udupixpress
Home Trending ಕ್ರಿಕೆಟಿಗರಿಗೂ ಅಂಟಿದ ಡ್ರಗ್ಸ್ ನಶೆಯ ನಂಟು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಿರೇನ್ ಖನ್ನಾ

ಕ್ರಿಕೆಟಿಗರಿಗೂ ಅಂಟಿದ ಡ್ರಗ್ಸ್ ನಶೆಯ ನಂಟು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಿರೇನ್ ಖನ್ನಾ

ಬೆಂಗಳೂರು: ಪಾರ್ಟಿಗಳಿಗೆ ಕೇವಲ ನಟ ನಟಿಯರು, ರಾಜಕಾರಣಿಗಳ ಪುತ್ರರು ಹಾಗೂ ಉದ್ಯಮಿಗಳು ಮಾತ್ರ ಭಾಗವಹಿಸುತ್ತಿರಲಿಲ್ಲ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟಿಗರು ಕೂಡ ಬರುತ್ತಿದ್ದರು ಎಂದು ಸಿಸಿಬಿಯ ಬಂಧನದಲ್ಲಿ ಇರುವ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾ ಇದೀಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ನಾನು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಕೇವಲ ನಟ ನಟಿಯರು, ಕೆಲ ರಾಜಕಾರಣಿಗಳ ಪುತ್ರರು ಹಾಗೂ ಉದ್ಯಮಿಗಳು ಮಾತ್ರ ಭಾಗವಹಿಸುತ್ತಿರಲಿಲ್ಲ. ಕ್ರಿಕೆಟಿಗರು ಹಾಗೂ ಧಾರಾವಾಹಿಗಳ ನಟ ನಟಿಯರು ಕೂಡ ಬರುತ್ತಿದ್ದರು ಎಂಬ ಮಾಹಿತಿಯನ್ನು ಸಿಸಿಬಿಗೆ ನೀಡಿದ್ದಾನೆ.

ನಟಿ ಸಂಜನಾ ಗಲ್ರಾನಿ ಹಲವು ಬಾರಿ ಪಾರ್ಟಿಗೆ ಬಂದಿದ್ದರು. ಆದರೆ ರಾಗಿಣಿ ನನ್ನ ಪಾರ್ಟಿಗೆ ಎರಡು ಬಾರಿ ಮಾತ್ರ ಬಂದಿದ್ದರು ವಿಚಾರಣೆ ವೇಳೆ ಹೇಳಿದ್ದಾನೆ.

ಸದ್ಯ ವಿರೇನ್ ಒಂದು ಮೊಬೈಲ್ ನ ರಿಟ್ರೀನ್ ಆಗಿಲ್ಲ. ಮೊಬೈಲ್ ರಿಟ್ರೀವ್ ಆದ ಬಳಿಕ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ. ವಿರೇನ್ ಖನ್ನಾ ಕಸ್ಟಡಿ ಅವಧಿ ನಾಳೆಗೆ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಅಧಿಕಾರಿಗಳು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.