ಕಾರ್ಕಳ ಹಿಂದೂ ಜಾಗರಣ ವೇದಿಕೆಯಿಂದ ‘ಭಾರತ್ ಮಾತಾ ಪೂಜನ್’: 400 ಹಿಂದೂ ಕಾರ್ಯಕರ್ತರಿಂದ ದೀಕ್ಷೆ ಸ್ವೀಕಾರ

ಬೆಳ್ಮಣ್: ಹಿಂದೂ ಜಾಗರಣ ವೇದಿಕೆ ಕಾರ್ಕಳ-ಬೆಳ್ಮಣ್ ವಲಯ ಇದರ ವತಿಯಿಂದ ಭಾರತ್ ಮಾತಾ ಪೂಜನ್ ಮತ್ತು ನೂತನ ಘಟಕಗಳ ಘೋಷಣೆ ಕಾರ್ಯಕ್ರಮ ಇಂದು ಸೂಡ ಸುಬ್ರಹ್ಮಣ್ಯ ದೇವಸ್ಥಾನದದ ಸಭಾಂಗಣದಲ್ಲಿ ನಡೆಯಿತು. ಬೆಳ್ಮಣ್ ವಲಯದ ಖ್ಯಾತ ಧಾರ್ಮಿಕ ಮುಖಂಡ ಶ್ರೀಶ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ, ಹಿಂದೂ ಧಾರ್ಮಿಕ ಮುಖಂಡ ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು, ರಾಜೇಶ್ ಉಚ್ಚಿಲ, ಕಾರ್ಕಳ ತಾಲೂಕು ಹಿಂಜಾವೇ ಪ್ರಧಾನ […]

ಪ್ರಧಾನಿ ಮೋದಿ ಜನ್ಮದಿನ: ಸೆ. 19ರಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಉಚಿತ ಕಣ್ಣಿನ ತಪಾಸಣೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೆಪ್ಟೆಂಬರ್ 19ರಂದು ಬೆಳಿಗ್ಗೆ 9 ಗಂಟೆಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಉಚಿತ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಅಗತ್ಯವಿದ್ದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಮಹಿಳಾ ಮೋರ್ಚಾ ಮತ್ತು ಪ್ರಸಾದ್ ನೇತ್ರಾಲಯದ ಜಂಟಿ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ […]

ನಿಟ್ಟೂರು ಪ್ರೌಢಶಾಲೆಯ 15 ಹಳೆವಿದ್ಯಾರ್ಥಿ ಶಿಕ್ಷಕರಿಗೆ ‘ಸುವರ್ಣ ಶಿಕ್ಷಕ ಪುರಸ್ಕಾರ’ ಪ್ರದಾನ

ಉಡುಪಿ: ನಿಟ್ಟೂರು ಪ್ರೌಢ ಶಾಲೆಯ ‘ಸುವರ್ಣ ಪರ್ವ’ ಆಚರಣೆಯ ಅಂಗವಾಗಿ 15 ಮಂದಿ ಶಾಲಾ ಹಳೆವಿದ್ಯಾರ್ಥಿ ಶಿಕ್ಷಕರುಗಳನ್ನು ‘ಸುವರ್ಣ ಶಿಕ್ಷಕ ಪುರಸ್ಕಾರ’ದೊಂದಿಗೆ ಸನ್ಮಾನಿಸಲಾಯಿತು. ಭಾನುವಾರ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಅವರು ಶಿಕ್ಷಕರಿಗೆ ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು. ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಮಾತನಾಡಿ, ಬಾಲ್ಯದಲ್ಲಿ ಕಳೆದ ಶಾಲಾ ದಿನಗಳನ್ನು ಮೆಲುಕು ಹಾಕುವಾಗ ದೊರೆಯುವ ಆನಂದಕ್ಕೆ ಸರಿಸಮಾನವಾದುದು ಬೇರೆ ಇಲ್ಲ. ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದ ಹಳೆವಿದ್ಯಾರ್ಥಿಗಳನ್ನು […]

ಸಾಣೂರು ಯುವಕ ಮಂಡಲದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಕಾರ್ಕಳ: ಸಾಣೂರು ಯುವಕ ಮಂಡಲದ ಆಶ್ರಯದಲ್ಲಿ ‘ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮ’ ಅಂಗವಾಗಿ ಸಾಣೂರು ಗ್ರಾಮದ ಯುವಕರಿಗೆ ಯುವಕ ಮಂಡಲದ ಮೈದಾನದಲ್ಲಿ ಭಾನುವಾರ ಕಬಡ್ಡಿ ಪಂದ್ಯಾಟ ಹಮ್ಮಿಕೊಳ್ಳಲಾಯಿತು. ಜಿಪಂ ಸದಸ್ಯೆ ದಿವ್ಯಶ್ರೀ ಗಿರೀಶ್ ಅಮೀನ್ ಪಂದ್ಯಾಟವನ್ನು ಉದ್ಘಾಟಿಸಿ ಶುಭಹಾರೈಸಿದರು. ಸಾಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಪ್ರಕಾಶ್ ಮಡಿವಾಳ ಶಂಕರ್ […]

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ನಮ್ಮ ನೆಲ, ಜಲದ ಪ್ರಶ್ನೆ: ಎಸ್.ಆರ್. ಪಾಟೀಲ್

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹೊರರಾಜ್ಯದ ಜನರು ಬಂದು ನಮ್ಮ ಜಮೀನು ಖರೀದಿಸಲು ಅನುಕೂಲವಾಗಿದೆ. ಇದರಿಂದ ನಮ್ಮ ನೆಲ ಪರರ ಪಾಲಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರರಾಜ್ಯದ ಕಾಳಧನಿಕರು ನಮ್ಮ ಭೂಮಿ‌ ಖರೀದಿಸುತ್ತಾರೆ. ಅದೇ ಜಮೀನಿಗೆ ನಮ್ಮ ಜಲಾಶಯದ ನೀರು ಬಳಸುತ್ತಾರೆ. ಆದರೆ ನಮ್ಮ ರೈತರು ಮಾತ್ರ ಸಾಲದಲ್ಲಿಯೇ ಸಾಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭೂ ಸುಧಾರಣೆ ತಿದ್ದುಪಡಿ […]