udupixpress
Home Trending ಬೆಳ್ತಂಗಡಿ: ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ನಿಂದ ವರ್ಚುವಲ್ ಮೂಲಕ ಗುರು ನಮನ...

ಬೆಳ್ತಂಗಡಿ: ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ನಿಂದ ವರ್ಚುವಲ್ ಮೂಲಕ ಗುರು ನಮನ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ “ಶ್ರೀ ಮಂಜುನಾಥ” ಸ್ಕೌಟ್ ಗೈಡ್ ದಳದಿಂದ “ಗುರು ನಮನ” ಕಾರ್ಯಕ್ರಮ ವನ್ನು ವರ್ಚುವಲ್ ಮೂಲಕ ಆಚರಿಸಲಾಯಿತು.

ಎಸ್ ಡಿಎಂ ನ ಕಬ್ ಬುಲ್ ಬುಲ್, ಸ್ಕೌಟ್ ಗೈಡ್ ವಿಧ್ಯಾರ್ಥಿಗಳು ಭಾಗವಹಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಚಲನಚಿತ್ರ ಚಿತ್ರ ಸಂಗೀತ ನಿರ್ದೇಶಕ ಗುರು ಬಾಯಾರ್ ಅವರು ಆಗಮಿಸಿದ್ದರು.
ಗೌರವ ಅತಿಥಿಯಾಗಿ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ಲಾಕ್ ಲೀಡರ್ ಎಲ್‌ .ಟಿ  ಸಂಧ್ಯಾ ಶೈಣೈ ಅವರು ಭಾಗವಹಿಸಿದ್ದರು.
ಮಕ್ಕಳು ತಾವೇ ರಚಿಸಿದ ಕವನ, ಹನಿಗವನ, ಮಿಮಿಕ್ರಿ ಇತ್ಯಾದಿ ಕಾರ್ಯಕ್ರಮ ನೀಡಿ ಕಾರ್ಯಕ್ರಮ ಯಶಸ್ವಿಗೂಳಿಸಿದರು.
ನಿರೂಪಣೆ ಹಾಗೂ ಸ್ವಾಗತವನ್ನ ಗೈಡ್ ವಿಧ್ಯಾರ್ಥಿ ಕವನ ವಿ ಸಾಲಿಯಾನ್ ನೆರವೇರಿಸಿದರು. ಗೈಡ್ ನ ಪ್ರತೀಕ್ಷ ಅವರು  ವಂದಿಸಿದರು.
ಎಸ್. ಡಿ.ಎಂ.ನ ಕ್ಯಾಪ್ಟನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಕಾರ್ಯಕ್ರಮ‌ ಸಂಘಟಿಸಿದರು.