ಮಲ್ಪೆ: ಅಸಾಯಕ ಸ್ಥಿತಿಯಲ್ಲಿದ್ದ ಬಾಲಕನ ರಕ್ಷಣೆ, ಪೋಷಕರಿಗೆ ಹಸ್ತಾಂತರ

ಮಲ್ಪೆ: ಕೊಡವೂರು ಸಮೀಪದ ಜುಮಾದಿನಗರ ಬಸ್ ಸ್ಟಾಂಡ್ ನಲ್ಲಿ ಮನೆ ಬಿಟ್ಟು ಬಂದು ಅಸಾಯಕನಾಗಿ ಕುಳಿತಿದ್ದ ಸುಮಾರು 9 ವರ್ಷದ ಬಾಲಕನನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿ ಪೋಷಕರಿಗೆ ಹಸ್ತಾಂತರ ಮಾಡಿದೆ. ಬಸ್ ನಿಲ್ದಾಣದಲ್ಲಿ ತುಂಬಾ ಹೊತ್ತಿನಿಂದ ಕುಳಿತಿದ್ದನ್ನು ಬಾಲಕನನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ರವಿ ಕೊಡವೂರು ಮಕ್ಕಳ ಸಹಾಯವಾಣಿಗೆ ಕರೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಕೂಡಲೇ ಕಾರ್ಯಪ್ರವೃತ್ತವಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲಕ ಇರುವ ಸ್ಥಳಕ್ಕೆ ತೆರಳಿದ್ದಾರೆ. […]

ಎಡನೀರು ಮಠಕ್ಕೆ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯ ನೇಮಕ

ಕಾಸರಗೋಡು: ಎಡನೀರು ಮಠಾಧೀಶ ಕೇಶವಾನಂದ ಭಾರತೀತೀರ್ಥ ಮಹಾಸ್ವಾಮಿಗಳು ಶನಿವಾರ ರಾತ್ರಿ ಪರಂಧಾಮ ಸೇರಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಮಠದ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯ ಅವರನ್ನು ನೇಮಿಸಲಾಗಿದೆ . ಕಳೆದ ಅನೇಕ ವರ್ಷಗಳಿಂದ ಜಯರಾಮಣ್ಣ ಎಂದೇ ಮಠದ ಭಕ್ತ ವಲಯದಲ್ಲಿ ಚಿರಪರಿಚಿತರಾಗಿದ್ದ ಮಂಜತ್ತಾಯರು ಶ್ರೀಗಳ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಕೇಶವಾನಂದ ಭಾರತೀತೀರ್ಥರ ಸಮಾಧಿ ಪ್ರಕ್ರಿಯೆ ಮುಗಿಯುವ ಮೊದಲೇ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಸಚ್ಚಿದಾನಂದ ಭಾರತೀತೀರ್ಥ ಮಹಾಸ್ವಾಮಿಗಳೆಂದು ನಾಮಕರಣ ಮಾಡಲಾಗಿದೆ. ಮಠದ ಆಸ್ಥಾನ ಪುರೋಹಿತರು , ಕುಂಟಾರು […]

ಡ್ರಗ್ಸ್ ನಂಟು ಬಿಚ್ಚಿಡುತ್ತಾ ನಟ ಸುಶಾಂತ್ ಸಿಂಗ್ ಸಾವಿನ ಗುಟ್ಟು!.

ನವದೆಹಲಿ: ನಟ ಸುಶಾಂತ್ ಸಿಂಗ್ ಸಂಶಯಾಸ್ಪದ ಸಾವಿನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಹಾಗೂ ಎನ್ ಸಿಬಿ ತಂಡದ ಅಧಿಕಾರಿಗಳು ಮೂರು‌ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಸುಶಾಂತ್ ಸಾವಿನ ಕುರಿತು ತನಿಖೆ ನಡೆಸಿದರೆ, ಇಡಿ ಸುಶಾಂತ್ ಸಿಂಗ್ ಖಾತೆಯಲ್ಲಿದ್ದ 15 ಕೋಟಿ ರೂ. ಹಾಗೂ ಇತರ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ. ಆದರೆ ಎನ್ ಸಿಬಿ ವಿಭಿನ್ನ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಸುಶಾಂತ್ ಸಿಂಗ್ ಸಾವಿಗೆ ಡ್ರಗ್ಸ್ ಜಾಲದ ನಂಟಿದೆಯೇ […]

ಬೆಳ್ತಂಗಡಿ: ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ನಿಂದ ವರ್ಚುವಲ್ ಮೂಲಕ ಗುರು ನಮನ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ “ಶ್ರೀ ಮಂಜುನಾಥ” ಸ್ಕೌಟ್ ಗೈಡ್ ದಳದಿಂದ “ಗುರು ನಮನ” ಕಾರ್ಯಕ್ರಮ ವನ್ನು ವರ್ಚುವಲ್ ಮೂಲಕ ಆಚರಿಸಲಾಯಿತು. ಎಸ್ ಡಿಎಂ ನ ಕಬ್ ಬುಲ್ ಬುಲ್, ಸ್ಕೌಟ್ ಗೈಡ್ ವಿಧ್ಯಾರ್ಥಿಗಳು ಭಾಗವಹಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚಲನಚಿತ್ರ ಚಿತ್ರ ಸಂಗೀತ ನಿರ್ದೇಶಕ ಗುರು ಬಾಯಾರ್ ಅವರು ಆಗಮಿಸಿದ್ದರು. ಗೌರವ ಅತಿಥಿಯಾಗಿ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ಲಾಕ್ ಲೀಡರ್ ಎಲ್‌ .ಟಿ  […]

ಕಾರ್ಕಳ ಹಿಂದು ಜಾಗರಣ ವೇದಿಕೆಯಿಂದ ಶಿಕ್ಷಕರಿಗೆ ಸನ್ಮಾನ

ಕಾರ್ಕಳ: ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಕಳ ಹಿಂದು ಜಾಗರಣ ವೇದಿಕೆ ವತಿಯಿಂದ ವಿವಿಧೆಡೆ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯ ಕಾರ್ಯಕರ್ತರು ಶಿಕ್ಷಕರ ಮನೆಗಳಿಗೆ ತೆರಳಿ‌ ಸನ್ಮಾನಿಸಿ, ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ನಾರಾವಿ, ತಾಲೂಕು ಪ್ರಚಾರ ಪ್ರಮುಖ್ ರಮೇಶ್ ಶೆಟ್ಟಿ ಅಯೋದ್ಯ ನಗರ, ಕಾರ್ಕಳ ನಗರದ ಪ್ರಮುಖರಾದ ಸುಜಿತ್, ಚೇತನ್ ಪ್ರಭು, ಸಂದೀಪ್ ಪೂಜಾರಿ, ಬೈಲೂರು ವಲಯ ಪ್ರಧಾನ ಕಾರ್ಯದರ್ಶಿ […]