಸಾಮಾಜಿಕ ಜೀವನ ಹಾಳುಮಾಡಬಾರದು. ಊಹಾಪೋಹಾದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ರಂಗದಲ್ಲಿ ಮೋಹಕವಾಗಿ ಕುಣಿತಾರೆ, ಈ ಯಕ್ಷತಾರೆ : ನಾಟ್ಯಮಯೂರಿ, ಯಕ್ಷ ಕುವರಿ ಮಣಿಪಾಲದ ಸಂಧ್ಯಾ ನಾಯಕ್
◊ ದೀಪಕ್ ಕಾಮತ್ ಎಳ್ಳಾರೆ ಬಾಲ್ಯದಿಂದಲೇ ಯಕ್ಷಗಾನ ಅಂದರೆ ಅತೀವ ಪ್ರೀತಿ. ಯಕ್ಷಗಾನದ ಮಾತುಗಾರಿಕೆ, ಕುಣಿತ ನೋಡಿ ಆಕರ್ಷಣೆಗೆ ಒಳಗಾದ ಸಂಧ್ಯಾ ಯಕ್ಷಗಾನವನ್ನು ಕಲಿತು ಯಕ್ಷರಂಗದಲ್ಲಿ ಇಂದು ಸಾಧನೆ ಮಾಡುತ್ತಿರುವ ಯುವ ಪ್ರತಿಭೆ. ಉಡುಪಿ ಜಿಲ್ಲೆಯ ಮಣಿಪಾಲದ ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ದಂಪತಿಗಳ ಮಗಳಾದ ಸಂಧ್ಯಾ ನಾಯಕ್ ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯಿಂದ ಪ್ರಭಾವಿತಗೊಂಡು ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಖ್ಯಾತ ಭಾಗವತ ಪ್ರಸಾದ್ ಮೊಗೆಬೆಟ್ಟು ಇವರಲ್ಲಿ ಯಕ್ಷರಂಗದ ಪ್ರಾಥಮಿಕ ಶಿಕ್ಷಣವನ್ನು ಪಡೆದರು. MPUC ಯಲ್ಲಿ ಕಲಿಯುತ್ತಿರುವಾಗ […]
ಯಾವ ಬಿರುದು, ಸಮ್ಮಾನವನ್ನೂ ಬಯಸದೆ ಶೈಕ್ಷಣಿಕ ಕ್ರಾಂತಿ ಮಾಡ್ತಿದ್ದಾರೆ ಉಡುಪಿಯ ಡಾ. ಮಹಾಬಲೇಶ್ವರ ರಾವ್
ಐದು ಕೃತಿಗಳಿಗೆ ಐದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ (ಇದೊಂದು ದಾಖಲೆ. ಯಾರಿಗೂ ಹೀಗೆ ಕಳೆದ ಏಳೆಂಟು ವರ್ಷಗಳಲ್ಲಿ ಕಸಾಪದ ದತ್ತಿನಿಧಿ ಬಹುಮಾನ ಬಂದಿಲ್ಲ), ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟಿನ ಜೀವಮಾನ ಸಾಧನೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉಪಾಧ್ಯಾಯ ಸಮ್ಮಾನ್ ಗೌರವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾ. ದತ್ತಿನಿಧಿ ಪುರಸ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನ, […]
ಕ್ರಿಕೆಟಿಗರಿಗೂ ಅಂಟಿದ ಡ್ರಗ್ಸ್ ನಶೆಯ ನಂಟು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಿರೇನ್ ಖನ್ನಾ
ಬೆಂಗಳೂರು: ಪಾರ್ಟಿಗಳಿಗೆ ಕೇವಲ ನಟ ನಟಿಯರು, ರಾಜಕಾರಣಿಗಳ ಪುತ್ರರು ಹಾಗೂ ಉದ್ಯಮಿಗಳು ಮಾತ್ರ ಭಾಗವಹಿಸುತ್ತಿರಲಿಲ್ಲ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟಿಗರು ಕೂಡ ಬರುತ್ತಿದ್ದರು ಎಂದು ಸಿಸಿಬಿಯ ಬಂಧನದಲ್ಲಿ ಇರುವ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾ ಇದೀಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ನಾನು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಕೇವಲ ನಟ ನಟಿಯರು, ಕೆಲ ರಾಜಕಾರಣಿಗಳ ಪುತ್ರರು ಹಾಗೂ ಉದ್ಯಮಿಗಳು ಮಾತ್ರ ಭಾಗವಹಿಸುತ್ತಿರಲಿಲ್ಲ. ಕ್ರಿಕೆಟಿಗರು ಹಾಗೂ ಧಾರಾವಾಹಿಗಳ ನಟ ನಟಿಯರು ಕೂಡ ಬರುತ್ತಿದ್ದರು ಎಂಬ ಮಾಹಿತಿಯನ್ನು ಸಿಸಿಬಿಗೆ ನೀಡಿದ್ದಾನೆ. ನಟಿ ಸಂಜನಾ […]