udupixpress
Home Trending ಡ್ರಗ್ಸ್ ನಂಟು ಬಿಚ್ಚಿಡುತ್ತಾ ನಟ ಸುಶಾಂತ್ ಸಿಂಗ್ ಸಾವಿನ ಗುಟ್ಟು!.

ಡ್ರಗ್ಸ್ ನಂಟು ಬಿಚ್ಚಿಡುತ್ತಾ ನಟ ಸುಶಾಂತ್ ಸಿಂಗ್ ಸಾವಿನ ಗುಟ್ಟು!.

ನವದೆಹಲಿ: ನಟ ಸುಶಾಂತ್ ಸಿಂಗ್ ಸಂಶಯಾಸ್ಪದ ಸಾವಿನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಹಾಗೂ ಎನ್ ಸಿಬಿ ತಂಡದ ಅಧಿಕಾರಿಗಳು ಮೂರು‌ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಸಿಬಿಐ ಅಧಿಕಾರಿಗಳು ಸುಶಾಂತ್ ಸಾವಿನ ಕುರಿತು ತನಿಖೆ ನಡೆಸಿದರೆ, ಇಡಿ ಸುಶಾಂತ್ ಸಿಂಗ್ ಖಾತೆಯಲ್ಲಿದ್ದ 15 ಕೋಟಿ ರೂ. ಹಾಗೂ ಇತರ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿದೆ. ಆದರೆ ಎನ್ ಸಿಬಿ ವಿಭಿನ್ನ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಸುಶಾಂತ್ ಸಿಂಗ್ ಸಾವಿಗೆ ಡ್ರಗ್ಸ್ ಜಾಲದ ನಂಟಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದೆ. ಡ್ರಗ್ಸ್ ವಿಚಾರದಲ್ಲಿ ಎನ್ ಸಿಬಿ ಸಾಕಷ್ಟು ಯಶಸ್ಸು ಸಾಧಿಸಿದೆ.

ಮಾದಕವಸ್ತುಗಳ ಸೇವನೆ, ಸಂಗ್ರಹ ಮತ್ತು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್‌, ನಟ ಸುಶಾಂತ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಹಾಗೂ ಕೆಲಸದಾಳು ದೀಪೇಶ್‌ ಸಾವಂತ್ ಎನ್ ಸಿಬಿ ಈಗಾಗಲೇ ಬಂಧಿಸಿದೆ.

ಈ ಮೂರು ಆರೋಪಿಗಳು ವಿಚಾರಣೆ ವೇಳೆ ಹೇಳಿದ ಮಾಹಿತಿಯನ್ನಾಧರಿಸಿ ರಿಯಾ ಚಕ್ರವರ್ತಿ ಗೆ ಎನ್ ಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಅದರಂತೆ ಇಂದು ರಿಯಾ ವಿಚಾರಣೆ ಹಾಜರಾಗಿದ್ದು, ಆರು ಗಂಟೆಗಳ ಕಾಲ ಅಧಿಕಾರಿಗಳ ತೀವ್ರ ವಿಚಾರಣೆಗೆ ಒಳಗಾಗಿದ್ದರು. ನಾಳೆಯೂ ಎನ್ ಸಿಬಿ ಅಧಿಕಾರಿಗಳ ವಿಚಾರಣೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ರಿಯಾಗೆ ಡ್ರಗ್ಸ್ ನಂಟು ಇತ್ತು.?
ರಿಯಾ ಚಕ್ರವರ್ತಿಗೆ ಡ್ರಗ್ಸ್ ನಂಟು ಹೊಂದಿದ್ದಳು ಎಂಬುವುದಕ್ಕೆ ಎನ್ ಸಿಬಿ ಅಧಿಕಾರಿಗಳು ಡಿಜಿಟಲ್ ಸಾಕ್ಷ್ಯ ಸೇರಿದಂತೆ ಇತರ ಸಾಕ್ಷ್ಯ ಕಲೆಹಾಕಿದ್ದಾರೆ ಎನ್ನಲಾಗುತ್ತಿದೆ. ಮತ್ತಷ್ಟು ಮಾಹಿತಿ ಕಲೆ ಹಾಕಲು ಮತ್ತೆ ನಾಳೆ ಹಾಜರಾಗುವಂತೆ ಎನ್ ಸಿಬಿ ರಿಯಾಳಿಗೆ ಸಮನ್ಸ್ ನೀಡಿದೆ. ರಿಯಾಳ ಮೇಲಿರುವ ಡ್ರಗ್ಸ್ ಆರೋಪ ಸಾಬೀತಾದರೆ ನಾಳೆ ಎನ್ ಸಿಬಿ ರಿಯಾಳನ್ನು ಕಸ್ಟಡಿಗೆ ತೆಗೆದುಕೊಂಡು ಮತ್ತಷ್ಟು ವಿಚಾರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಸಂಶಯ.?
ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆಯ ಬಗ್ಗೆಯೂ ಅನುಮಾನ ಎದ್ದಿದೆ. ಸಿಬಿಐ ಅಧಿಕಾರಿಗಳು ಈ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದ್ದಾರೆ. ಸುಶಾಂತ್ ಕುತ್ತಿಗೆಯಲ್ಲಿದ್ದ ಹಗ್ಗದ ಗುರುತುಗಳ ಬಗ್ಗೆ ಸಂಶಯವಿದ್ದು, ಆ ಬಗ್ಗೆಯೂ ತನಿಖೆ ಆಗಲಿದೆ. ದೆಹಲಿಯಿಂದ ತಜ್ಞ ವೈದ್ಯರಿಂದ ಈ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯದಲ್ಲೇ ಸುಶಾಂತ್ ಸಾವಿಗೆ ನಿಜವಾದ ಕಾರಣ ತಿಳಿದುಬರಲಿದೆ.

 

error: Content is protected !!